ಕಂಪ್ಯೂಟೇಶನಲ್ ಡ್ರಗ್ ಡಿಸೈನ್ ಮತ್ತು ಮಾಲಿಕ್ಯೂಲರ್ ಸಿಮ್ಯುಲೇಶನ್ ಎರಡು ದಿನಗಳ ಕಾರ್ಯಾಗಾರ
ವಿಜಯಪುರ 25: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸೆಂಟರ್ ಆಫ್ ಅಡ್ವಾನ್ಸ್ಡ ಮೆಡಿಕಲ್ ರಿಸರ್ಚ್ ಮತ್ತು ಸ್ಕೂಲ್ ಆಫ್ ಅಪ್ಲೈಡ್ ಸೈನ್ಸ್ ಅಂಡ್ ಟೆಕ್ನಾಲಜಿ ಸಹಯೋಗದಲ್ಲಿ ಸೋಮವಾರ ಮತ್ತು ಮಂಗಳವಾರ ಕಂಪ್ಯೂಟೇಶನಲ್ ಡ್ರಗ್ ಡಿಸೈನ್ ಮತ್ತು ಮಾಲಿಕ್ಯೂಲರ್ ಸಿಮ್ಯುಲೇಶನ್ ವಿಷಯ ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ನಡೆಯಿತು.
ಈ ಕಾರ್ಯಾಗಾರವನ್ನು ಬಿ.ಎಲ್.ಡಿ.ಇ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಭಾರಿ ಕುಲಪತಿ ಡಾ. ಅರುಣ ಚಂ. ಇನಾಮದಾರ, ಕುಲಸಚಿವ ಡಾ. ಆರ್. ವಿ. ಕುಲಕರ್ಣಿ, ಪ್ರಾಚಾರ್ಯ ಡಾ. ತೇಜಸ್ವಿನಿ ವಲ್ಲಭ, ಫ್ಯಾಕಲ್ಟಿ ಆಫ್ ಅಲೈಡ್ ಹೆಲ್ತ್ ಸಾಯಿನ್ಸ್ ಡೀನ್ ಡಾ. ಎಸ್. ವಿ. ಪಾಟೀಲ, ಪ್ರೊ. ಕುಶಾಲ ಕೆ. ದಾಸ, ಆರಿ್ಡ.ಸಿ.ಯ ನಿರ್ದೇಶಕ ಡಾ. ಎಂ. ಎಂ. ಪಾಟೀಲ, ಬಯೋಟೆಕ್ನಾಲಜಿ ಸಹಾಯಕ ಪ್ರಾಧ್ಯಾಪಕಿ ಮತ್ತು ಸೆಂಟರ್ ಆಫ್ ಅಡ್ವಾನ್ಸ್ಡ ಮೆಡಿಕಲ್ ರಿಸರ್ಚ್ ಸಹಾಯಕ ನಿರ್ದೇಶಕಿ ಡಾ. ಪ್ರಾಚಿ ಪಾರ್ವತೀಕರ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಡಾ. ಜಾಯ್ ಹೊಸಕೇರಿ ಅವರು ಮಲ್ಟಿ-ಓಮಿಕ್ಸ್ ಮತ್ತು ಸಿಮ್ಯುಲೇಶನ್ಸ್ ಇನ್ ಡ್ರಗ್ ಡಿಸ್ಕವರಿ ವಿಷಯದ ಕುರಿತು ಉಪನ್ಯಾಸ ಮಾಡಿದರು.
ಎರಡನೇ ದಿನ ಡಾ. ಶಿವಕುಮಾರ ದಕ್ಷಿಣಮೂರ್ತಿ ಅವರು ಓಷಧ ವಿನ್ಯಾಸದಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರದ ಬಗ್ಗೆ ಮಾತನಾಡಿದರು.
ಈ ಕಾರ್ಯಾಗಾರವು ಓಷಧ ಸಂಶೋಧನೆಯ ವೇಗಗೊಳಿಸುವ ನಿಟ್ಟಿನಲ್ಲಿ ಆಧುನಿಕ ಕಂಪ್ಯೂಟೇಶನಲ್ ವಿಧಾನಗಳ ಬಗ್ಗೆ ಬೆಳಕು ಚೆಲ್ಲಿತು. ನಾನಾ ಕಾಲೇಜುಗಳ ಪ್ರಾಧ್ಯಾಪಕರು ಮತ್ತು ಈ ಕಾರ್ಯಾಗಾರದಲ್ಲಿ ಪಾಲ್ಗೋಂಡಿದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 