ಸಂಗೀತ ಕಲಾಕಾರ ಸಂಘದ ಕಲಾಸೇವೆ ಮರೆಯಲಾಗದ್ದು- ಶಾಸ್ತ್ರಿ
The artistic service of the Sangeet Kalakara Sangha will not be forgotten - Shastri
ಬೆಳಗಾವಿ 28- " ಬೆಳಗಾವಿಯ ಸಂಗೀತ ಕಲಾಕಾರ ಸಂಘ ಅಸಂಖ್ಯಾತ ಕಲಾವಿದರಿಗೆ ವೇದಿಕೆಯನ್ನು ನೀಡಿ ಅವರ ಪ್ರತಿಭೆ ಹೊರಬರಲು ಕಾರಣವಾಗಿದ್ದು ಸ್ಮರಣೀಯವಾಗಿದೆ" ಎಂದು ಹಿರಿಯ ಸಾಹಿತಿ ಪತ್ರಕರ್ತ ಎಲ್. ಎಸ್. ಶಾಸ್ತ್ರಿ ಅವರಿಲ್ಲಿ ಹೇಳಿದರು. ಸಂಗೀತ ಕಲಾಕಾರ ಸಂಘದ ವಾರ್ಷಿಕೋತ್ಸವದ ಅಂಗವಾಗಿ 23 ಮತ್ತು 24 ರಂದು ವರೇರಕರ ನಾಟ್ಯಸಂಘದ ಸಭಾಗೃಹದಲ್ಲಿ ಜರುಗಿದ ಸಂಗೀತ ಕಾರ್ಯಕ್ರಮ ಮತ್ತು ಸನ್ಮಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಶಾಸ್ತ್ರಿಯವರು, ಸಂಗೀತವೆಂದರೆ ದೇವರ ಆರಾಧನೆ ಇದ್ದಂತೆ. ಅದು ಕಸರತ್ತಲ್ಲ. ಗಾಯಕರು ಹಾಡಿದಾಗ ಕೇಳುಗರನ್ನು ಭಾವ ಸಮಾಧಿಗೆ ಒಯ್ಯುವಂತಿರಬೇಕು" ಎಂದು ನುಡಿದರು. ಶ್ರೇಷ್ಠ ಹಾರ್ಮೋನಿಯಂ ವಾದಕರಾದ ಡಾ. ಸುಧಾಂಶು ಕುಲಕರ್ಣಿಯವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಪಂ. ನಂದನ ನೆರ್ಲೆಕರ, ಕಾರ್ಯದರ್ಶಿ ಶಹಾಪುರಕರ, ಉಪಾಧ್ಯಕ್ಷ ಮುಕುಂದ ಗೋರೆ ಉಪಸ್ಥಿತರಿದ್ದರು. ಶ್ರೀಮತಿ ಅರ್ಚನಾ ತಾಮ್ಹಣಕರ ನಿರೂಪಣೆಗೈದರು.
ವಾರ್ಷಿಕೋತ್ಸವದ ಮೊದಲ ದಿನ ಸಂಜೆ 5.30 ಕ್ಕೆ ದೀಪಪ್ರಜ್ವಲನದೊಂದಿಗೆ ಉದ್ಘಾಟನೆಯಾದ ನಂತರ ಗುರುರಾಜ ಕುಲಕರ್ಣಿ ಅವರು ತಮ್ಮ ಗಾಯನದಲ್ಲಿ ರಾಗ ನಾರಾಯಣಿ , ದಾಸರ ಪದ ಪ್ರಸ್ತುತ ಪಡಿಸಿದರು. ಪಂ. ಸಂಜಯ ದೇಶಪಾಂಡೆ ಅವರು ಸಿತಾರ ವಾದನದಲ್ಲಿ ರಾಗ ಪೂರಿಯಾ ಕಲ್ಯಾಣ, ಭಜನ್ ನುಡಿಸಿದರು. ಪಂ. ಶ್ರೀಧರ್ ಕುಲಕರ್ಣಿ ಅವರು ಮಾರುಬಿಹಾಗ್, ಜೋಗ್, ಭೈರವಿ ರಾಗಗಳಲ್ಲಿ ಹಾಡಿದರು. ಎರಡನೆಯ ದಿನ ಆರಂಭದಲ್ಲಿ ಪಂ. ರಾಜಪ್ರಭು ಧೋತ್ರೆ ಅವರು ರಾಗ ಭಟಿಯಾರ, ಅಲೈಯಾ ಬಿಲಾವಲ್, ಠುಮ್ರಿ ಹಾಡಿದರು. ಕೊನೆಯಲ್ಲಿ ಡಾ. ಸುಧಾಂಶು ಕುಲಕರ್ಣಿ ಅವರು ಹಾರ್ಮೋನಿಯಂ ಸೋಲೋದಲ್ಲಿ ರಾಗ ಮಿಯಾಕಿ ತೋಡಿ, ತ್ರಿವೇಣಿ ಮಲ್ಹಾರ್( ಮೂರು ರಾಗಗಳ ಮಿಶ್ರಣ) ಮತ್ತು ಭೈರವಿ ಪ್ರಸ್ತುತಪಡಿಸಿದರು. ಹಾರ್ಮೋನಿಯಂ ಮತ್ತು ತಬಲಾಗಳಲ್ಲಿ ಮುಕುಂದ ಗೋರೆ, ರವೀಂದ್ರ ಮಾನೆ, ವಿಲಾಸ ಮೋಡಕ್, ಅಂಗದ ದೇಸಾಯಿ, ವೈಭವ ಗಾಡಗೀಳ, ಮತ್ತು ಪ್ರಮೊದಕುಮಾರ, ಗೋಪಾಲ ತಳವಳಕರ ಮೊದಲಾದವರು ಸಾಥ್ ನೀಡಿದರು. ಎರಡೂ ದಿನ ಸಂಗೀತ ಕಲಾವಿದರು, ಕಲಾರಸಿಕರು ದೊಡ್ಡ ಸಂಖ್ಯೆಯಲ್ಲಿ ನೆರೆದು ಪ್ರೋತ್ಸಾಹಿಸಿದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 