ಎರಡು ಡೋಸ್ ಲಸಿಕೆ ಪಡೆದವರು ಮಾಸ್ಕ್ ಹಾಕ ಬೇಕಿಲ್ಲ !!
ವಾಷಿಂಗ್ಟನ್ , ಮೇ 14 : ಅಮೆರಿಕದಲ್ಲಿ ಎರಡು ಡೋಸ್ ಲಸಿಕೆ ಪಡೆದುಕೊಂಡ ಜನರು ಬೀದಿಯಲ್ಲಿ, ಸಾರ್ವಜನಿಕವಾಗಿ ಒಡಾಡುವಾಗ ಮುಖಗವಸು ಧರಿಸಬೇಕಾಗಿಲ್ಲ ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಸಲಹೆ ಮಾಡಿದೆ.
ನವೀಕರಿಸಿದ ಮಾರ್ಗಸೂಚಿ ಜೀವನ ಸಾಮಾನ್ಯ ಸ್ಥಿತಿಗೆ ಬರಲು ಅನುವು ಮಾಡಿಕೊಡಲಿದೆ ಎಂದು ಸಂಸ್ಥೆ ಹೇಳಿದೆ.
ಎರಡು ಡೋಸ್ ಲಸಿಕೆ ಹಾಕಿದ ಜನರು ಹೆಚ್ಚಿನ ಸ್ಥಳಗಳಲ್ಲಿ ದೈಹಿಕವಾಗಿ ದೂರವಿರಬೇಕಾಗಿಲ್ಲ ಎಂದು ಸಿಡಿಸಿ ಇದೇ ವೇಳೆ ಹೇಳಿದ್ದು, ಈ ಮಾರ್ಗಸೂಚಿ, ಮಾರ್ಗದರ್ಶನ ಹೆಚ್ಚು ಅಮೆರಿಕನ್ನರನ್ನು ಲಸಿಕೆ ಪಡೆಯಲು ಪ್ರೇರೇಪಿಸಲಿದೆ ಎಂದೂ ಸಂಸ್ಥೆ ಆಶಯ ವ್ಯಕ್ತಪಡಿಸಿದೆ.