ಯೂಥ್ ಫಾರ್ ಸೇವಾ ಸಂಸ್ಥೆಯ ಕಾರ್ಯ ಶ್ಲಾಘನೀಯ: ದಿವಟೆ
ಹುಬ್ಬಳ್ಳಿ 26: ಸಮಾಜದಲ್ಲಿ ಅವಶ್ಯಕತೆ ಇರುವ ಬಡವರಿಗೆ ಸಹಾಯ ಹಸ್ತ ನೀಡುತ್ತಿರುವ ಯೂಥ್ ಫಾರ್ ಸೇವಾ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಉದ್ಯಮಿ ನಾಗರಾಜ ದಿವಟೆ ಹೇಳಿದರು.
ಅವರು ಯೂಥ್ ಫಾರ್ ಸೇವಾ ಸಂಸ್ಥೆಯ ಅಡಿಯಲ್ಲಿ ರೇಣುಕಾನಗರ, ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಮಕ್ಕಳಿಗೆ ಸ್ಕೂಲ್ ಬ್ಯಾಗ್, ನೋಟ್ ಬುಕ್, ಪೆನ್ ಮುಂತಾದ ಕಲಿಕಾ ಸಾಮಗ್ರಿಗಳನ್ನು ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವಕರಲ್ಲಿ ಸೇವಾ ಮನೋಭಾವ ಬೆಳೆಸುತ್ತದೆ, ಮಕ್ಕಳ ಕಲಿಕೆಗೆ ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದರು.
ಸಲಹಾ ಸಮಿತಿ ಸದಸ್ಯ ಸುರೇಶ ಸರದೇಶಪಾಂಡೆ ಮಾತನಾಡಿ ಸಂಸ್ಥೆಯು ಜನೇವರಿಯಲ್ಲಿ ಮಕ್ಕಳಿಗೆ ಚಿಗುರು ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅದು ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆಯಾಗಲಿದೆ ಎಂದರು.
ಸಲಹಾ ಸಮಿತಿ ಸದಸ್ಯ ಉಮೇಶ ವಿಭೂತಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದಶರ್ಿ, ಕನರ್ಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಬಿವಿಬಿ ಕಾಲೇಜಿನ ಗ್ರಂಥಪಾಲಕ ಶ್ರೀ ಸುರೇಶ ಡಿ. ಹೊರಕೇರಿ, ಕಿಮ್ಸನ ವೈದ್ಯರಾದ ಡಾ. ಸುನೀಲ ಗೋಕಲೆ, ಡಾ. ಮಂಜುನಾಥ ನೇಕಾರ, ಡಾ. ನಂದಿನಿ ಚಿಲುಗೋಡು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವಿದ್ಯಾಕೇಂದ್ರದ ಶ್ರೀಧರ ಜೋಶಿ, ಜ್ಯೋತಿ ಗುಡಿ, ಆರತಿ ಶಿವಶಿಂಪರ, ಪ್ರೇಮಲತಾ ಕಟ್ಟಿಮನಿ, ಜ್ಯೋತಿ ಎಂ.ಕೆ., ಶ್ವೇತಾ ಕುಲಕಣರ್ಿ, ಮುತ್ತುರಾಜ ಹುಲ್ಲಣ್ಣವರ, ಸಚಿನ್, ಸಿದ್ಧಲಿಂಗ, ಮಕ್ಕಳು ಹಾಗೂ ವಿದ್ಯಾಥರ್ಿ ಸ್ವಯಂಸೇವಕರಾದ ಕಿಮ್ಸನ ಮಿಥುನ ಕಂಪಲಿ, ಸುರಜ ಕರಡಿ, ಅಭಿಲಾಶ ರಾಥೋಡ, ಹೃಷಿಕೇಶ ಕುಲಕಣರ್ಿ, ಮೊಹ್ಮದ ಅಜೀಮ್, ರೇಹನ ಶೇಖ, ಸಾತ್ವಿಕ ಬಿರಾದಾರ, ನೀರಜ ನಾಯ್ಕ, ಸೋಹಬ್, ಗ್ಲೋಬಲ್ ಕಾಲೇಜಿನ ಅನ್ನಪೂರ್ಣ ಬಿಸನಾಳ, ಬೃಂದಾ ಕುಬಸದ, ಅಂಜಲಿ ಕೆ., ನಾಗವೇಣಿ ಎ., ಐಶ್ವರ್ಯ ಬಿ., ಮುಂತಾದವರು ಇದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 