ಕುವೆಂಪು ವಿಶ್ವಮಾನವ ಸಂದೇಶ ಇಂದಿಗೂ ಪ್ರಸ್ತುತ: ರೇಣುಕಾದೇವಿ
ಲೋಕದರ್ಶನ ವರದಿ
ಹಾವೇರಿ, 20: ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದ ಜೊತೆಗೆ ಭವಿಷ್ಯತ್ತಿನ ಪ್ರಜೆಗಳಾಗಿ ಹೊರಹೊಮ್ಮಬೇಕಾಗಿದೆ. ಕುವೆಂಪುರವರ ವಿಶ್ವಮಾನವ ಸಂದೇಶ ಇಂದಿಗೂ ಪ್ರಸ್ತುತವಾಗಿದ್ದು, ಅವುಗಳನ್ನು ಬದುಕಿನಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಂಡು ಮುನ್ನಡೆಯಬೇಕೆಂದು ಜಿಲ್ಲಾ ಪ್ರದಾನ ಸತ್ರ ನ್ಯಾಯಾಧೀಶರಾದ ಎಸ್. ಎಚ್. ರೇಣುಕಾದೇವಿ ಅಭಿಪ್ರಾಯಪಟ್ಟರು.
ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಪದವಿ ಪೂರ್ವ ಮಹಾವಿದ್ಯಾಲಯ ಆಯೋಜಿಸಿದ್ದ ಪ್ರಥಮ ಪಿಯು ವಿಜ್ಞಾನ ವಿದ್ಯಾರ್ಥಿಗಳು ಸ್ವಾಗತ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ವಿದ್ಯಾಥರ್ಿಗಳಾದವರು ಭಾರತದ ಸಂವಿಧಾನವನ್ನು ಗೌರವಿಸಿ ಅದರೊಳಗಿರುವ ಕಿಮ್ಮತ್ತಿನ ಅಂಶಗಳನ್ನು ಅಥರ್ೈಸಿಕೊಂಡು ಕಾನೂನಾತ್ಮಕವಾದ ಅರಿವು ಜಾಗೃತಗೊಳಿಸಿಕೊಳ್ಳಬೇಕು. ಈ ದೇಶದ ಇತಿಹಾಸದಲ್ಲಿ ಮಹತ್ವರವಾದ ಕಾನೂನುಗಳು ಜಾರಿಯಲ್ಲಿದ್ದು ಪ್ರತಿಯೊಂದು ಹಂತದ ಅರಿವು-ತಿಳಿವು ಅಗತ್ಯವಾಗಿದೆ.
ಕಲಿಕೆಯ ಜೊತೆಗೆ ಸಾಮಾಜಿಕ ಪ್ರಜ್ಞೆ ಮತ್ತು ಪರಿಸರ ಕಾಳಜಿ ಅಳವಡಿಸಿಕೊಳ್ಳಬೇಕು. ದೇಶ ಬದುಕಿದರೆ ನಾವುಗಳು ಉಳಿಯಲು ಸಾಧ್ಯ. ಈ ಹಿಂದೆ ಆಗಿ ಹೋಗಿರುವ ಮಹಾನ್ ವ್ಯಕ್ತಿಗಳ ಆದರ್ಶಯುತ ಬದುಕನ್ನು ಮತ್ತು ಅವರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ|| ಎಮ್. ಎಸ್. ಯರಗೊಪ್ಪ ಮಾತನಾಡಿ ನಮ್ಮ ಮಹಾವಿದ್ಯಾಲಯಕ್ಕೆ ನೂತನ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾಥರ್ಿಗಳು ಇಲ್ಲಿನ ಶಿಸ್ತು, ಗೌರವಬದ್ಧವಾಗಿ ನಡೆದುಕೊಳ್ಳಬೇಕು. ಶಿಸ್ತಿನ ಬದುಕು ಭವಿಷ್ಯತ್ತನ್ನು ನಿಮರ್ಿಸುವ ಹೆದ್ದಾರಿಯಾಗಬಲ್ಲದು. ಸಣ್ಣವರಿದ್ದಾಗಲೇ ಅರಿವು ಜಾಗೃತಗೊಳಿಸಿಕೊಂಡರೆ ಭವಿಷ್ಯತ್ತು ಸುಲಭವಾಗುತ್ತದೆ. ಆದ್ದರಿಂದ ಬಂಗಾರದ ಜೀವನದಂತಿರುವ ವಿದ್ಯಾರ್ಥಿ ಜೀವನವನ್ನು ಸುಂದರ ಆಭರಣ ಮಾಡಿಕೊಳ್ಳುವುದು ವಿದ್ಯಾರ್ಥಿಗಳ ಕೈಯಲ್ಲಿದೆ ಎಂದರು.
ಇದೇ ಸಂದರ್ಭದಲ್ಲಿ ದ್ವಿತೀಯ ಪಿಯು ವಿಭಾಗದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಅನುಷಾ ಕಾಮತ್, ಸ್ನೇಹಾ ಹಿರೇಮಠ, ಪ್ರವೀಣ ಹೆಗ್ಗಣ್ಣವರ ಇವರುಗಳನ್ನು ಸನ್ಮಾನಿಸಲಾಯಿತು. ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿಜ್ಞಾನ ವಿಭಾಗದ ವಿದ್ಯಾಥರ್ಿ-ವಿದ್ಯಾಥರ್ಿನಿಯರು ಪಾಲ್ಗೊಂಡಿದ್ದರು.
ಆರಂಭದಲ್ಲಿ ಸಹನಾ ಪ್ರಾಥರ್ಿಸಿದರು. ಪದವಿ ಪೂರ್ವ ಪ್ರಾಚಾರ್ಯ ಪ್ರೊ. ಜೆ. ಆರ್. ಶಿಂದೆ ಸ್ವಾಗತಿಸಿದರು. ಡಾ|| ಆರ್. ಎನ್. ಇನಾಮದಾರ ಪರಿಚಯಿಸಿದರು. ಸ್ನೇಹಾ ಕಡ್ಲಿ, ಬಸವಪ್ರಭು, ಕಲಾ ಅನಿಸಿಕೆ ಹಂಚಿಕೊಂಡರು. ಸೂರಜ್ ಪಾಟೀಲ್ ಮತ್ತು ಮೇಘನಾ ನಿರ್ವಹಿಸಿದರು. ಪ್ರೊ. ಎಸ್. ಜಿ. ಹುಣಸಿಕಟ್ಟಿಮಠ ವಂದಿಸಿದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 