ಕುಷ್ಟಗಿ

ಎಮ್‌ಇಲಿಯಾಸ್ ಸರಪಂಚ್ ಅವರ ಸೇವಾ ಅವಧಿ ಕಾರ್ಯ ಶ್ಲಾಘನೀಯ: ರೆಹಮಾನ್ ಸಾಬ್

ಎಮ್‌ಇಲಿಯಾಸ್ ಸರಪಂಚ್ ಅವರ ಸೇವಾ ಅವಧಿ ಕಾರ್ಯ ಶ್ಲಾಘನೀಯ: ರೆಹಮಾನ್ ಸಾಬ್

ಕುಷ್ಟಗಿ 31: ಸರಕಾರಿ ನೌಕರರು ವಯೋ ನಿವೃತ್ತಿ ಹೊಂದುವುದ ಸಹಜ ಪ್ರಕ್ರಿಯೆ ಆದರೇ ಪಿಆರ್‌ಇಡಿ ಕೊಪ್ಪಳ ವಿಭಾಗದ ಸಹಾಯಕ ಅಭಿಯಂತರ ಎಮ್‌ಇಲಿಯಾಸ್ ಸರಪಂಚ್ ಅವರು ಸೇವಾ ಅವಧಿಯಲ್ಲಿ ಮಾಡಿದ ಸಾಧನೆಗಳು ಜನಮಚ್ಚಿಗೆ ಪಡೆದಿವೆ ಎಂದು ಗುತ್ತಿಗೆದಾರರು ರೆಹಮಾನ್ ಸಾಬ್ ಬನ್ನಿಗೋಳ ಹೇಳಿದರು.  

ಕುಷ್ಟಗಿ ತಾಲೂಕಿನ ಗುತ್ತಿಗೆದಾರರ ಸಂಘದ ಸಂಯುಕ್ತಾಶ್ರಯದಲ್ಲಿ ರವಿವಾರ ಬೆಳಿಗ್ಗೆ ಇಲ್ಲಿನ ಸರ್ಕಿಟ್ ಹೌಸ್‌ನಲ್ಲಿ ಏರಿ​‍್ಡಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸರಕಾರದ ಅನೇಕ ಜನಪರ ಯೋಜನೆಗಳ  ಕಾಮಗಾರಿಗಳನ್ನು ಪಾರದರ್ಶಕತೆಯಿಂದ ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಯಶಸ್ವಿಯಾಗಿದ್ದಾರೆ. 2006ನೇ ಸಾಲಿನಲ್ಲಿ ಯಲಬುರ್ಗಾ ತಾಲೂಕು ಪಂಚಾಯಿತಿಗೆ ನೇಮಕಾತಿ ಹೊಂದಿ ಜು. 31ರಂದು ವಯೋ ನಿವೃತ್ತಿ ಹೊಂದಿದ್ದಾರೆ.  

ಇವರು ಮನರೇಗಾ ಯೋಜನೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸಿಸಿ ರಸ್ತೆ, ಚರಂಡಿ, ಸಮುದಾಯ ಭವನ ಸೇರಿದಂತೆ ಇನ್ನೂ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ತಮ್ಮ ಸೇವಾ ಅವಧಿಯಲ್ಲಿ ನಿರ್ವಹಿಸಿದ್ದಾರೆ.  

ಗುತ್ತಿಗೆದಾರರು ಹಾಗೂ ಸರಕಾರಿ ನೌಕರರ ನಡುವೆ ಉತ್ತಮ ಬಾಂಧವ್ಯ ಹಾಗೂ ಸಹಕಾರ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.  

ಗುತ್ತಿಗೆದಾರರು ಸಂಘದ ಅಧ್ಯಕ್ಷ ಶುಖರಾಜ ತಾಳಕೇರಿ ಮಾತನಾಡಿದ ಅವರು ಜೆ.ಇ ಎಂ. ಇಲಿಯಾಸ್ ಸರಪಂಚ್ ಅವರು ನಿವೃತ್ತಿ ಜೀವನ ಸುಖಕರವಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಎ.ಇ ತಾಜುದ್ದೀನ್, ಕ್ಯೂ.ಸಿ, ಖಾಜಾ ಹುಸೇನ್, ಅಡಿವೆಪ್ಪ ಕೋನಸಾಗರ, ಗುತ್ತಿಗೆದಾರರಾದ ರಮೇಶ್ ಕಾಪ್ಸೆ, ದುರ್ಗೇಶ ಮಡಿವಾಳ, ಮಲ್ಲಿಕಾರ್ಜುನ್ ಮಸೂತಿ, ಮುದುಕಪ್ಪ ಬಂಡೇರ, ರಾಜಾ ಸಾಬ್ ವಾಲೆಕಾರ್, ವಿವಿ ಲಿಂಗಶೆಟ್ಟರ್, ಬಸವರಾಜ ಕಾಮನೂರ, ಪ್ರಭು ಶಂಕರ್ ಗೌಡ ಪಾಟೀಲ್, ಇಮಾಮ್ ಸಾಬ್ ಜಂಗ್ಲಿ, ಬಸವರಾಜ ಶಾಖಾಪೂರ ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು. ಇತ್ತೀಚಿಗೆ ನಿವೃತ್ತಿ ಹೊಂದಿದ ದುರ್ಗಪ್ಪ ಹಿರೇಮನಿ, ಎಂ.ಡಿ ಶೌಕತ್, ಯಲ್ಲಪ್ಪ ಬಳೂಟಗಿ ಹಾಗೂ ಜೆ.ಇ ಎಮ್‌.ಇಲಿಯಾಸ್ ಸರಪಂಚ್ ಅವರಿಗೆ ಗುತ್ತಿಗೆದಾರ ಸಂಘದ ವತಿಯಿಂದ ಗೌರವ ಸಮರೆ​‍್ಣ ಮಾಡಿದರು. 


ಸುದ್ದಿ ಓದಿ