ಉತ್ತರ ಕರ್ನಾಟಕದ ಜನತೆ ನೀರಿಗಾಗಿ ಹೋರಾಟಕ್ಕೆ ಸಿದ್ಧರಾಗಿದ್ದಾರೆ; ಎಸ್.ಆರ್. ಪಾಟೀಲ
ಮುಧೋಳ : ಮೂರನೆ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನ ಸಹಿತ ನವಲಿ, ಮಹದಾಯಿ ಯೋಜನೆ ಪೂರ್ತಿಯಾದರೆ ರೈತರು ಆರ್ಥಿಕವಾಗಿ ಬಲಿಷ್ಠವಾಗತ್ತಾರೆ ರೈತರ ಕೈಯಲ್ಲಿ ಹಣ ಬಂದರೆ ಸಮಾಜದಲ್ಲಿ ಚಿತ್ರಣವೇ ಬದಲಾಗುತ್ತದೆ, ‘ಉತ್ತರ ಕರ್ನಾಟಕ ರಾಜ್ಯದಲ್ಲೇ ಗರಿಷ್ಟ ಪ್ರಮಾಣದಲ್ಲಿ ಜಲಸಂಪನ್ಮೂಲ ಹೊಂದಿದೆ. ಆದರೆ ನೀರಿನ ಬಳಕೆಗೆ ಜಾರಿ ಮಾಡಿದ ಯೋಜನೆಗಳ ಪ್ರಮಾಣ ಕನಿಷ್ಟ ಪ್ರಮಾಣದಲ್ಲಿ ಆಗಿದೆ ಉತ್ತರ ಕರ್ನಾಟಕ ನೀರಾವರಿ ಕ್ಷೇತ್ರದಲ್ಲಿ ಹಿಂದುಳಿದಿದೆ. ಇದಕ್ಕಾಗಿ ಹೋರಾಟ ಅಗತ್ಯವಿದೆ’ ಎಂದು ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ ಅಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು.
ನಗರದ ಪಾರ್ಕ ಹೊಟೆಲ್ ಆವರಣದಲ್ಲಿ ನಡೆದ ಮಹದಾಯಿ, ಕೃಷ್ಣ, ನವಲಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಬೀಳಗಿವರೆಗೆ ಆಯೋಜಿಸಿರುವ ಕೃಷ್ಣಾ-ಮಹದಾಯಿ-ನವಲಿ ಸಂಕಲ್ಪ ಯಾತ್ರೆಗಾಗಿ ಟ್ರ್ಯಾಕ್ಟರ್ ರಾ್ಯಲಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಈ ಸ್ವಾಭಿಮಾನಿ ಯಾತ್ರೆ ಕೇವಲ ಓರ್ವ ವ್ಯಕ್ತಿಯದಲ್ಲ ಇದರಲ್ಲಿ ಸಾಕಷ್ಟು ಜನರು ಇದ್ದಾರೆ ಈ ಹೋರಾಟ ಜಾತ್ಯತೀತವಾಗಿದೆ. ನೀರಾವರಿ ಯೋಜನೆಗಳನ್ನು ವಿಳಂಬ ಮಾಡದೆ ಜಾರಿಗೊಳಿಸಬೇಕು. ನೀರಿಗಾಗಿ ಜೀವನ ಮುಡುಪಿಟ್ಟ ರೈತರು ಸ್ವಾತಂತ್ರ್ಯ ಯೋಧರಿದ್ದಂತೆ. ಅವರಿಗೆ ಸರ್ಕಾರ ಪರಿಹಾರ ನೀಡಬೇಕು’ ಉತ್ತರ ಕರ್ನಾಟಕ ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದೆ. ಮೈಸೂರು, ಬೆಂಗಳೂರು ಸುತ್ತಲು ಅಭಿವೃದ್ಧಿ ಕಾರ್ಯಗಳು ಗಿರಕಿ ಹೊಡೆಯುತ್ತಿವೆ. ವಿವಿಧ ಯೋಜನೆಗಳನ್ನು ಜಾರಿ ಮಾಡಿದರೆ ಉತ್ತರ ಕರ್ನಾಟಕ ಎಲ್ಲ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಸಮೃದ್ಧ ಕರ್ನಾಟಕಕ್ಕಾಗಿ ಸ್ವಾಭಿಮಾನದ ಧ್ವನಿ ಮೊಳಗಬೇಕಿದೆ. ಮಹದಾಯಿ, ಕೃಷ್ಣ, ನವಲಿ ಯೋಜನೆ ಅನುಷ್ಠಾನಗೊಳಿಸಬೇಕು. ಇಲ್ಲದಿದ್ದರೆ ಸ್ವಾತಂತ್ರ್ಯ ಹೋರಾಟ ಮಾದರಿಯ ಮತ್ತೊಂದು ಹೋರಾಟಕ್ಕೆ ಸಿದ್ಧರಾಗಿ’ ನಮ್ಮದು ರಾಜಕೀಯ ಉದ್ದೇಶಕ್ಕಾಗಿ ಅಥವಾ ಪರ್ಯಾಯ ಶಕ್ತಿಯಾಗಿ ನಡೆ ಯುತ್ತಿರುವ ಹೋರಾಟವಲ್ಲ. ರೈತರ ಒಳಿತಿಗಾಗಿ ನಡೆಯುತ್ತಿರುವ ಪಕ್ಷಾತೀತ ಹೋರಾಟ. ನಾಲ್ಕು ದಶಕಗಳಿಂದ ಮಹದಾಯಿ, ಕೃಷ್ಣಾ ನೀರಾವರಿ ಯೋಜನೆ ಅನುಷ್ಠಾನಕ್ಕೆ ಹೋರಾಟ ನಡೆದಿದೆ.
