ಅಂತರರಾಷ್ಟ್ರೀಯ

ಈಜಿಪ್ಟ್ ರೈಲುಗಳ ನಡುವೆ ಡಿಕ್ಕಿ: 32 ಮಂದಿ ಸಾವು, 84 ಜನರಿಗೆ ಗಾಯ

ಈಜಿಪ್ಟ್ ರೈಲುಗಳ ನಡುವೆ ಡಿಕ್ಕಿ: 32 ಮಂದಿ ಸಾವು, 84 ಜನರಿಗೆ ಗಾಯ

ಕೈರೋ, ಮಾರ್ಚ್ 26 : ಈಜಿಪ್ಟ್ ನ ದಕ್ಷಿಣ ಸೊಹಾಗ್ ಪ್ರಾಂತ್ಯದ ತಹ್ತಾ ನಗರದಲ್ಲಿ ಶುಕ್ರವಾರ ಎರಡು ರೈಲುಗಳು ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಕನಿಷ್ಠ 32 ಜನರು ಸಾವನ್ನಪ್ಪಿದ್ದು, ಇತರ 84 ಮಂದಿ ಗಾಯಗೊಂಡಿದ್ದಾರೆ.

ಸ್ಥಳೀಯ ಮಾಧ್ಯಮ ವರದಿಗಳಂತೆ,  ಈಜಿಪ್ಟ್ ನ ಅಪ್ಪರ್ ಸೊಹಾಗ್ ಪ್ರಾಂತ್ಯದಲ್ಲಿ ಅಪರಿಚಿತ ಪ್ರಯಾಣಿಕನೊಬ್ಬ  ಮೊದಲ ರೈಲಿನ ತುರ್ತು ವಾಲ್ವ್ ಅನ್ನು ಎಳೆದ ರೈಲು ನಿಂತಿದ್ದು, ಹಿಂದಿನಿಂದ ಬಂದ ಮತ್ತೊಂದು ರೈಲು ಡಿಕ್ಕಿ ಹೊಡೆದಿದೆ ಎಂದು ಅಲ್ಲಿನ  ಸಾರಿಗೆ ಸಚಿವಾಲಯ ತಿಳಿಸಿದೆ. 

ಘಟನೆಯ ಬಗ್ಗೆ ಸಾರಿಗೆ ಸಚಿವಾಲಯ ತನಿಖೆ ಆರಂಭಿಸಿದೆ ಎಂದು ವರದಿಗಳು ತಿಳಿಸಿವೆ. ರಕ್ಷಣಾ ಹಾಗೂ ಪರಿಹಾರ ಕಾರ್ಯಗಳು ಭರದಿಂದ ಸಾಗಿದ್ದು, ಆರೋಗ್ಯ ಸಚಿವ ಹಾಲಾ ಜಾಯೆದ್ ಅವರು ಪರಿಸ್ಥಿತಿಯ ಮೇಲ್ವಿಚಾರಣೆಗಾಗಿ ಸೊಹಾಗ್‌ಗೆ ತೆರಳಿದ್ದಾರೆ. 

  

ಸುದ್ದಿ ಓದಿ