ಅಂತರರಾಷ್ಟ್ರೀಯ

ಸಂಕಷ್ಟದಲ್ಲಿ ಟ್ರಂಪ್: ವಿಚಾರಣೆಗಾಗಿ ನ್ಯೂಯಾರ್ಕ್ ಕಚೇರಿಗೆ ಆಗಮಿಸಿದ ಮಾಜಿ ಅಧ್ಯಕ್ಷ!

ಸಂಕಷ್ಟದಲ್ಲಿ ಟ್ರಂಪ್: ವಿಚಾರಣೆಗಾಗಿ ನ್ಯೂಯಾರ್ಕ್ ಕಚೇರಿಗೆ ಆಗಮಿಸಿದ ಮಾಜಿ ಅಧ್ಯಕ್ಷ!

ವಾಷಿಂಗ್ಟನ್, ಆಗಸ್ಟ್ 10: ಕೌಟುಂಬಿಕ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನ್ಯೂಯಾರ್ಕ್ ನ ಮ್ಯಾನ್‌ಹ್ಯಾಟನ್‌ನಲ್ಲಿರುವ ಅಟಾರ್ನಿ ಜನರಲ್ ಕಚೇರಿಗೆ ಇಂದು ಆಗಮಿಸಿದ್ದಾರೆ.

ಟ್ರಂಪ್ ಕುಟುಂಬ ಮತ್ತು ಅವರ ಸಂಸ್ಥೆಗೆ ಸಂಬಂಧಿಸಿದ ಅವ್ಯವಹಾರಗಳ ಬಗ್ಗೆ ನ್ಯೂಯಾರ್ಕ್ ಅಟಾರ್ನಿ ಜನರಲ್ ಕಚೇರಿಯು ತನಿಖೆ ನಡೆಸುತ್ತಿದೆ. ಅವರ ಆಸ್ತಿಗಳ ತಪ್ಪು ಮೌಲ್ಯಮಾಪನ ಮತ್ತು ಸಾಲದಾತರು ಮತ್ತು ತೆರಿಗೆ ಅಧಿಕಾರಿಗಳನ್ನು ತಪ್ಪುದಾರಿಗೆಳೆಯುವ ಆರೋಪವನ್ನು ಟ್ರಂಪ್ ಎದುರಿಸುತ್ತಿದ್ದಾರೆ.

“ತಮ್ಮ ಮೇಲೆ ಹೊರಿಸಿರುವ ಆರೋಪವನ್ನು ನಿರಾಕರಿಸಿರುವ ಅವರು, ತಾವಾಗಲಿ ಅಥವಾ ತಮ್ಮ ಕಂಪನಿಯಾಗಲಿ ಯಾವುದೇ ರೀತಿಯ ತಪ್ಪನ್ನು ಮಾಡಿಲ್ಲ” ಎಂದು ಟ್ರಂಪ್ ಹೇಳಿದ್ದಾರೆ. “ತಮ್ಮ ವಿರುದ್ಧ ನಡೆಯುತ್ತಿರುವ ತನಿಖೆಯನ್ನು ರಾಜಕೀಯ ಪ್ರೇರಿತ” ಎಂದು ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ತಿಳಿಸಿದ್ದಾರೆ.

“ನಾನು ಹೊಂದಿರುವುದು ದೊಡ್ಡ ಕಂಪನಿಯಾಗಿದೆ. ನನ್ನ ಮೇಲೆ ಎಲ್ಲಾ ಕಡೆಯಿಂದ ದಾಳಿ ನಡೆಯುತ್ತಿದೆ” ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸುದ್ದಿ ಓದಿ