ಇದ್ದಲಗಿ ಸಂತ್ರಸ್ತ ಕುಟುಂಬಗಳು ನಡೆಸುತ್ತಿರುವ ಹೋರಾಟ 26 ದಿನಕ್ಕೆ, ಸ್ಪಂದಿಸದ ಆಡಳಿತ ವ್ಯವಸ್ಥೆ
The struggle of the Iddalagi victim families has been going on for 26 days, but the administration h
ಲೋಕದರ್ಶನ ವರದಿ
ಮಹಾಂತೇಶ ತೋಪಲಕಟ್ಟಿ
ಹುನಗುಂದ 31 : ತಾಲೂಕಿನ ಇದ್ದಲಗಿ ಗ್ರಾಮದ ಮುಳುಗಡೆ ಸಂತ್ರಸ್ತ ಕುಟುಂಬಗಳು ತಮ್ಮ ಹಲವು ಬೇಡಿಕೆಗಳಿಗೆ ಒತ್ತಾಯಿಸಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಶನಿವಾರಕ್ಕೆ 25ನೇ ದಿನಕ್ಕೆ ಕಾಲಿಟ್ಟಿದ್ದರೂ, ಪರಿಹಾರ ಮಾತ್ರ ಸೂನ್ಯವಾಗಿದೆ. ಆಳುವ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಧರಣಿ ಸ್ಥಳಕ್ಕೆ ಬಂದು ಸ್ವಾಂತನ ಮಾತು, ಬೇಡಿಕೆ ಇಡೇರಿಸುವ ಬರವಸೆ ನೀಡಿದ್ದನ್ನು ಬಿಟ್ಟರೆ. ತುರ್ತು ಅಗತ್ಯವಾಗಿರುವ ಸಂತ್ರಸ್ತ ಕುಟುಂಬಗಳು ವಾಸಿಸುತ್ತಿರುವ ತಾತ್ಕಾಲಿಕ ತಗಡಿನ ಶೆಡ್ಡಗಳ ಮರು ನಿರ್ಮಾಣದಂತ ಸಣ್ಣ ಕೆಲಸವನ್ನು ಇಡೇರಿಸದಿರುವುದು ಇಲ್ಲಿನ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
2007 ರಲ್ಲಿ ಬಂದ ಮಲಪ್ರಭಾ ನದಿ ಪ್ರವಾಹಕ್ಕೆ ಇದ್ದಲಗಿ ಗ್ರಾಮ ಮೊದಲ ಬಾರಿಗೆ ಸಂಪೂರ್ಣ ಜಲಾವೃತಗೊಂಡಾಗ ಮನೆಯಲ್ಲಿ ಇದ್ದುದ್ದನ್ನು ಎಲ್ಲಾ ಬಿಟ್ಟು, ಉಟ್ಟ ಬಟ್ಟೆಯಲ್ಲಿ ಜಾನುವಾರುಗಳೊಂದಿಗೆ ಜನ ಸರ್ಕಾರ ನಿರ್ಮಿಸಿದ ಗಂಜಿ ಕೇಂದ್ರದಲ್ಲಿ ಬಂದು ಆಶ್ರಯ ಪಡೆದರು. ನೇರೆ ಇಳಿದ ನಂತರ ಮನೆಯಲ್ಲಿ ವಾಸಿಸಬೇಕೆಂದರೆ ಗ್ರಾಮದ ಶೇ.90 ರಷ್ಟು ಮನೆಗಳು ಕುಸಿದ ಬಿದ್ದ ಕಾರಣ ಅದೆ ವರ್ಷದಲ್ಲಿ ಗ್ರಾಮದ 350 ಕುಟುಂಬಗಳಿಗೆ ಸುರಕ್ಷಿತ ಸ್ಥಳದಲ್ಲಿ ಸರ್ಕಾರ ತಾತ್ಕಾಲಿಕ ತಗಡಿನ ಶೇಡ್‌ಗಳನ್ನು ನಿರ್ಮಿಸಿ ಕೊಟ್ಟಿತು.
ಶೆಡ್ ನಿರ್ಮಿಸಿ ಬರೊಬ್ಬರಿ ಎರಡು ದಶಕಗಳು ಕಳೆಯಲು ಬಂದಿದೆ. ಒಂದು ಬಾರಿಯೂ ಇವುಗಳ ದುರಸ್ಥಿ ಮಾಡದ ಕಾರಣ ಜೋಡಿಸಿದ ತಗಡುಗಳೆಲ್ಲ ತುಕ್ಕು ಹಿಡಿದು ಸೋರಲಾಂಬಿಸಿವೆ. ಕಟ್ಟಿಗೆ ಬಲಿಸಗಳು ಮುರಿದು ಬಿಳಲಾರಂಬಿಸಿವೆ. ಈ ಶೆಡ್‌ಗಳ ಮರು ನಿರ್ಮಾಣ ಮಾಡಿಕೊಡಬೇಕೆಂಬ ಸಂತ್ರಸ್ತರ ಬೇಡಿಕೆಗೆ ಆಡಳಿತವ್ಯವಸ್ಥೆ ಬಿಡಿಗಾಸಿನ ಕಿಮ್ಮತ್ತು ನೀಡುತ್ತಿಲ್ಲ. ಈಗಾಗಿ 350 ಕುಟುಂಬಗಳು ಜೀವ ಕೈಯಲ್ಲಿ ಹಿಡಿದು ಮುರುಕು ತಗಡಿನ ಕೆಳಗೆ ಜೀವನ ದೂಡುತ್ತಿದ್ದಾರೆ.
