ಶ್ರೀ ಕೃಷ್ಣದೇವರಾಯ ವೇದಿಕೆಯಲ್ಲಿ ಝೇಂಕರಿಸಿದ ಸಂಗೀತ ನಿನಾದ
The music that resonated on the Sri Krishnadevaraya stage
ವಿಜಯನಗರ(ಹೊಸಪೇಟೆ) 15: ಹಂಪಿ ಉತ್ಸವದ ಅಂಗವಾಗಿ ಶ್ರೀಕೃಷ್ಣದೇವರಾಯ ವೇದಿಕೆ(ಎದುರು ಬಸವಣ್ಣ)ಯಲ್ಲಿ ಮೊದಲನೇಯ ದಿನವಾದ ಶುಕ್ರವಾರ ಸಾಂಸ್ಕೃತಿಕ ಲೋಕವೇ ಅನಾವರಣಗೊಂಡಿತ್ತು.
ವಿವಿಧ ಸಾಂಸ್ಕೃತಿಕ ಕಲಾತಂಡಗಳಿಂದ ಹೊರಹೊಮ್ಮಿದ ಸಂಗೀತ ನಿನಾದವು ಹಂಪಿಯ ಕಲ್ಲುಗಳಲ್ಲಿ ಝೇಂಕಾರಗೊಂಡಿತು.
ಯಲಬುರ್ಗಾದ ಹನುಮಪ್ಪ ದಾಸರ ತಂಡದವರು ‘ಮೂಕನಾಗಬೇಕು ಜಗದೋಳು ಭಾಗ್ಯ ನೀನಾಗಬೇಕು’ ಸಂಗೀತ ಗಾಯನ ಪ್ರಸ್ತುತ ಪಡಿಸುವ ಮೂಲಕ ಜಾನಪದ ಲೋಕವನ್ನೇ ಸೃಷ್ಟಿಸಿದರು.
ಮಿಂಚು ಸಿಜೆ ಅವರು, ಶಿವ ತಾಂಡವ ಗಾಯನಕ್ಕೆ ರೋಮಾಂಚನಗೊಳ್ಳುವ ಭರತನಾಟ್ಯ ನೃತ್ಯ ಪ್ರದರ್ಶಿಸಿದರು.ಹಾವೇರಿಯ ಗದಗಯ್ಯ ಹಿರೇಮಠ ತಂಡವು ಉಧೋ ಎಲ್ಲಮ್ಮ ತಾಯಿ, ಎಲ್ಲಿ ಕಾಣೆ-ಎಲ್ಲಿ ಕಾಣೆ ಯಲ್ಲಮ್ಮ ನಿನ್ನಂತವಳನ್ನ ಗಾಯನ ಸಾದರಪಡಿಸುವ ಮೂಲಕ ಜೋಗತಿ ನೃತ್ಯ ಪ್ರದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಹಿಂದುಸ್ತಾನಿ ಸಂಗೀತ, ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆದವು. ಸಹಾಯಕ ಆಯುಕ್ತ ಸುರೇಶ್ ಕುಮಾರ್ ಅವರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. ಭಾಗವಹಿಸಿದ್ದ ಕಲಾವಿದರೆಲ್ಲರಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 