ಮೂಡಲಗಿ

ಸತೀಶ ಜಾರಕಿಹೊಳಿ ಉಪ ಮುಖ್ಯಮಂತ್ರಿ ಸ್ಥಾನ ನೀಡಿ

ಸತೀಶ ಜಾರಕಿಹೊಳಿ ಉಪ ಮುಖ್ಯಮಂತ್ರಿ ಸ್ಥಾನ ನೀಡಿ

ಮೂಡಲಗಿ 19: ಕಾಂಗ್ರೆಸ್ ಪಕ್ಷದಲ್ಲಿ ಅಹಿಂದ ವರ್ಗದ ನಾಯಕ ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೆ ಕಾಂಗ್ರೆಸ್ ಸರಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗದ ಯುವ ಘಟಕದ ರಾಜ್ಯ ಪ್ರದಾನ ಕಾರ್ಯದರ್ಶಿ ಸುಭಾಸ ಪೂಜೇರಿ ಆಗ್ರಹಿಸಿದರು.  

 ಪಟ್ಟಣದ ಪತ್ರಿಕಾ ಕಚೇರಿಯಲ್ಲಿ ಗುರುವಾರದಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಹೆಚ್ಚು ಶಾಸಕರು ಆಯ್ಕೆಯಾಗಲು ರಾಜ್ಯಾದ್ಯಂತ ಪ್ರವಾಸ ಮಾಡಿದ  ಅಹಿಂದ ವರ್ಗದ ನಾಯಕ ಸತೀಶ ಜಾರಕಿಹೊಳಿ ಶ್ರಮ ಬಹಳಷ್ಟು ಇದೆ ಎಂದ ಅವರು ರಾಜ್ಯದಲ್ಲಿ ಉಪ್ಪಾರ ಸಮಾಜದ ಏಕೈಕ  ಶಾಸಕ ಪುಟ್ಟರಂಗಶೆಟ್ಟಿ ಅವರಿಗೂ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡಿಬೇಕು, ಅಪಾರ ಕಾರ್ಯಕರ್ತರೊಂದಿಗೆ  ಜೆಡಿಎಸ್ ಪಕ್ಷ ತೋರೆದು ಕಾಂಗ್ರೇಸ್ ಪಕ್ಷ ಸೇರಪಡೆಗೊಂಡು ಶಾಸಕರಾಗಿ ಆಯ್ಕೆಯಾದ ಮಧು ಬಂಗಾರೆಪ್ಪ ಅವರಿಗೂ ಸಚಿವ ಸ್ಥಾನ ನೀಡಬೇಕೆಂದು ಸುಭಾಸ ಪೂಜೇರಿ ಆಗ್ರಹಿಸಿದರು.  ಕೃಷ್ಣಪ್ಪ ಸೊನ್ನದ, ರಫೀಕ್ ತಾಂಬೋಳಿ, ಕರಿಬಸಯ್ಯ ಹಿರೇಮಠ ಉಪಸ್ಥಿತರಿದ್ದರು. 


ಸುದ್ದಿ ಓದಿ