ಟೋಕಿಯೊ ಒಲಿಂಪಿಕ್ ಸ್ಥಳದಲ್ಲಿ ಕೊರೋನಾ ಸೋಂಕಿನ ಮೊದಲ ಪ್ರಕರಣ
ಟೋಕೊಯೊ, ಜು.17 :- ಟೋಕಿಯೊದ ಒಲಿಂಪಿಕ್ ನಡೆಯುವ ಸ್ಥಳದಲ್ಲಿ ಕೊರೋನಾ ಸೋಂಕಿನ ಮೊದಲ ಪ್ರಕರಣ ವರದಿಯಾಗಿದೆ. ಸಂಘಟನಾ ಸಮಿತಿಯನ್ನು ಶನಿವಾರ ಈ ಮಾಹಿತಿಯನ್ನು ನೀಡಿದರು.
ಸೋಂಕಿತ ವ್ಯಕ್ತಿ ವಿದೇಶಿ ನಿಯೋಗವೊಂದರಲ್ಲಿ ಸದಸ್ಯನೆಂದು ನಂಬಲಾಗಿದೆ, ಆದರೂ ಅವರ ಪೌರತ್ವ ಮತ್ತು ಲಿಂಗದ ಬಗ್ಗೆ ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ.
ಏಳು ಉದ್ಯೋಗಿಗಳು, ಆರು ನಿಯೋಗ ಸದಸ್ಯರು ಮತ್ತು ಇಬ್ಬರು ಪತ್ರಕರ್ತರು ಸೇರಿದಂತೆ ಒಟ್ಟು 15 ಹೊಸ ಕರೋನಾ ಸೋಂಕಿನ ಪ್ರಕರಣ ಕಾಣಿಸಿಕೊಂಡಿದೆ ಎಂದು ಒಲಿಂಪಿಕ್ ಸಂಘಟನಾ ಸಮಿತಿ ವರದಿ ಮಾಡಿದೆ ಎಂದು ಕ್ಯೋಡೋ ಸುದ್ದಿ ಸಂಸ್ಥೆ ತಿಳಿಸಿದೆ. ಈ 15 ಸೋಂಕಿತ ವ್ಯಕ್ತಿಗಳಲ್ಲಿ ಎಂಟು ಮಂದಿ ವಿದೇಶಿಯರಾಗಿದ್ದರೆ, ಏಳು ಮಂದಿ ಜಪಾನ್ ವಾಸಿಗಳು. ಜುಲೈ 1 ರಿಂದ ಕ್ರೀಡಾಕೂಟಕ್ಕೆ ಸಂಬಂಧಿಸಿದ 45 ಜನರು ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ಸಂಘಟನಾ ಸಮಿತಿ ಖಚಿತಪಡಿಸಿದೆ.
ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು, ಜಪಾನ್ ಸರ್ಕಾರ ಸೋಮವಾರದಿಂದ ಟೋಕಿಯೊದಲ್ಲಿ ಮತ್ತೊಮ್ಮೆ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಇದು ಇಡೀ ಒಲಿಂಪಿಕ್ ಕ್ರೀಡಾಕೂಟ ನಡೆಯುವವರೆಗೆ ಅಂದರೆ ಆಗಸ್ಟ್ 22 ರವರೆಗೆ ಜಾರಿಯಲ್ಲಿರುತ್ತದೆ.