ಹುಕ್ಕೇರಿ

ಕಠಿಣ ಪರೀಕ್ಷೆಗಳು, ಅವಿರತ ಸಾಧನೆಯಿಂದ ಉನ್ನತ ಸಾಧ್ಯ: ನ್ಯಾಯಾಧೀಶರಾದ ಆದಿತ್ಯ ಕಲಾಲ

ಕಠಿಣ ಪರೀಕ್ಷೆಗಳು, ಅವಿರತ ಸಾಧನೆಯಿಂದ ಉನ್ನತ ಸಾಧ್ಯ:  ನ್ಯಾಯಾಧೀಶರಾದ ಆದಿತ್ಯ ಕಲಾಲ

ಲೋಕದರ್ಶನ ವರದಿ 

ಹುಕ್ಕೇರಿ 18 :  "ಕಠಿಣ ಪರೀಕ್ಷೆಗಳು, ಅವಿರತ ಸಾಧನೆ ಮತ್ತು ರಾಷ್ಟ್ರ ನಿಷ್ಠೆಯಿಂದ ಮಾತ್ರ ಈ ಉನ್ನತ ಶಿಖರವನ್ನು ಏರಲು ಸಾಧ್ಯ" ಎಂದುಸಿವಿಲ್ ನ್ಯಾಯಾಧೀಶರಾದ ಆದಿತ್ಯ ಕಲಾಲ ಅವರು ಹೇಳಿದರು. ಇಲ್ಲಿನ ವಕೀಲರ ಸಂಘದ ಸಭಾಭವನದಲ್ಲಿ ನ್ಯಾಯವಾದಿಗಳ ಸಂಘ ಮತ್ತು ಅಭಿಮಾನಿಗಳ ವತಿಯಿಂದ, ಅರ್ಥವ್ ಶೆಟ್ಟಿ ಅವರು ರಾಷ್ಟ್ರೀಯ ರಕ್ಷಣಾ ಪ್ರಧಾಧಿಕಾರ ಪರೀಕ್ಷೆ ಮೂಲಕ ಆಯ್ಕೆಯಾಗಿ (ಚಿಕ್ಕವಸ್ಸಿನಲ್ಲಿ ಲೇಪ್ ನೇಟ್) ಕ್ಯಾಪ್ಟನ್ ಹುದ್ದೆಗೆ ಪದೋನ್ನತಿ ಹೊಂದಿದ ಪ್ರಯುಕ್ತ ಹಮ್ಮಿಕೊಂಡಿದ್ದ ಗೌರವ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಸೈನಿಕ ವೃತ್ತಿಯುತ್ಯಾಗ, ಸಮರೆ​‍್ಣ ಮತ್ತುದೇಶಭಕ್ತಿಯ ಸಂಕೇತವಾಗಿದೆ. ಕಿರಿಯ ಹುದ್ದೆಯಿಂದ ಈ ಗೌರವಾನ್ವಿತ ಸ್ಥಾನಕ್ಕೆ ಏರಿರುವುದು ಸರ್ವರಿಗೂ ಮಾದರಿಯಾಗಬೇಕು ಎಂದು ಅವರು ಶ್ಲಾಘಿಸಿದರು. 


ಸುದ್ದಿ ಓದಿ