ಪ್ರಾಥಮಿಕ ಸಹಕಾರಿ ಸಂಘದಿಂದ ದ್ವಿಚಕ್ರ ವಾಹನ ವಿತರಣೆ
ಮೂಡಲಗಿ10: ಪಟ್ಟಣದ ಶಿವಬೋಧರಂಗ ಪ್ರಾಥಮಿಕ ಸಹಕಾರಿ ಸಂಘದಿಂದ ದ್ವಿಚಕ್ರ ವಾಹನವನ್ನು ಬುಧವಾರ ವಿತರಿಸಲಾಯಿತು.
ಈ ಸಮಯದಲ್ಲಿ ಸಂಘದ ಅಧ್ಯಕ್ಷ ವಿಜಯಕುಮಾರ ಸೋನವಾಲಕರ, ಉಪಾಧ್ಯಕ್ಷ ಸದಾಶಿವ ತಳವಾರ, ನಿರ್ದೇಶಕರಾದ ಬಸವರಾಜ ಕುರಬಗಟ್ಟಿ, ವಿನೋಧ ಪಾಟೀಲ, ವಿರಣ್ಣ ಸೋನವಾಲಕರ, ಸತೀಶ ಲಂಕೆಪ್ಪನವರ, ಮಾರುತಿ ಶಾಬನ್ನವರ, ಸಂಘದ ಕಾರ್ಯ ನಿರ್ವಾಹಕ ಅಶೋಕ ಮಹಾರಡ್ಡಿ, ವಿಶಾಲ ಜಾಧವ, ಶ್ರೀಶೈಲ ನಂದಗಾವಮಠ ಇದ್ದರು.
ಪಾಂಡು ಮಹಾರಡ್ಡಿ, ಅಶೋಕ ಮಹಾರಡ್ಡಿ, ಮಂಜು ಕೋರ್ತಿ , ಹಣಮಂತ ಹಿರಡ್ಡಿ ಅವರಿಗೆ ದ್ವಿಚಕ್ರ ವಾಹನ ಕೀ ಯನ್ನು ಸಂಘದ ಅಧ್ಯಕ್ಷ ವಿಜಯಕುಮಾರ ಸೋನವಾಲಕರ, ಉಪಾಧ್ಯಕ್ಷ ಸದಾಶಿವ ತಳವಾರ ಮತ್ತು ನಿರ್ದೇಶಕರು ವಿತರಿಸಿದರು.