ಹಣಕ್ಕಾಗಿ ಪೀಡಿಸುತ್ತಿದ್ದ ಮದ್ಯವ್ಯಸನಿ ಪುತ್ರನನ್ನು ಕೊಚ್ವಿ ಹತ್ಯೆ ಮಾಡಿದ ತಂದೆ

ಹಣಕ್ಕಾಗಿ ಪೀಡಿಸುತ್ತಿದ್ದ ಮದ್ಯವ್ಯಸನಿ ಪುತ್ರನನ್ನು ಕೊಚ್ವಿ ಹತ್ಯೆ ಮಾಡಿದ ತಂದೆ

ಬೆಳಗಾವಿ : ಹಣ ನೀಡುವಂತೆ ಪೀಡಿಸುತ್ತಿದ್ದ ಪುತ್ರನನ್ನು ತಂದೆಯೋರ್ವ ಹರಿತಾದ ಆಯುಧದಿಂದ ಮಗನನ್ನೆ ಕೊಚ್ವಿ ಕೊಲೆ‌ ಮಾಡಿರುವ ಘಟನೆ ಜಿಲ್ಲೆಯ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಬಿ.ಕೆ ಗ್ರಾಮದಲ್ಲಿ ನಡೆದಿದೆ.
       ಈ ಘಟನೆಯಲ್ಲಿ ಉಗಾರ ಬಿ.ಕೆ ಗ್ರಾಮದ ಭರತೇಶ ಜಿನಪ್ಪ ಕಾಂಜಿ (30) ಕೊಲೆಯಾದ ದುರ್ಧೈವಿಯಾಗಿದ್ದಾನೆ. ಜಿನಪ್ಪ‌ ಕಾಂಜಿ (64) ಕೊಲೆ‌ಮಾಡಿದ ತಂದೆಯಾಗಿದ್ದಾನೆ. ಮಗ ಭರತೇಶ ವಿಪರಿತ ಕುಡಿತದ ಚಟ ಹೊಂದಿದ್ದನು ಎನ್ನಲಾಗಿದೆ. ಹಲವಾರು ಬಾರಿ ಹಣ ನೀಡುವಂತೆ ತಂದೆ ಜಿನಪ್ಪನನ್ನ ಮಗ ಭರತೇಶ ಕಾಡುತ್ತಿದ್ದ ಎನ್ನಲಾಗಿದೆ. ಹಲವಾರು ಬಾರಿ ಅಪ್ಪ ಹಾಗೂ ಮಗನ ನಡುವೆ ದುಡ್ಡಿಗಾಗಿ ಜಗಳ ನಡೆದಿತ್ತು ಎಂದು ತಿಳಿದು ಬಂದಿದೆ. ಮಂಗಳವಾರ ಮಧ್ಯಾಹ್ನ ಮತ್ತೆ ಕುಡಿಯಲು ಹಣ ಕೇಳಿದ ಮಗ ಭರತೇಶ. 

   ತಂದೆ ಜಿನಪ್ಪ ಹಣ ನೀಡದೆ ಇದ್ದಾಗ ಮಗ ಭರತೇಶ ಜಿನಪ್ಪನ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ತಂದೆ ಜಿನಪ್ಪ ಹರಿತಾದ ಆಯುಧದಿಂದ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಕಾಗವಾಡ ಪೋಲಿಸರು ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ. ಕಾಗವಾಡ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


ಸುದ್ದಿ ಓದಿ