ವಿಜ್ಞಾನದಿಂದ ಯುವಕರಲ್ಲಿ ಸಂಶೋಧನಾ ಸ್ವಭಾವ ನಿರ್ಮಾಣ: ರಮೇಶ
ಮೂಡಲಗಿ 21: ವಿಜ್ಞಾನದಿಂದ ಇಂದಿನ ಯುವಕರಲ್ಲಿ ಸಂಶೋಧನಾ ಸ್ವಭಾವ ನಿರ್ಮಾಣವಾಗುತ್ತಿದೆ ಇಂದು ವಿದ್ಯಾರ್ಥಿಗಳಲ್ಲಿ ವಿಜ್ಞಾನ ಕ್ಷೇತ್ರದ ಅರಿವು ಮತ್ತು ತಿಳಿವಳಿಕೆ ಬೆಳಸುವ ಚಿಂತನೆಗಳು ಶಿಕ್ಷಣ ರಂಗದ ಮೂಲಕ ಸಾಕಾರಗೊಳ್ಳುವುದು ಉತ್ತಮ ಬೆಳವಣೆಗೆಯಾಗಿದೆ. ವಿಜ್ಞಾನ ಪ್ರಶ್ನೆಯಿಂದ ಉತ್ತರ ಪಡೆಯುವ ಮೂಲಕ ಅನ್ವೇಷಣೆ ಕ್ರಿಯೆಗಳು ಆರಂಭಗೊಂಡು ವಿದ್ಯಾರ್ಥಿಗಳಲ್ಲಿ ಜ್ಞಾನಾತ್ಮಕ ಕಲಿಕೆಗೆ ಪ್ರೋತ್ಸಾಹ ನೀಡುತ್ತೇವೆ ವಿಜ್ಞಾನದ ಮೂಲಕವೇ ತಾಂತ್ರಿಕತೆ ವೈಜ್ಞಾನಿಕ ಜಗತ್ತು ನಿರ್ಮಾಣಗೊಳ್ಳುತ್ತಿದ್ದು ಇದರಲ್ಲಿನ ಆವಿಸ್ಕಾರಗಳನ್ನು ನಮ್ಮ ಪೂರ್ವಜರು ಸಂಸ್ಕೃತಿ ಸಂಪ್ರದಾಯದ ಹೆಸರಿನಲ್ಲಿ ನಮಗೆ ಪರಿಚಯ ಮಾಡಿಸುವ ಪ್ರಯತ್ನ ಮಾಡಿರುತ್ತಾರೆಂದು ಬೇಟಗೇರಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಮೇಶ ಅಳಗುಂಡಿ ಹೇಳಿದರು.
ಸ್ಥಳೀಯ ಆರ್.ಡಿ.ಎಸ್. ಸಮಾಜ ಕಾರ್ಯ ಪದವಿ ಮಹಾವಿದ್ಯಾಲಯದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ತೇಜ್ಸ್ 2021 ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಸಿ.ವಿ.ರಾಮನ್, ಎಪಿಜೆ ಅಬ್ದುಲ್ಕಲಾಂ, ಮತ್ತು ಸರ್.ಎಂ.ವಿಶ್ವೇಶ್ವರಯ್ಯ ರಂತ ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳು ಭಾರತ ಕಂಡ ಅಮೂಲ್ಯ ರತ್ನಗಳಾಗಿದ್ದು ತಮ್ಮ ಚಿಂತನೆ, ಸಂಶೋಧನೆ ಹಾಗೂ ಅನ್ವೇಷಣೆಗಳಿಂದಲೇ ಜಗತ್ತು ನಮ್ಮ ಭಾರತದ ವಿಜ್ಞಾನ ಕ್ಷೇತ್ರದ ಕಡೆಗೆ ಗಮನ ನೀಡುವಂತಾ ಸಾಧನೆ ಮಾಡಿರುತ್ತಾರೆ ಅವರಂತೆ ನಮ್ಮ ಇಂದಿನ ವಿದ್ಯಾರ್ಥಿಗಳಲ್ಲಿ ಸಂಶೋಧನೆ ಮತ್ತು ಅನ್ವೇಷಣಾ ಪ್ರವೃತ್ತಿಗಳನ್ನು ಬೆಳಸುವಂತೆ ಪ್ರೋತ್ಸಾಹಿಸುವುದು ಅವಶ್ಯವಿದೆ ಎಂದರು.
ಅತಿಥಿ ಆರ್ಡಿಎಸ್. ಸಂಯೋಜಕ ಶಿವಾನಂದ ಸತ್ತಿಗೇರಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳುವ ದೂರದೃಷ್ಟಿಯ ಆತ್ಮಾವಲೋಕನ ಮಾಡಿಕೊಳ್ಳಬೇಕು ಅಲ್ಲದೇ ತಂದೆ ತಾಯಿ ಹಾಗೂ ಗುರುಗಳು ತಮ್ಮ ಮಕ್ಕಳು ಸಾಧಕರಂತೆ ಸಾಧನೆ ಮಾಡಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ಕಾಲೇಜು ಪ್ರಾಚಾರ್ಯ ಸತೀಶ ಗೋಟೂರ್ ವಹಿಸಿಕೊಂಡು ಮಾತನಾಡಿ ನಮ್ಮ ಪದವಿ ಮಹಾವಿದ್ಯಾಲಯದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ವಿಜ್ಞಾನ ಕ್ಷೇತ್ರದ ಎಲ್ಲ ಸೌಲರ್ಭಯಗಳನ್ನು ಒದಗಿಸಲಾಗಿದೆ ಅವುಗಳ ಪ್ರಯೋಜನ ಪಡೆದು ನಮ್ಮ ಕಾಲೇಜಿಗೆ ಮತ್ತು ನಿಮ್ಮ ತಂದೆತಾಯಿಗಳಿಗೆ ಹೆಮ್ಮೆ ತರುವ ಮಕ್ಕಳಾಗಿ ರೂಪಗೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಮೂಡಲಗಿ ಶ್ರೀಮಹಾಲಕ್ಷ್ಮೀ ಬ್ಯಾಂಕಿನ ಸಹಕಾರ್ಯದರ್ಶಿ ಹಣಮಂತ ದೇಸಾಯಿ ಉಪನ್ಯಾಸಕಿ ಶಾಹೀನ್ ಮದರಸ್ಯಾ, ರಾಜು ಪತ್ತಾರ ನಮೃತಾ ಘೋರ್ಪಡೆ, ಪ್ರಿಯಾಂಕಾ ಕಪಲಿ, ಸುಜಾತಾ ದಾನನ್ನವರ, ಉದ್ದವ್ವಾ ಮೇಚನ್ನವರ, ಗೀರಿಶ್ ಕೊಕಟನೂರ, ಅಕ್ಷತಾ ತುಪ್ಪದ ಮತ್ತಿತರರು ಹಾಜರಿದ್ದರು.
ಆನಂದ ಸಿಂಗೆ ಸ್ವಾಗತಿಸಿದರು ಜ್ಯೋತಿ ಜಾಡರ, ಅಮೀನಾ ದಬಾಡಿ ನಿರೂಪಿಸಿದರು ಲಕ್ಷ್ಮೀ ಹಡಪದ ವಂದಿಸಿದರು.