ಅಂತರರಾಷ್ಟ್ರೀಯ

ಭಾರತೀಯ ವಿಮಾನಗಳ ಮೇಲಿನ ಸಂಚಾರ ನಿಷೇಧ ವಿಸ್ತರಿಸಿದ ಯುಎಇ

ಭಾರತೀಯ ವಿಮಾನಗಳ  ಮೇಲಿನ ಸಂಚಾರ   ನಿಷೇಧ ವಿಸ್ತರಿಸಿದ ಯುಎಇ

ದುಬೈ,  ಮೇ 31: ಕೊರೊನಾಸೋಂಕಿನ  ಕಾರಣ ಭಾರತದಿಂದ ಬರುವ ಪ್ರಯಾಣಿಕರ ವಿಮಾನಗಳ ಮೇಲಿನ ನಿಷೇಧವನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)  ಜೂನ್ 30ರವರೆಗೂ  ವಿಸ್ತರಿಸಿದೆ.

ಭಾರತದಲ್ಲಿ ಕರೋನ  ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಏಪ್ರಿಲ್ 25ರಂದು ವಿಮಾನ ಸಂಚಾರ  ನಿಷೇಧಿಸಲಾಗಿತ್ತು.  

ಯುಎಇ ವಾಯು ಸೇವಾ ಪೂರೈಕೆದಾರ ಎಮಿರೇಟ್ಸ್ ಭಾನುವಾರ ತನ್ನ ವೆಬ್ ಸೈಟ್ ನಲ್ಲಿ ಹೊರಡಿಸಿದ ಸಂದೇಶದಲ್ಲಿ ಭಾರತದಿಂದ ಬರುವ ಪ್ರಯಾಣಿಕರ ವಿಮಾನಗಳ ಮೇಲಿನ ನಿಷೇಧವನ್ನ ಜೂನ್ 30 ರವರೆಗೆ ವಿಸ್ತರಿಸಿದೆ ಎಂದು ತಿಳಿಸಿದೆ. 

ಸುದ್ದಿ ಓದಿ