ವಿಜಯಪುರ

ಗಾಂಧೀಜಿ, ಶಾಸ್ತ್ರಿ ಅವರ ಆದರ್ಶ, ತತ್ವ ಇಂದಿಗೂ ಪ್ರಸ್ತುತ: ಬಿರಾದಾರ

ಗಾಂಧೀಜಿ, ಶಾಸ್ತ್ರಿ ಅವರ ಆದರ್ಶ, ತತ್ವ ಇಂದಿಗೂ ಪ್ರಸ್ತುತ: ಬಿರಾದಾರ


ದೇವರಹಿಪ್ಪರಗಿ 02: ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ತಹಶೀಲ್ದಾರ್ ನಿಂಗಣ್ಣ ಬಿರಾದಾರ ಅವರ ನೇತೃತ್ವದಲ್ಲಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಗಾಂಧೀಜಿ ಹಾಗೂ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಇಬ್ಬರು ಮಹನೀಯರ ಆದರ್ಶ, ತತ್ವ ಇಂದಿಗೂ ಪ್ರಸ್ತುತವಾಗಿದೆ, ಅವರ ದೇಶಸೇವೆ, ಸತ್ಯ, ಅಹಿಂಸೆ, ಸರಳತೆ ಹಾಗೂ ‘ಜೈ ಜವಾನ್, ಜೈ ಕಿಸಾನ್‌’ ಸಂದೇಶಗಳನ್ನು ಸ್ಮರಿಸಲಾಯಿತು.ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಗೀರಿಜಾದೇವಿ ಸಜ್ಜನ, ಕಂದಾಯ ಶಿರಸ್ತೇದಾರ ಸುರೇಶ ಮ್ಯಾಗೇರಿ,ಕಂದಾಯ ನೀರೀಕ್ಷಕ ಶಿವಶಂಕರ ಜಾಧವ,ಕಾರ್ಯಾಲಯದ ಸಿಬ್ಬಂದಿಯವರಾದಕುಮಾರ ಅವರಾದಿ, ಶಿಲ್ಪಾ ಶಿಂಪಿ,ಚನ್ನಬಸು ಹೊಸಮನಿ,ಕು.ಭೀಷ್ಮ ಕೋಳಿ,ಕು.ಆಕಾಶ ಮೇತ್ರೆ,ವಿಠ್ಠಲ ವಾಲೀಕಾರ, ವಾಯ್ ಜಿ ಗಂಗಶೆಟ್ಟಿ, ಸಂತೋಷ ತಳವಾರ,ರಾಜು ಕಂಠಿ,ಕು. ಆನಂದ ವನಕ್ಯಾಳ, ಸಿದ್ದು ಜಂಬುಗೋಳ,ಸುರೇಶ ಮಣೂರ, ಪ್ರವಿಣ ಹೂಗಾರ,ಕು. ಅಶ್ವಥ ಘೊರೆ​‍್ಡ,ಗ್ರಾಮ ಆಡಳಿತ ಅಧಿಕಾರಿ ರಮಾನಂದ ಚಕ್ಕಡಿ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