ಕೋವಿಡ್ -19 ಮೂಲ ಕುರಿತು ಹೆಚ್ಚಿನ ತನಿಖೆ ನಡೆಸುವ ಡಬ್ಲ್ಯುಎಚ್‌ಒ ಪ್ರಸ್ತಾವ ಚೀನಾದಿಂದ ತಿರಸ್ಕೃತ
ಬೀಜಿಂಗ್, ಜುಲೈ 22 : ಕರೋನಾ ವೈರಸ್‌ನ ಮೂಲವನ್ನು ಪತ್ತೆ ಮಾಡಲು ಚೀನಾದಲ್ಲಿ ಹೆಚ್ಚಿನ ತನಿಖೆ ನಡೆಸುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಸ್ತಾವವನ್ನು ಚೀನಾ ಸರ್ಕಾರ ಗುರುವಾರ ತಿರಸ್ಕರಿಸಿದೆ.
ಕೋವಿಡ್ ಮೂಲ ಕುರಿತು ಚೀನಾದಲ್ಲಿ ಎರಡನೇ ಹಂತದ ಅಧ್ಯಯನ ನಡೆಸುವ ಪ್ರಸ್ತಾಪ, ದರ್ಪ ಮತ್ತು ಸಾಮಾನ್ಯ ತಿಳಿವಳಿಕೆ ಕೊರತೆಯಿಂದ ಕೂಡಿದೆ ಎಂದು
ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗದ ಚೀನಾದ ಉಪನಿರ್ದೇಶಕ ಜೆಂಗ್ ಯಿಕ್ಸಿನ್ ಬಣ್ಣಿಸಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧ್ಯಯನವು ಡಬ್ಲ್ಯುಎಚ್‌ಒ-ಚೀನಾ ಒಳಗೊಂಡ ಜಂಟಿ ಅಧ್ಯಯನವಾಗಿರಬೇಕು. ಸದಸ್ಯ ರಾಷ್ಟ್ರಗಳೊಂದಿಗೆ ಸಮಾಲೋಚಿಸಿ ಡಬ್ಲ್ಯುಎಚ್ ಒ ಇನ್ನೂ ಅನೇಕ ದೇಶಗಳಲ್ಲಿ ವೈರಸ್ ಮೂಲ ಕುರಿತು ಅಧ್ಯಯನ ನಡೆಸಬೇಕು ಎಂದರು.
ಚೀನಾದಲ್ಲಿನ ಕರೋನವೈರಸ್ ಮೂಲ ಕುರಿತು ಎರಡನೇ ಹಂತದ ಅಧ್ಯಯನವನ್ನು ಡಬ್ಲ್ಯುಎಚ್‌ಒ ಪ್ರಸ್ತಾಪಿಸಿದೆ. ಈ ಅಧ್ಯಯನದಲ್ಲಿ ವುಹಾನ್‌ನಲ್ಲಿನ ಎಲ್ಲಾ ಪ್ರಯೋಗಾಲಯಗಳು ಮತ್ತು ಮಾರುಕಟ್ಟೆಗಳು ಸೇರಿವೆ.