ಧನುರ್ಮಾಸ ಆರಂಭ, ತಿರುಪತಿ ತಿಮ್ಮಪ್ಪನಿಗೆ ಸುಪ್ರಭಾತ ಬದಲಿಗೆ ತಿರುಪ್ಪಾವೈ ಪಠಣ...!
ತಿರುಮಲ,
ಡಿ ೧೬ ತಿರುಪತಿ - ತಿರುಮಲ ತಿಮ್ಮಪ್ಪನ
ಮಾಸೋತ್ಸವಗಳಲ್ಲಿ ಅತ್ಯಂತ ಪ್ರಮುಖ
ಎಂದು ಪರಿಗಣಿಸಲಾಗಿರುವ ಧನುರ್ಮಾಸ ಇಂದಿನಿಂದ
ಆರಂಭಗೊಂಡಿದೆ. ಇಂದು ಮಧ್ಯರಾತ್ರಿ ೧೧.೪೭ ಗಂಟೆಗೆ ಧನುರ್ಮಾಸ ಪ್ರಾರಂಭಗೊಳ್ಳುವ ಹಿನ್ನಲೆಯಲ್ಲಿ
೧೭ ರಿಂದ ತಿಮ್ಮಪ್ಪನಿಗೆ ನಿತ್ಯ ನಡೆಸಲಾಗುವ ನಡೆಸಲಾಗುವ
ಸುಪ್ರಭಾತ ಸೇವೆಗೆ ಬದಲಾಗಿ
ತಿರುಪ್ಪವಾವೈ ಪಠಿಸಲಿದ್ದಾರೆ. ೧೨ ಮಂದಿ ಆಳ್ವಾರ್ ಗಳಲ್ಲಿ
ಶ್ರೀ ಆಂಡಾಳ್ (ಗೋದಾ ದೇವಿ) ಕೂಡಾ ಒಬ್ಬರು.
ತಿಮ್ಮಪ್ಪನನ್ನ ಸ್ತುತಿಸಿ ಆಂಡಾಳ್
ರಚಿಸಿದ ೩೦ ಪ್ರವಚನಗಳ ಸಂಕಲನವನ್ನು
ತಿರುಪ್ಪಾವೈ ಎಂದು ಕರೆಯುತ್ತಾರೆ.ಆಳ್ವಾರ್
ದಿವ್ಯ ಪ್ರಬಂಧಗಳಲ್ಲಿ ತಿರುಪ್ಪಾವೈ ಒಂದು
ಭಾಗವಾಗಿದೆ. ತಿಂಗಳ ಕಾಲ ನಡೆಯಲಿರುವ ತಿರುಪ್ಪಾವೈ
ಪಾರಾಯಣದಲ್ಲಿ ದಿನವೂ ಒಬ್ಬ ಆರ್ಚಕರು ತಿರುಪ್ಪಾವೈ ಪಠಿಸಲಿದ್ದಾರೆ. ಸಾಮಾನ್ಯವಾಗಿ ಭೋಗ ಶ್ರೀನಿವಾಸ
ಮೂರ್ತಿ ಬದಲಿಗೆ ಶ್ರೀ ಕೃಷ್ಣ ಸ್ವಾಮಿಗೆ ಏಕಾಂತ ಸೇವೆ
ನಿರ್ವಹಿಸುತ್ತಾರೆ. ತಿರುಪ್ಪವಾಯಿ ಪಠಣ ಏಕಾಂತವಾಗಿ ನಡೆಯುತ್ತದೆ.
ಜೊತೆಗೆ ಈ ಮಾಸದಲ್ಲಿ ಬರುವ ವೈಕುಂಠ
ಏಕಾದಶಿ, ದ್ವಾದಶಿ ಪರ್ವ ದಿನಗಳಂದು ತಿಮ್ಮಪ್ಪನ ದೇವಾಲಯದಲ್ಲಿರುವ ವೈಕುಂಠ ದ್ವಾರಗಳನ್ನು ತೆರೆಯಲಿದ್ದಾರೆ.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 