ಪರಿಸರದ ಉಳಿವಿಗೆ ಸಾರ್ವಜನಿಕರು ಮುಂದಾಗಿ: ದೀಪಾ
ಲೋಕದರ್ಶನವರದಿ
ಹಾವೇರಿ 27: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಮಾನವನ ಬದುಕು ಉತ್ತಮ ಪರಿಸರದ ಮೇಲೆ ಅವಲಂಬಿತವಾಗಿದೆ ಪರಿಸರ ಉಳಿದರೆ ಮಾನವ ಕುಲ ಉಳಿದಂತೆ ಪರಿಸರದ ಉಳಿವಿಗೆ ಮಕ್ಕಳು ಹಾಗೂ ಸಾರ್ವಜನಿಕರು ಮುಂದಾಗಬೇಕು ನಿಮ್ಮ ಮನೆಗಳಲ್ಲಿ ಮನೆಗೊಂದು ಮರ ನೆಡುವ ಮೂಲಕ ಸುಂದರ ಹಸಿರು ಭರಿತ ವಾತಾವರಣ ನಿರ್ಮಾಣ ಮಾಡಬಹುದಾಗಿದೆ.ಪರಿಸರ ನಮ್ಮ ಉಸಿರಾಗಿದ್ದು, ಪರಿಸರ ಕಾಳಜಿ ಮಾಡಲು ಮಕ್ಕಳನ್ನು ಪ್ರೇರೆಪಿಸಿದರು ಎಂದು ಜಾಗೃತಿ ಜಾಥಾ ಉದ್ದೇಶಿಸಿ ಮಾತನಾಡಿದ ಶಾಲೆಯ ಕಾರ್ಯದರ್ಶಿ ದೀಪಾ ಬಿ.ಎಸ್ ಮಾತನಾಡಿದರು.
ಶಿವಾಜಿನಗರದ ವಿದ್ಯಾನಿಕೇತನ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಕ.ರಾ.ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಪರಿಸರ ಜಾಗೃತಿ ಜಾಥಾ ಜರುಗಿತು.
ಕ.ರಾ.ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಎಂ.ಎಸ್ ಮಹೇಶ್ವರಪ್ಪ ಮಾತನಾಡಿ ಅತಿಯಾದ ವಾಹನಗಳ ದಟ್ಟಣೆಯಿಂದ ಮಾಲಿನ್ಯ ಹೆಚ್ಚಾಗುತ್ತಿದೆ. ವಾಹನಗಳನ್ನು ತಪಾಸಣೆ ಮಾಡಿಸಿ ಹೊಗೆ ರಹಿತ ಸಂಚಾರದ ಬಗ್ಗೆ ಎಚ್ಚರವಹಿಸಬೇಕು. ಮಕ್ಕಳು ಪರಿಸರ ಉಳಿವಿಗೆ ಶಪಥ ಮಾಡುವಂತಾಗಬೇಕು ಎಂದು ಹೇಳಿದರು. ಶಾಲೆಯ ಆವರಣದಿಂದ ಪ್ರಾರಂಭವಾದ ಜಾಥಾ ರಾಜೇಂದ್ರ ನಗರ,ಜೆಪಿ ಸರ್ಕಲ್, ಸಿದ್ದಪ್ಪ ಸರ್ಕಲಿನಲ್ಲಿ ಸಂಚರಿಸಿ ಮಕ್ಕಳು ಜಾಥಾದಲ್ಲಿ ಪರಿಸರ ಉಳಿವಿಗೆ ಜಾಗೃತಿ ಘೋಷ್ಯ ವಾಕ್ಯಗಳನ್ನು ಕೂಗುತ್ತಾ ಪರಿಸರ ಪ್ರೇಮದಿಂದ ಅರ್ಥಪೂರ್ಣವಾಗಿ ಜಾಗೃತಿ ಜರುಗಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಯರಾದ ಅಕ್ಷತಾ ಸುರಪುರಮಠ,ಶಾಲಾ ಕಾರ್ಯವೃಂದ ಹಾಗೂ ವಿದ್ಯಾಥರ್ಿ ವೃಂದದವರು ಪಾಲ್ಗೊಂಡಿದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 