ಮೂಡಲಗಿ

ಪಂಚಮಸಾಲಿಗಳ ಒಗ್ಗಟ್ಟು ಮೆರೆದುದು ಶಾಘ್ಲನೀಯ: ಪಿರೋಜಿ

ಪಂಚಮಸಾಲಿಗಳ ಒಗ್ಗಟ್ಟು ಮೆರೆದುದು ಶಾಘ್ಲನೀಯ: ಪಿರೋಜಿ

ಮೂಡಲಗಿ 10: ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಮೂಡಲಗಿ ತಾಲೂಕಾ ಮತ್ತು  ಅರಭಾವಿ ಕ್ಷೇತ್ರದಲ್ಲಿ ಜರುಗಿದ ಪಂಚಮಸಾಲಿಗಳ 2ಎ ಮೀಸಲಾತಿ ಅಭಿಯಾನದಲ್ಲಿ  ಹೆಚ್ಚಿನ ಜನಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಅಭಿಯಾನವನ್ನು ಉತ್ತಮ ರೀತಿಯಲ್ಲಿ ಜರುಗಲು ಸಹಕರಿಸಿದ ಪಂಚಮಸಾಲಿಗಳ ಒಗ್ಗಟ್ಟನ್ನು ತೋರಿಸಿರುವುದು ಶಾಘ್ಲನೀಯವಾಗಿದೆ ಎಂದು ಪಂಚಮಸಾಲಿ ಸಂಘಟನೆಯ ಜಿಲ್ಲಾ ಕಾರ್ಯಧ್ಯಕ್ಷ ನಿಂಗಪ್ಪ ಪಿರೋಜಿ ಹೇಳಿದರು. 

ಸೋಮವಾರದಂದ ಪಟ್ಟಣದ ಪತ್ರಿಕಾ ಕಾರ್ಯಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜದ ಏಳಿಗೆಗಾಗಿ ಹಾಗೂ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ 2ಎ ಮೀಸಲಾತಿ ನೀಡಬೇಕೆನ್ನುವ ಉದ್ದೇಶದಿಂದ ಕೂಡಲಸಂಗಮ ಶ್ರೀಗಳು ಸಾಕಷ್ಟು ಹೋರಾಟಗಳನ್ನು ಮಾಡುತ್ತಿದ್ದು ಅವರ ಹೋರಾಟಕ್ಕೆ ಮೂಡಲಗಿ ತಾಲೂಕಿನ ಮತ್ತು ಅರಬಾವಿ ಮತ ಕ್ಷೇತ್ರದಲ್ಲಿನ ಪಂಚಮಸಾಲಿಗಳು ಉತ್ತಮ ಬೆಂಬಲ ನೀಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ ಎಂದರು. 

ಶ್ರೀಗಳು ತಾಲೂಕಿನ ಹಳ್ಳೂರ ಗ್ರಾಮದಿಂದ ಪ್ರಾರಂಭವಾದ ಅಭಿಯಾನವನ್ನು ಹಳ್ಳಿ ಹಳ್ಳಿಗಳ ಭೇಟಿಯ ಕಾರ್ಯಕ್ರಮದಿಂದ ಉತ್ತಮವಾದ ಪ್ರತಿಕ್ರೀಯೆ ಜರುಗಿದ್ದು, ಅರಭಾವಿ ಮತಕ್ಷೇತ್ರದಿಂದ ಪಂಚಮಸಾಲಿಗಳು ಒಗ್ಗಟ್ಟಾಗಿ ಮಕ್ಕಳ ಭವಿಷ್ಯದ ಹಿನ್ನೆಲೆ ಶ್ರೀಗಳ ಹೋರಾಟಕ್ಕೆ ನಾವು ಸಿದ್ಧ ಎಂದು ಹೇಳುವ ಮೂಲಕ ಶ್ರೀಗಳ ಕೈ ಮತ್ತಷ್ಟು ಬಲ ಪಡಿಸುವಂತ ಕಾರ್ಯಮಾಡಿದಾರೆ ಎಂದರು. 

ರಾಜ್ಯ ಸಾಮಾಜಿಕ ಜಾಲತಾಣ ಅಧ್ಯಕ್ಷ ದೀಪಕ್ ಜುಂಜರವಾಡ, ಮೂಡಲಗಿ ತಾಲೂಕಾಧ್ಯಕ್ಷ ಬಸವರಾಜ ಪಾಟೀಲ, ಯುವ ಘಟಕ ಅಧ್ಯಕ್ಷ ಸಂಗಮೇಶ ಕೌಜಲಗಿ, ಮೀಸಲಾತಿ ಹೋರಾಟ ಸಮಿತಿ ತಾಲೂಕಾ ಅಧ್ಯಕ್ಷ ಮಲ್ಲು ಗೋಡಿಗೌಡರ, ಹಣಮಂತ ಶಿವಾಪೂರ ಇದ್ದರು. 


ಸುದ್ದಿ ಓದಿ