ಕೋವಿಡ್ ವಿರುದ್ಧ ಬೂಸ್ಟರ್ ಡೋಸ್ ಪಡೆದ ಫ್ರಾನ್ಸ್ ಅಧ್ಯಕ್ಷ
ಪ್ಯಾರಿಸ್, ನ. 29: ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಕೋವಿಡ್ -19 ಬೂಸ್ಟರ್ ಡೋಸ್ ಹಾಗೂ ಫ್ಲೂ ವಿರುದ್ಧ ಸೋಮವಾರ ಚುಚ್ಚುಮದ್ದು ಪಡೆದಿರುವುದಾಗಿ ತಿಳಿಸಿದ್ದಾರೆ.
ಆದಾಗ್ಯೂ, ಪುನಶ್ಚೇತನಕ್ಕೆ ಬಳಸಲಾಗಿರುವ ಲಸಿಕೆಯ ಬ್ರಾಂಡ್ ಬಗ್ಗೆ ಅವರು ಬಹಿರಂಗಪಡಿಸಿಲ್ಲ.
ಮ್ಯಾಕ್ರನ್ ಅವರು ಡಿಸೆಂಬರ್‌ನಲ್ಲಿ ಕೋವಿಡ್ -19 ಸೋಂಕಿಗೆ ಒಳಗಾಗಿದ್ದರು. ಬಳಿಕ ಮೇ 31ರಂದು ಲಸಿಕೆ ಪಡೆದಿದ್ದರು. ಆಗಲೂ ಸಹ ಯಾವ ಕಂಪನಿಯ ಲಸಿಕೆ ಪಡೆಯಲಾಗಿದೆ ಎಂಬುದನ್ನು ತಿಳಿಸಿರಲಿಲ್ಲ. "ಲಸಿಕೆ ಬೂಸ್ಟರ್ ಲಸಿಕೆ, ಜ್ವರ ವಿರುದ್ಧ ಚುರುಮದ್ದು” ಎಂದು ಮ್ಯಾಕ್ರನ್ ಸೋಮವಾರ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಮತ್ತೊಂದು ಪ್ರತ್ಯೇಕ ಟ್ವೀಟ್‌ನಲ್ಲಿ, ಲಸಿಕೆ ನೀಡಿಕೆಯ ವೇಗ ಹೆಚ್ಚಿಸುವಂತೆ ಸೂಚನೆ ನೀಡಿದ್ದಾರೆ.
ಫ್ರಾನ್ಸ್ ಶನಿವಾರ ಎಲ್ಲಾ ವಯಸ್ಕರಿಗೆ ಕೋವಿಡ್ -19 ಬೂಸ್ಟರ್ ಡೋಸ್ ಗಳನ್ನು ನೀಡಲು ಪ್ರಾರಂಭಿಸಿದೆ.