ಫುಟ್ ಹಗ್ಗವನ್ನು ಬಾಯಲ್ಲಿ ತೂತು ಮಾಡಿ ತೆಗೆದ ಪುರವಂತ ಸುರೇಶ ಸುಖಾಲಿ ಅವರಿಗೆ ಗೌರವ ಸನ್ಮಾನ

ಫುಟ್ ಹಗ್ಗವನ್ನು ಬಾಯಲ್ಲಿ ತೂತು ಮಾಡಿ ತೆಗೆದ ಪುರವಂತ ಸುರೇಶ ಸುಖಾಲಿ ಅವರಿಗೆ ಗೌರವ ಸನ್ಮಾನ Tribute to Suresh Sukhali, the veteran who removed a foot rope by piercing it through his mouth

ಪಾಲಬಾವಿ 31 :  ರಾಯಬಾಗ ತಾಲೂಕು ಹಿಡಕಲ್ಲ ಗ್ರಾಮದಲ್ಲಿ ಶರಣ ಸದ್ಭಕ್ತರಾದ ಅಮ್ಮಣ್ಣ ಒಡೆಯರ ತೋಟದಲ್ಲಿ ಪ್ರತಿವರ್ಷದಂತೆ ಈ ವರ್ಷವು ಶ್ರೀ ಶಿವಯೋಗಿ ಅಮೋಘಸಿದ್ದೇಶ್ವರ ಜಾತ್ರೆಯ ದಶಮಾನೋತ್ಸವವು ಹಾಗೂ ಲಕ್ಷದೀಪೋತ್ಸವ, "ಸಿದ್ಧರಭೇಟಿ" ಮಹೋತ್ಸವವು ಇತ್ತೀಚಿಗೆ ಕಳೆದ ಎರಡು ದಿನಗಳ ವರೆಗೆ ಜಾತ್ರಾ ಮಹೋತ್ಸವವು ಸಡಗರ ಸಂಭ್ರಮದಿಂದ ಜರುಗಿತು. ಉತ್ತರ ಕರ್ನಾಟಕದ ಹೆಸರಾಂತ ಗೊಡಚಿ ವೀರಭದ್ರೇಶ್ವರ ದೇವರ ಪುರಂದರಾದ ಸುರೇಶ ಸುಕಾಲಿಯವರು ಹರ ಗುರು ಚರಮೂರ್ತಿಗಳ ಮಹಾತ್ಮರ ಜೋಳಗೆ ತುಂಬುವ ಭಕ್ತಿಯ ಕಾರ್ಯಕ್ರಮದಲ್ಲಿ 3,501 ಫುಟ್ ಹಗ್ಗವನ್ನು ಬಾಯಿಯ ಕಪಾಳಕ್ಕೆ ತೂತು ಮಾಡಿಕೊಂಡು ತೆಗೆದಿದ್ದರಿಂದ ಬಬಲಾದಿ ಶಾಖಾಮಠ ಹಿಡಕಲ್ಲ ಪೂಜ್ಯ ಸದಾಶಿವ ಮುತ್ಯಾ ಮಹಾರಾಜರು, ಅಳಗವಾಡಿಯ ಅಧ್ಯಾತ್ಮ ಹಿರಿಯ ಜೀವಿ ವಿಠ್ಠಲ ಹಳ್ಳೂರ ದಂಪತಿಗಳು ಶಾಲುಹೊದಿಸಿ, ಫಲಪುಷ್ಪ ನೀಡಿ ಹೂಮಾಲೆ ಗೌರವಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಅಮೋಘಸಿದ್ದೇಶ್ವರ ದೇವಸ್ಥಾನದ ಗದಗಿ ಪೂಜಾರಿಗಳು ಮಾಳಸಿದ್ದ ಒಡೆಯರ, ಬೆಂಗಳೂರು ಸಿದ್ಧಾರೂಢ ಮಠದ ಸದ್ಗುರು ಸಿದ್ಧಾರೂಢ ಸ್ವಾಮೀಜಿ, ಹೊಸಪೇಟೆ ಕರಿ ಬಸವೇಶ್ವರ ಅಜ್ಜನ ಮಠದ ಗುರುಮಾತೆ ಅನುರಾಧೇಶ್ವರಿ ಅಮ್ಮನವರು, ಅಳಗವಾಡಿಯ ಆಧ್ಯಾತ್ಮಜೀವಿ ವಿಠ್ಠಲ ಹಳ್ಳೂರೆ, ನಿಂಗಪ್ಪ ಬೀಳಗಿ, ತುಕ್ಕರಾಮ ಸೂರಣ್ಣವರ, ನಿಂಗಪ್ಪ ಬೀಳಗಿ, ನಾಗಪ್ಪ ನಿಡಗುಂದಿ, ದೀಲೀಪ್ ನಾಯಿಕ, ಸುಭಾಷ ಸೂರಣ್ಣವರ, ಕರೆಪ್ಪ ಸೂರಣ್ಣವರ, ಪ್ರಧಾನಗುರು ಶಂಕರ ಕ್ಯಾಸ್ತಿ, ಭೀಮರಾವ್ ಘಂಟಿ, ಸಾಹಿತಿ ತುಕಾರಾಮ ಒಂಟಗೂಡಿ, ಲಕ್ಷ್ಮಣ ಪಾಟೀಲ, ಮಾಯಪ್ಪ ಕಂಠಿಕಾರ, ನರೇಂದ್ರ ಮುರಗೋಜಿ, ಚನ್ನಪ್ಪ ಅಂಗಡಿ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಪರಗೌಡ ದರೂರ, ಮಹಾಂತೇಶ ಕುಂಚನೂರ, ಸಿದ್ದಪ್ಪ ಕಂಕಣವಾಡಿ, ಸಿದ್ದಪ್ಪ ಮಡ್ರಿ, ಬಸವರಾಜ ಜಗದಾಳ, ವಿನಾಯಕ ಕಂಕಣವಾಡಿ, ಸಚಿನ್ ಒಡೆಯರ, ಸದಾಶಿವ ಗಲಗಲಿ, ಮುಖ್ಯಗುರು ಬೀರ​‍್ಪ ತಡಸಲೂರ, ಶಿಕ್ಷಕ ಧರ್ಮಣ್ಣ ಕೋಳಿ, ಲಕ್ಷ್ಮಣ ಕಂಕಣವಾಡಿ, ಮಲ್ಲಪ್ಪ ಢವಳೇಶ್ವರ, ಮಹಾದೇವ ಕಂಕಣವಾಡಿ, ವಿಠಲ ಮಗಡುಮ್ಮ ಇತರರು ಇದ್ದರು