ಯೋಜನೆಗಳ ಅನೂಕಲತೆಗಳನ್ನು ಜನತೆಗೆ ತಲುಪಿಸುವಲ್ಲಿ ಎನ್‌ಜಿಓಗಳ ಪಾತ್ರ ಮಹತ್ವದ್ದು: ಶ್ರೀಕಾಂತ
The role of NGOs is important in conveying the benefits of projects to the people: Srikanth
ಬೆಳಗಾವಿ 11 : ಕೇಂದ್ರ ಮತ್ತು ರಾಜ್ಯ ಸರ್ಕಾರ ಸರಕಾರದಿಂದ ಬರುವ ಯೋಜನೆ ಗಳು ಮತ್ತು ಸಿಗುವ ಸೌಲಭ್ಯಗಳನ್ನು ಯೋಗ್ಯ ಫಲಾನುಭವಿಗಳಿಗೆ ತಲುಪಿಸುವಲ್ಲಿ ಎನ್‌ಜಿಓ (ಸರಕಾರೇತರ ಸಂಸ್ಥೆ) ಗಳ ಪಾತ್ರ ಮಹತ್ವದ್ದಾಗಿದೆ, ಆ ಕಾರ್ಯವನ್ನು ಜೈ ಜವಾನ್ ಜೈ ಕಿಸಾನ್ ಕೃಷಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಗೋಕಾಕ ನಗರ ಸೇರಿದಂತೆ ಹಾಗೂ ಬೆಳಗಾವಿ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಮಾಡುತ್ತಿದೆ ಅದಕ್ಕೆ ಸಂಸ್ಥೆಯ ಅಧ್ಯಕ್ಷ ಈಶ್ವರ ಭಾಗೋಜಿ ಹಾಗೂ ಕಾರ್ಯದರ್ಶಿ ಮಾಧವಿ ಪಾಟೀಲ ಅವರ ಕಾರ್ಯ ಶ್ಲಾಘನೀಯ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಮಹಾಜನ ಹೇಳಿದರು. ಅವರು ವಿವೇಕಾನಂದ ನಗರ ಗೋಕಾಕದ ಆಶಾಕಿರಣ ಪುನರ್ವಸತಿ ಕೇಂದ್ರದಲ್ಲಿ ಇತ್ತೀಚಿಗೆ ಜೈ ಜವಾನ್ ಜೈ ಕಿಸಾನ್ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ನಬಾಪುರ ಖನಗಾಂವ ಇವರು ಫಲಾನುಭವಿ ಮಹಿಳೆಯರಿಗೆ ಇರುವ ಯೋಜನೆಗಳು ಮತ್ತು ಸಿಗುವ ಸೌಲಭ್ಯಗಳ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಈಶ್ವರ ಭಾಗೋಜಿ ಮಾತನಾಡಿ ಬೆಳಗಾವಿ ಜಿಲ್ಲೆಯಲ್ಲಿ ಇರುವ ವಿಧವಾ ಮಹಿಳೆಯರು , ಅಂಗವಿಕಲರು, ನಿರ್ಗತಿಕರಿಗೆ ಅನುಕೂಲವಾಗಲಿ ಎಂದು ಆಶಾಕಿರಣ ಪುನರ್ವಸತಿ ಕೇಂದ್ರ ವನ್ನು ಗೋಕಾಕ ನಗರದ ವಿವೇಕಾನಂದ ನಗರದಲ್ಲಿ ಪ್ರಾರಂಭಿಸಲಾಗಿದೆ ಆಸಕ್ತರು ಈ ಕೇಂದ್ರದ ಲಾಭ ಪಡೆಯಲು ವಿನಂತಿ ಮಾಡಿಕೊಂಡರು. ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಮಾಧವಿ ಪಾಟೀಲ ಮಾತನಾಡಿ ಸರಕಾರದಿಂದ ಬರುವ ಮಾಶಾಸನ ತಿಂಗಳಿಗೆ 800 ಇದ್ದು ಅದನ್ನು 3000 ಗೆ ಏರಿಸುವಂತೆ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ನೂರಾರು ಮಹಿಳೆಯರೊಂದಿಗೆ ಬೆಂಗಳೂರಿಗೆ ಹೋಗಿ ಮನವಿ ಮನವಿ ಸಲ್ಲಿಸಲಾಗಿದೆ ಅದನ್ನು ಪರೀಶೀಲನೆ ಮಾಡಿ ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ ಎಂದು ಹೇಳಿ ಮಹಿಳೆಯರು ಸ್ವಾವಲಂಬಿ ಬದುಕು ಸಾಗಿಸಲು ಸಾಧ್ಯವಾದಷ್ಟು ಸಹಾಯ ಮಾಡುತ್ತದೆ ಎಂದರು.
ಗೋಕಾಕ ನಗರಸಭೆಯ ವತಿಯಿಂದ ಇರುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವ ಜೊತೆಗೆ ನಗರದಲ್ಲಿ ಸ್ವಚ್ಛತೆ ಕಾಪಾಡಲು ಸಹಕಾರ ನೀಡಬೇಕು ಎಂದು ಕಲಾವತಿ ದೇಶನೂರ ತಿಳಿಸಿದರು, ವೇದಿಕೆ ಮೇಲೆ ಶ್ರೀಮತಿ ಶೋಭಾ ಈಶ್ವರ ಭಾಗೋಜಿ, ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ವಿವಿಧ ಗ್ರಾಮೀಣ ಭಾಗಗಳ ಮಹಿಳೆಯರು ಭಾಗವಹಿಸಿ ವಿವಿಧ ಯೋಜನೆಗಳ ಮಾಹಿತಿ ಪಡೆದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 