ಅಫ್ಘಾನಿಸ್ತಾನ ಹಂಗಾಮಿ ಅಧ್ಯಕ್ಷ ಅಮ್ರುಲ್ಲಾ ಸಲೇಹ್ ಗೆ ಟ್ವೀಟರ್ ಶಾಕ್ ....!
ಕಾಬೂಲ್, ಆಗಸ್ಟ್ 20: ತಾವು ಅಫ್ಘಾನಿಸ್ತಾನದ ಹಂಗಾಮಿ ಅಧ್ಯಕ್ಷರೆಂದು ಸ್ವಯಂ ಘೋಷಿಸಿಕೊಂಡಿರುವ ಅಮರುಲ್ಲಾ ಸಲೇಹ್ ಅವರಿಗೆ ಟ್ವಿಟರ್ ಶಾಕ್ ನೀಡಿದೆ. ಅವರಿಗೆ ಸಂಬಂಧಿಸಿದ ಟ್ವಿಟರ್ ಖಾತೆಯನ್ನು ಗುರುವಾರ ಅಮಾನತ್ತುಗೊಳಿಸಿದೆ.
ತಾಲಿಬಾನ್ ಬಂಡಾಯದೊಂದಿಗೆ ಅಫ್ಘಾನಿಸ್ತಾನ್ ಅಧ್ಯಕ್ಷ ಅಶ್ರಫ್ ಘನಿ ದೇಶದಿಂದ ಪಲಾಯನ ಮಾಡಿದ್ದಾರೆ. ಈ ಕ್ರಮದಲ್ಲಿ ಅಮರುಲ್ಲಾ ತಮ್ಮನ್ನು ತಾವೇ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದರು.
ತಾನಿಬಾನಿಗಳಿಗೆ ತಾವು ಮಣಿಯುವುದಿಲ್ಲ, ಕೊನೆಯವರೆಗೂ ಅವರೊಂದಿಗೆ ಹೋರಾಟ ನಡೆಸುವುದಾಗಿ ಹೇಳಿದ್ದರು. ಇಂತಹ ಸನ್ನಿವೇಶದಲ್ಲಿ ಟ್ವೀಟರ್ ಅಮರುಲ್ಲಾ ಅವರ ಖಾತೆಯನ್ನು ರದ್ದುಪಡಿಸಿರುವುದು ಅಚ್ಚರಿ ಮೂಡಿಸಿದೆ. ನಿಯಮ ಹಾಗೂ ನಿಬಂಧನೆಗಳನ್ನು ಉಲ್ಲಂಘಿಸುವ ಖಾತೆಗಳನ್ನು ಸ್ಥಗಿತಗೊಳಿಸಲಾಗುವುದು. ಈ ಭಾಗವಾಗಿ ಅಮ್ರುಲ್ಲಾ ಅವರ ಟ್ವೀಟರ್ ಖಾತೆಯನ್ನೂ ಕೂಡ ಸ್ಥಗಿತಗೊಳಿಸಲಾಗಿದೆ ಎಂದು ಮೈಕ್ರೋ ಬ್ಲಾಗಿಂಗ್ ಸಂಸ್ಥೆ ಸ್ಪಷ್ಟಪಡಿಸಿದೆ.