ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ದೇಶದ ಸಾಮಾನ್ಯ ಜನರನ್ನು ನಿರಾಶೆಗೊಳಿಸಿದೆ
The budget presented by the central government has disappointed the common people of the country
ರಾಣೇಬೆನ್ನೂರು 02 : ಪ್ರಾಮಾಣಿಕವಾಗಿ ತೆರಿಗೆ ಕಟ್ಟುವ ಮಧ್ಯಮ ವರ್ಗಕ್ಕೆ ಯಾವುದೇ ನಿಜವಾದ ಆದಾಯ ತೆರಿಗೆ ರಿಯಾಯಿತಿ ಇಲ್ಲ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆಹಾರ, ಇಂಧನ, ಶಿಕ್ಷಣ ಮತ್ತು ಆರೋಗ್ಯ ವೆಚ್ಚಗಳಿಗೆ ಈ ಬಜೆಟ್ ಸ್ಪಂದಿಸಿಲ್ಲ.ಯುವಜನರಿಗೆ ಉದ್ಯೋಗ ಬೇಕಿತ್ತು, ಘೋಷಣೆಗಳಲ್ಲ. ಆದರೆ ಉದ್ಯೋಗ ಸೃಷ್ಟಿಗೆ ಸ್ಪಷ್ಟ ಮಾರ್ಗಸೂಚಿ ಇಲ್ಲ, ಹೊಸ ಉದ್ಯೋಗಾರ್ಥಿಗಳಿಗೆ ಭರವಸೆ ಇಲ್ಲ.ರೈತರಿಗೆ ಕನಿಷ್ಠ ಬೆಂಬಲ ಬೆಲೆ, ಉತ್ಪಾದನಾ ವೆಚ್ಚ, ಆದಾಯ ಭದ್ರತೆ ಕುರಿತು ಸ್ಪಷ್ಟತೆ ಬೇಕಿತ್ತು. ಆದರೆ ಈ ಬಜೆಟ್ನಲ್ಲಿ ಮೌನವಷ್ಟೇ ಕಂಡುಬಂದಿದೆ.ಇದು ಜನಕೇಂದ್ರಿತ ಬಜೆಟ್ ಅಲ್ಲ ಹಿ ಅಂಕಿ-ಅಂಶಗಳ ಬಜೆಟ್. ಸಮಸ್ಯೆಗಳಿಗೆ ಪರಿಹಾರ ನೀಡುವ ಬಜೆಟ್ ಆಗಬೇಕಿತ್ತು, ಆದರೆ ಇದು ಕೇವಲ ನೀರೀಕ್ಷೆಗಳ ಪಟ್ಟಿ ಆಗಿದೆ.ಈ ಬಜೆಟ್ ಸಾಮಾನ್ಯ ಭಾರತೀಯರ ನಂಬಿಕೆಯನ್ನು ಮರಳಿ ತರುವಲ್ಲಿ ವಿಫಲವಾಗಿದೆ.“ದೇಶಕ್ಕೆ ಶೀರ್ಷಿಕೆಗಾಗಿ ಬಜೆಟ್ ಬೇಡ ಶ್ರಿ ಮನೆಮನೆಗೆ ನಿಟ್ಟುಸಿರು ಕಡಿಮೆ ಮಾಡುವ ಬಜೆಟ್ ಬೇಕು.”- ಪ್ರಕಾಶ ಕೆ. ಕೋಳಿವಾಡ, ಶಾಸಕರು ವಿಧಾನಸಭಾ ಕ್ಷೇತ್ರ. ರಾಣೇಬೆನ್ನೂರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 