ಆದರೂ, ಯಾವ ಸರ್ಕಾರಗಳೂ ಸ್ಪಂದಿಸಿಲ್ಲ. ಉತ್ತರ ಕರ್ನಾಟಕದ ಪ್ರತಿಯೊಬ್ಬ ಜನಪ್ರತಿನಿಧಿ ಆತ್ವವಿಮರ್ಶೆ ಮಾಡಿಕೊಳ್ಳಬೇಕಿದೆ ಈ ರಾಜ್ಯದಲ್ಲಿ ಸರ್ಕಾರ ಆಗಬೇಕಾದರೆ ಉತ್ತರ ಕರ್ನಾಟಕದ ಬೆಂಬಲ ಬೇಕೆ ಬೇಕು ಯಾರೇ ಮುಖ್ಯಮಂತ್ರಿಯಾದರೂ ಉತ್ತರ ಕರ್ನಾಟಕದ ಜನತೆಯ ಆಶೀರ್ವಾದ ಬೇಕು ಎಂದು ಹೇಳಿದರು.
ಇನ್ನು ಸರ್ ಎಂ.ವಿಶ್ವೇಶ್ವರಯ್ಯ ಸ್ವಾತಂತ್ರ್ಯ ಪೂರ್ವದಲ್ಲಿ ಕನ್ನಂಬಾಡಿ ಆನೆಕಟ್ಟು ಕಟ್ಟಿದ್ದರಿಂದ ಆ ಭಾಗದಲ್ಲಿ ನೀರಾವರಿ ಆಗಿದೆ ಆ ವೇಳೆ ಆರ್ಥಿಕವಾಗಿ ತೊಂದರೆಯಾದಾಗ ಚಿನ್ನ ಅಡವಿಟ್ಟು ಕಟ್ಟಿದ್ದು ಇತಿಹಾಸ ಈಗ ಅದು ಬದಲಾಗಿದೆ ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ರಾಜಕೀಯ ಹಿತಾಶಕ್ತಿಯ ಕೊರತೆಯಿದೆ ಕರ್ನಾಟಕ ಹಿಂದುಳಿದೆ ಇಲ್ಲಿಯವರೆಗೆ ಜನರು ಸುಮ್ಮನಿದ್ದು ಮುಂದೆ ಸುಮ್ಮನಿರಲಾರರು.ಇನ್ನು ಮುಧೋಳ ತಾಲ್ಲೂಕಿನಲ್ಲಿ ಪ್ರತಿಸಲ ನೆರೆ ಬಂದಾಗ ಸುಮಾರು 7 ಗ್ರಾಮಗಳು ಹಾಗೂ ಮುಧೋಳ ನಗರದ ಶೇ 20 ಬಾಗ ಮುಳುಗುತ್ತಿದ್ದು ಇದಕ್ಕೆ ಶಾಸ್ವತವಾಗಿ ಪರಿಹಾರ ನೀಡುವ ಯೋಜನೆಯ ಉದ್ದೇಶವೂ ಈ ಯಾತ್ರೆಯ ಅಜೆಂಡಾದಲ್ಲಿದೆ ಎಂದು ಹೇಳಿದರು
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಯಾನಂದ ಪಾಟೀಲ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಪಾಟೀಲ್,ಬೀಳಗಿ ಮಾಜಿ ಶಾಶಕ ಜೆ.ಟಿ.ಪಾಟೀಲ,ಕಾಂಗ್ರೆಸ್ ಮುಖಂಡ ಸತೀಶ ಬಂಡಿವಡ್ಡರ,ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದರೆಪ್ಪ ಸಾಂಗ್ಲೀಕರ,ಕಿಸಾನ್ ಸೆಲ್ ಜಿಲ್ಲಾ ಘಟಕದ ಅಧ್ಯಕ್ಷ ನಂದಕುಮಾರ ಪಾಟೀಲ, ಸೇರಿದಂತೆ ಇತರರು ಇದ್ದರು
ಸ್ವಾಭಿಮಾನಿ ಸಂಕಲ್ಪ ಯಾತ್ರೆಯ ತೆರೆದ ವಾಹನ, ಸಂಗೋಳ್ಳಿ ರಾಯಣ್ಣ ಸರ್ಕಲ್ ದಲ್ಲಿ ಮಾಲಾರೆ್ಣ ಮಾಡಿದ ನಂತರ ಸಕಲ ವಾಧ್ಯ ವೃಂದದೊಂದಿಗೆ ನಗರ ಪ್ರವೇಶ ಮಾಡಿತು ಬಾಗಲಕೋಟೆ, ವಿಜಯಪುರ ಜಿಲ್ಲೆಯ ಸಹಸ್ರಾರು ರೈತರು ಟ್ರ್ಯಾಕ್ಟರ್ಗಳಲ್ಲಿ ಭಾಗವಹಿಸಿದ್ದರು. ವಿಜಯಪುರ-ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳು ಚಲಿಸಿದವು.. ನೆರೆದಿದ್ದ ರೈತರಿಗೆ ಬೆಳಿಗ್ಗೆ ಉಪಾಹಾರ, ಎಲ್ಲೆಡೆ ಹಸಿರು ಶಾಲು, ಗಾಂಧಿ ಟೋಪಿ ಕಂಡು ಬಂದವು.