ಗೋ ಸೇವೆಯೇ ನಿಜವಾದ ದೈವ ಸೇವೆ: ರವಿ ಜವಳಗಿ ಅಧಿಕ ಮಾಸದಲ್ಲಿ ಹಿಂದೂ ಕಾರ್ಯಕರ್ತರ ಮಾದರಿ ಕಾರ್ಯ

ಗೋ ಸೇವೆಯೇ ನಿಜವಾದ ದೈವ ಸೇವೆ: ರವಿ ಜವಳಗಿ ಅಧಿಕ ಮಾಸದಲ್ಲಿ ಹಿಂದೂ ಕಾರ್ಯಕರ್ತರ ಮಾದರಿ ಕಾರ್ಯ Cow service is true divine service: Model work of Hindu activists during the adhikama of Ravi Javala

ಲೋಕದರ್ಶನ ವರದಿ 

ಮಹಾಲಿಂಗಪುರ 02: ಅಧಿಕ ಮಾಸದ ನಿಮಿತ್ತ ನೂರಾರು ದೇವಸ್ಥಾನಗಳನ್ನು ಸಂದರ್ಶಿಸಿ ಪೂಜೆ ಸಲ್ಲಿಸುವ ಬದಲು, ಮೂಕ ಪ್ರಾಣಿಗಳ ಸೇವೆ ಮಾಡುವುದೇ ಶ್ರೇಷ್ಠ ಎಂದು ಹಿಂದೂ ಸಂಘಟನೆಗಳ ಮುಖಂಡ ರವಿ ಜವಳಗಿ ಹೇಳಿದರು. 

ನಗರದ ಶ್ರೀ ಗುರು ಮಹಾಲಿಂಗೇಶ್ವರ ಗೋಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಅಭಿಯಾನದಲ್ಲಿ ಹಲವಾರ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಗೋಶಾಲೆಯ ಆವರಣವನ್ನು ಸ್ವಚ್ಛಗೊಳಿಸಿ, ಗೋವುಗಳಿಗೆ ಮೇವು ತಿನಿಸಿದ್ದರು. ಭಕ್ತಿಯ ನೆಪದಲ್ಲಿ ಕೇವಲ ಆಚರಣೆಗಳಿಗೆ ಸೀಮಿತವಾಗದೆ, ಗೋವುಗಳ ಸಂರಕ್ಷಣೆ ಮತ್ತು ಅವುಗಳ ಪರಿಸರದ ಸ್ವಚ್ಛತೆಯೇ ನಿಜವಾದ ಪುಣ್ಯದ ಕೆಲಸವೆಂದು ರಾಘು ಗರಗಟಗಿ ಹೇಳಿದ್ದರು . 

"ಗೋವಿನಲ್ಲಿ ಸಕಲ ದೇವತೆಗಳು ನೆಲೆಸಿದ್ದಾರೆ ಎಂಬ ನಂಬಿಕೆಯಿದೆ.ಹೀಗಾಗಿ, ಗೋಶಾಲೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಿಜವಾದ ದೇವರ ಸೇವೆಗೆ ಸಮಾನ.ಅಧಿಕ ಮಾಸದ ಪವಿತ್ರ ದಿನಗಳಲ್ಲಿ ಇಂತಹ ನಿಷ್ಕಾಮ ಸೇವೆ ಮಾಡುವುದು ಆತ್ಮತೃಪ್ತಿ ನೀಡುತ್ತದೆ" ಎಂದು ತಿಳಿಸಿದ್ದಾರೆ. 

ಈ ಸ್ವಚ್ಛತಾ ಅಭಿಯಾನದಲ್ಲಿ ಹಲವು ಯುವ ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡಿದ್ದು, ಸ್ಥಳೀಯ ಸಾರ್ವಜನಿಕರು ಮತ್ತು ಗೋಶಾಲೆ ನಿರ್ವಾಹಕರು ಇವರ ಈ ಸಮಾಜಮುಖಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಇದೇ ಸಂದರ್ಭದಲ್ಲಿ ಆನಂದ ಶಿರಗುಪ್ಪಿ, ಸಚಿನ ಕಲಮಡಿ ಮಹಾಲಿಂಗ ಜಮಖಂಡಿ ,ಸಚಿನ ದಾನಿಗೊಂಡ ,ಅಕ್ಷಯ ಜಲ್ಲಿ , ಬಸವರಾಜ ದೊಡಮನಿ ,ಭರತ ಕದ್ದಿಮನಿ, ಸುನಿಲ ಕಡಪಟ್ಟಿ, ರಾಘು ಪವಾರ, ರಾಘು ಶಿರೋಳ , ರಾಘು ಕಪರಟ್ಟಿ, ರಾಘು ಡೊಂಬಳ, ಬಸು ಆಳಬಾಲ , ಶ್ರೀನಿಧಿ ಕುಲಕರ್ಣಿ, ಅನಿಲ ಕುವಾಶಿ, ಪ್ರಜ್ವಲ ಯಾದವಾಡ, ಮಹಾಲಿಂಗ ಕೊಡತಿ , ಪವನ ಟಿರ್ಕಿ, ವಿಶಾಲ ಪತ್ತಾರ , ಸೇರಿದಂತೆ ಇನ್ನು ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.