2007 ಪ್ರತಿವರ್ಷವೂ ನದಿ ಪ್ರವಾಹಕ್ಕೆ ತುತ್ತಾಗುತ್ತಿರುವ ಇದ್ದಲಗಿ ಗ್ರಾಮದ ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು 2011 ರಲ್ಲಿ ಸರ್ಕಾರ 254 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಅಭಿವೃದ್ದಿ ಪಡಿಸಲಾಗಿದೆ. ಬಹುತೇಕ ಕುಟುಂಬಗಳಿಗೆ ನಿವೇಶನದ ಹಕ್ಕು ಪತ್ರಗಳನ್ನು ನೀಡಲಾಗಿದೆ. ಪ್ರತಿ ಕುಟುಂಬಕ್ಕೆ 1 ಗುಂಟೆ ನಿವೇಶನ ನೀಡಿದ್ದು, ಕನಿಷ್ಠ 4 ಗುಂಟೆಯಷ್ಟು ನಿವೇಶನ ನೀಡಬೇಕೆಂಬುದು ಹೋರಾಟಗಾರರ ಬೇಡಿಕೆಯಾಗಿದೆ.
ನೀರು ವಿದ್ಯುತ್ ಇನ್ನೂಇಲ್ಲ:
ಪುನರ್ವಸತಿ ಸ್ಥಳದಲ್ಲಿ ರಸ್ತೆ, ಚರಂಡಿ, ಶಾಲೆ, ಕಾಲೇಜು ಸೇರಿ ಕೆಲವು ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಿದ್ದನ್ನು ಬಿಟ್ಟರೆ ಇದುವರೆಗೂ ನೀರು ಸರಬುರಾಜು ಮತ್ತು ವಿಧ್ಯುತ್ ಸಂಪರ್ಕ ಕಲ್ಪಿಸಿಲ್ಲ. ಈಗಾಗಿ ಜನ ಅಲ್ಲಿ ಹೊಗಿ ವಾಸಿಸಲು ಹಿಂದೆಟು ಹಾಕುತ್ತಿದ್ದಾರೆ. ಇನ್ನು ಬೆರಳೆಣಿಕೆಯಷ್ಟು ಕುಟುಂಬಗಳು ಇಲ್ಲಿ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದು, ಅವರು ಪಡುವ ಪಾಡು ಅಸ್ಟಿಷ್ಟಲ್ಲ. ಕಿಲೋಮೀಟರ ದೂರದಿಂದ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಾರೆ. ಆ ಸಂಪರ್ಕವೂ ಅಪಾಯಕಾರಿ ರೀತಿಯಲ್ಲಿದೆ. ನೀರಿನ ಸಂಪರ್ಕವೂ ಇಲ್ಲದ ಕಾರಣ ಪಕ್ಕದಲ್ಲಿಯೇ ಹರಿಯುವ ಕಾಲುವೆ ನೀರನ್ನು ಕುಡಿದು ಬದುಕುತ್ತಿದ್ದಾರೆ.
ಅನೈತಿಕ ಚಟುವಟಿಕೆ ತಾಣವಾಗುತ್ತಿರುವ ಕಟ್ಟಡಗಳು:
2019 ರಲ್ಲಿ ನಿರ್ಮಿಸಿದ ಪುನರ್ವಸತಿ ಸ್ಥಳದಲ್ಲಿ ಬಸ್‌ನಿಲ್ದಾಣ, ಪಶು ಆಸ್ಪತ್ರೆ, ಪ್ರಾಥಮಿಕ ಮತ್ತು ಪ್ರೌಡಶಾಲೆ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಈ ಎಲ್ಲ ಕಾಮಗಾರಿಗಳು ಸಂಪೂರ್ಣ ಕಳಪೆ ಗುಣಮಟ್ಟದಿಂದ ಕುಡಿರುವದರಿಂದ ಅವುಗಳು ಈಗಾಗಲೇ ಶಿಥಿಲಾವಸ್ಥೆ ತಲುಪಿ ಇವುಗಳಿಗಾಗಿ ಖರ್ಚು ಮಾಡಿದ ಕೋಟ್ಯಾಂತರ ರೂಪಾಯಿ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಪ್ರೌಡಶಾಲೆ ಹೊರತು ಪಡಿಸಿ ಇತರ ಕಟ್ಟಡಗಳು ಇದುವರೆಗೂ ಬಳಕೆಯಾಗದಿರುವುದರಿಂದ ನಿತ್ಯ ಅಲ್ಲಿ ನಡೆಯಬಾರದ ಅನೈತೀಕ ಚಟುವಟಿಕೆಗಳು ನಡೆಯುತ್ತಿವೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಪುನರ್ವಸತಿ ತುಂಬ ಮುಳ್ಳುಕಂಟಿ ಬೆಳೆದು ನಿಂತು ಜನ ಹೊಗಲು ಭಯಪಡುವ ವಾತಾವರಣ ಅಲ್ಲಿ ಸೃಷ್ಠಿಯಾಗಿದೆ. ಪ್ರತಿ ವರ್ಷ ಉಂಟಾಗುವ ಪ್ರವಾಹದಿಂದ ಸಂಕಷ್ಟ ಎದುರಿಸುತ್ತಿರುವ ಸಂತ್ರಸ್ತ ಕುಟುಂಬಗಳ ಬೇಡಿಕೆಗೆ ಸರ್ಕಾರ ಸ್ಪಂದಿಸುವುದೆ? ಕಾದು ನೋಡಬೇಕಿದೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 