ಅಂತರರಾಷ್ಟ್ರೀಯ

ಮೋದಿ ಗುಣಗಾನ, ಭಾರತೀಯರ ಪೂರ್ಣ ಬೆಂಬಲ: ಟ್ರಂಪ್ ವಿಶ್ವಾಸ

ಮೋದಿ ಗುಣಗಾನ, ಭಾರತೀಯರ ಪೂರ್ಣ ಬೆಂಬಲ: ಟ್ರಂಪ್ ವಿಶ್ವಾಸ

ವಾಷಿಂಗ್ಟನ್, ಸೆಪ್ಟೆಂಬರ್ 5:  ಭಾರತದ ಪ್ರಧಾನಿ ಮೋದಿ  ಆತ್ಮೀಯ ಸ್ನೇಹಿತರಾಗಿದ್ದು  ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೆರಿಕದಲ್ಲಿರುವ ಭಾರತೀಯರು ನನಗೇ ಮತ ಹಾಕುತ್ತಾರೆ ಎಂಬ ಅದಮ್ಯ ವಿಶ್ವಾಸವನ್ನು  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿದ್ದಾರೆ. 

ಈ ವರ್ಷ ಫೆಬ್ರವರಿಯಲ್ಲಿ ಪತ್ನಿ ಮಲೆನಿಯಾ ಟ್ರಂಪ್ ಜೊತೆಗೆ ಭಾರತಕ್ಕೆ ಭೇಟಿ ನೀಡಿದ್ದರ ಬಗ್ಗೆ ಮಾತನಾಡಿದ ಟ್ರಂಪ್, ಭಾರತವು ಶ್ರೇಷ್ಠ ರಾಷ್ಟ್ರವಾಗಿದೆ, ಅಲ್ಲಿ ನಾವು ಉತ್ತಮ ಸಮಯವನ್ನು ಕಳೆದಿದ್ದೇವೆ ಎಂದು ಹಳೆಯ ನೆನಪು ಮೆಲುಕು ಹಾಕಿದರು. ಅಮೆರಿಕದಲ್ಲಿರುವ ಭಾರತೀಯರು ನನಗೆ ಮತ ಹಾಕುತ್ತಾರೆ ಎಂಬ ಬಗ್ಗೆ  ನನಗೆ ಯಾವುದೆ ಅಪನಂಬಿಕೆಯಲ್ಲ ಎಂದರು. 

ಮೋದಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಭಾರತೀಯರು  ಮತ್ತು ಶ್ರೇಷ್ಠ ವ್ಯಕ್ತಿಯನ್ನು ಪಡೆದಿದ್ದೀರಿ, ಹೌಡಿ- ಮೋದಿ ಸಮಾರಂಭದ ಕುರಿತು ಮಾತನಾಡಿ,  ಹ್ಯೂಸ್ಟನ್ ನಗರದಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದನ್ನು ಟ್ರಂಪ್ ಮತ್ತೊಮ್ಮೆ ಮೆಲಕು ಹಾಕಿ ಮೋದಿ ಬಗ್ಗೆ ಗುಣಗಾನ ಮಾಡಿದ್ದಾರೆ.    

ಅಮೆರಿಕದ ಚುನಾವಣೆಯಲ್ಲಿ ಭಾರತೀಯರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಪೆನ್ಸಿಲ್ವೇನಿಯಾ, ಓಹಿಯೋದಲ್ಲಿ ಒಂದೊಂದು ಮತ ಪಡೆಯಲು ಸಾಕಷ್ಟು ಸಾಹಸಪಡಬೇಕಿದೆ ಎಂದೂ ಟ್ರಂಪ್  ಹೇಳಿದ್ದಾರೆ. 

ಸುದ್ದಿ ಓದಿ