ಅಮೆರಿಕಾ, ಬ್ರಿಟನ್ ವೀಸಾ ಹೊಂದಿರುವ ಭಾರತೀಯರಿಗೆ ದುಬೈನಲ್ಲಿ ಹಲವು ಸೌಲಭ್ಯ
ದುಬೈ, ಆಗಸ್ಟ್ 22 : ಅಮೆರಿಕಾ, ಬ್ರಿಟನ್ ಹಾಗೂ ಐರೋಪ್ಯ ಒಕ್ಕೂಟದ ವೀಸಾಗಳನ್ನು ಹೊಂದಿರುವ ಭಾರತೀಯ ಪ್ರವಾಸಿಗರಿಗೆ ದುಬೈ ಕೆಲವು ಸೌಲಭ್ಯಗಳನ್ನು ಪ್ರಕಟಿಸಿದೆ.
ಅಮೆರಿಕಾ ನೀಡುವ ವಿಸಿಟರ್ ವೀಸಾ ಇಲ್ಲವೇ ಗ್ರೀನ್ ಕಾರ್ಡ್ ಹೊಂದಿರುವ ಭಾರತೀಯರು 14 ದಿನಗಳು ದುಬೈನಲ್ಲಿ ತಂಗಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದೆ.
ಅದೇ ರೀತಿ ಬ್ರಿಟನ್, ಐರೋಪ್ಯ ಒಕ್ಕೂಟ ನೀಡುವ ರೆಸಿಡೆನ್ಸಿ ವೀಸಾ ಹೊಂದಿರುವ ಭಾರತೀಯ ಪ್ರವಾಸಿಗರಿಗೂ ಇದೇ ಸೌಲಭ್ಯ ಲಭ್ಯವಿರುತ್ತದೆ ಎಂದು ದುಬೈ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಪ್ರವಾಸಿಗರು 48 ಅಥವಾ 72 ಗಂಟೆಗಳ ಮುಂಚಿತವಾಗಿ ಪಡೆದುಕೊಂಡ RT-PCR ಪರೀಕ್ಷೆಯ ನೆಗೆಟಿವ್ ಪ್ರಮಾಣಪತ್ರವನ್ನು ತೋರಿಸಬೇಕು. ಈ ಪತ್ರವನ್ನು ಸರ್ಕಾರಿ ಮಾನ್ಯತೆ ಹೊಂದಿದ ಪ್ರಯೋಗಾಲಯದಿಂದ ಪಡೆದುಕೊಂಡಿರಬೇಕು ಎಂದೂ ಸ್ಪಷ್ಟಪಡಿಸಲಾಗಿದೆ.