ಜಾಗತಿಕ ಕೋವಿಡ್ ಪ್ರಕರಣಗಳ ಸಂಖ್ಯೆ 16 ಕೋಟಿ 4 ಲಕ್ಷಕ್ಕೆ ಏರಿಕೆ : ಎರಡನೇ ಸ್ಥಾನದಲ್ಲಿ ಭಾರತ
ಬೀಜಿಂಗ್, ಮೇ 13: ವಿಶ್ವಾದ್ಯಂತ ಈವರೆಗೆ ಕೋವಿಡ್ ಸೋಂಕಿನ 16 ಕೋಟಿ 4 ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ ಎಂದು ಜಾನ್ಸ್ ಹಾಪ್‍ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಇಂಜನಿಯರಿಂಗ್ ಗುರುವಾರ ತಿಳಿಸಿದೆ.
ಅತಿ ಹೆಚ್ಚು ಭಾದಿತವಾದ ದೇಶಗಳಲ್ಲಿ ಈವರೆಗೆ ವರದಿಯಾದ ಪ್ರಕರಣಗಳ ಸಂಖ್ಯೆ ಕೆಳಕಂಡಂತಿದೆ:
ದೇಶ ಈವರೆಗೆ ದೃಢಪಟ್ಟ ಪ್ರಕರಣಗಳು
ಅಮೆರಿಕ 3,28,14,415
ಭಾರತ 2,37,03,665
ಬ್ರೆಜಿಲ್ 1,53,59,397
ಫ್ರಾನ್ಸ್ 58,82,882
ಟರ್ಕಿ 50,72,462
ರಷ್ಯಾ 48,49,044
ಬ್ರಿಟನ್ 44,57,742
ಇಟಲಿ 41,31,078
ಸ್ಪೇನ್ 35,92,751
ಸಾವಿನ ಸಂಖ್ಯೆಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿ ನಂತರದ ಸ್ಥಾನಗಳಲ್ಲಿ ಬ್ರೆಜಿಲ್ ಮತ್ತು ಭಾರತ ಇವೆ.