ಬ್ಯಾಡ್ಗಿ

ಅದ್ದೂರಿಯಾಗಿ ನಡೆದ ಹಿಂದೂ ಸಮ್ಮೇಳನದ ಶೋಭಾ ಯಾತ್ರೆ

ಅದ್ದೂರಿಯಾಗಿ ನಡೆದ ಹಿಂದೂ ಸಮ್ಮೇಳನದ ಶೋಭಾ ಯಾತ್ರೆ

ಬ್ಯಾಡಗಿ 08:  ಪಟ್ಟಣದಲ್ಲಿ ಇಂದು ವಿರಾಟ್ ಹಿಂದೂ ಸಮ್ಮೇಳನ ಬೃಹತ್ ಶೋಭಾ ಯಾತ್ರೆ ಅದ್ದೂರಿಯಾಗಿ ನಡೆಯಿತು ಇಂದು ಮಧ್ಯಾಹ್ನ 3 ಗಂಟೆಗೆ ನೆಹರು ನಗರದ ದಾನಮ್ಮ ದೇವಿ ದೇವಸ್ಥಾನದಿಂದ ಸಕಲ ವಾದ್ಯ ವೈಭವಗಳೊಂದಿಗೆ ಹೊರಟ ಮೆರವಣಿಗೆಯು ಸಾಯಂಕಾಲ 6.30 ಗಂಟೆಗೆ ತಾಲೂಕು ಕ್ರೀಡಾಂಗಣವನ್ನು ತಲುಪಿತು. ಮೆರವಣಿಗೆಯಲ್ಲಿ ಮಹಿಳೆಯರು ಡೊಳ್ಳು .ವೀರಗಾಸೆ ಹಲಗೆ ವಾದ್ಯ.ಲಂಬಾಣಿ ನೃತ್ಯ. ನೊಡುಗರ ಕಣ್ಣಸೆಳೆದವು ಮೆರವಣಿಗೆಯಲ್ಲಿ ಮಹಿಳೆಯರು ಹಾಗೂ ಅಪಾರ ಜನಸ್ತೋಮವು ನೆರೆದಿತ್ತು ಮತ್ತು ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಪಾನ್ಕ ವ್ಯವಸ್ಥೆ ಮಾಡಲಾಗಿತ್ತು ಮೆರವಣಿಗೆಯಲ್ಲಿ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ. ಮುಖಂಡ ಎಂ ಎಸ್ ಪಾಟೀಲ. ಶಿವಯೋಗಿ ಶಿರೂರ. ಸಮಿತಿಯ ಅಧ್ಯಕ್ಷ ಜಯಣ್ಣ ಶಿರೂರ್‌. ಸುನಿಲ್ ತೊಗಟವೀರ್‌. ಶಿವಯೋಗಿ ಗಡಾದ. ರಾಜು ಮೋರಗೆರಿ. ಹಾಗೂ ಪಟ್ಟಣದ ಅನೇಕ ಮುಖಂಡರು ಹಿರಿಯರು ಹಾಗೂ ಸಮಸ್ತ ಹಿಂದೂ ಸಮಾಜದ ಯುವಕರು ಹಿರಿಯರು  ಉಪಸ್ಥಿತರಿದ್ದರು. 


ಸುದ್ದಿ ಓದಿ