ಅಫ್ಘನ್ ಬಿಕ್ಕಟ್ಟು; ಜಿ-7 ಗುಂಪಿನ ಸಭೆ ನಡೆಸಲು ಅಮೆರಿಕಾ- ಬ್ರಿಟನ್ ನಿರ್ಧಾರ
ಲಂಡನ್, ಆಗಸ್ಟ್ 18: ಅಫ್ಘಾನಿಸ್ತಾನದ ಪರಿಸ್ಥಿತಿ ಸಂಬಂಧ ಅಮೆರಿಕಾ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ಬೊರೀಸ್ ಜಾನ್ಸನ್ ಮಂಗಳವಾರ ಚರ್ಚೆ ನಡೆಸಿದ್ದು, ಬಿಕ್ಕಟ್ಟಿನ ಬಗ್ಗೆ ಸಮಾಲೋಚಿಸಲು ಜಿ- 7 ಗುಂಪಿನ ದೇಶಗಳ ವರ್ಚುವಲ್ ಸಭೆ ನಡೆಸಲಾಗುವುದು ಎಂದು ಶ್ವೇತ ಭವನ ಪ್ರಕಟಿಸಿದೆ.
ಅಫ್ಘಾನಿಸ್ತಾನ ಸಂಬಂಧ ಅನುಸರಿಸಬೇಕಾದ ಸಾಮಾನ್ಯ ಕಾರ್ಯತಂತ್ರ ಹಾಗೂ ಕ್ರಮಗಳನ್ನು ಚರ್ಚಿಸಲು ಮುಂದಿನ ವಾರ ವರ್ಚುವಲ್ ಜಿ- 7 ದೇಶಗಳ ಸಭೆ ನಡೆಸಲು ಇಬ್ಬರೂ ನಾಯಕರು ನಿರ್ಧರಿಸಿದ್ದಾರೆ ಎಂದು ಶ್ವೇತ ಭವನ ಹೇಳಿಕೆಯಲ್ಲಿ ತಿಳಿಸಿದೆ.
ಕಾಬೂಲ್ ನಗರದವನ್ನು ತಾಲಿಬಾನ್‌ಗಳು ಕಳೆದ ಭಾನುವಾರ ವಶಪಡಿಸಿಕೊಂಡ ನಂತರ ಜೋ ಬೈಡನ್ , ವಿದೇಶಿ ನಾಯಕರೊಬ್ಬರ ನಡುವಣ ಮೊದಲ ದೂರವಾಣಿ ಮಾತುಕತೆ ಇದಾಗಿದ್ದು, ತಾಲಿಬಾನಿಗಳ ಕ್ರಮ ಕಾಬೂಲ್ ವಿಮಾನ ನಿಲ್ದಾಣದಿಂದ ಅಮೆರಿಕಾ ಹಾಗೂ ಮೈತ್ರಿಕೂಟದ ಸಿಬ್ಬಂದಿ ವಾಪಸ್ಸು ಕರೆಸಿಕೊಳ್ಳಲು ತ್ವರಿತ ಕಾರ್ಯಾಚರಣೆಗೆ ಪ್ರೇರೇಪಿಸಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನಿಯರ ಹಠಾತ್ ಗೆಲುವು ಪಶ್ಚಿಮ ಯುರೋಪ್ ಸೇರಿದಂತೆ ವಿದೇಶಗಳಲ್ಲಿ ಆಶ್ರಯ ಪಡೆಯುವ ನಿರಾಶ್ರಿತರನ್ನು ಒಳಗೊಂಡು ದೊಡ್ಡ ಪ್ರಮಾಣದ ಮಾನವೀಯ ಬಿಕ್ಕಟ್ಟಿನ ಭೀತಿ ಸೃಷ್ಟಿಸಿದೆ.
ಸಾವಿರಾರು ಜನರನ್ನು ಸುರಕ್ಷಿತವಾಗಿ ವಿಮಾನದಲ್ಲಿ ಸ್ಥಳಾಂತರಗೊಳಿಸಿವ ಸಿದ್ಧತೆಯ ಕೈಗೊಳ್ಳದಿರುವುದಕ್ಕೆ ಜೋ ಬೈಡನ್ ವ್ಯಾಪಕವಾಗಿ ಟೀಕೆಗೊಳಗಾಗಿದ್ದಾರೆ. - ಮಿತ್ರರಾಷ್ಟ್ರಗಳು ಮತ್ತು ಪ್ರಜಾಪ್ರಭುತ್ವದ ಪಾಲುದಾರರ ನಡುವೆ ಮುಂದುವರಿದ ನಿಕಟ ಸಮನ್ವಯದ ಅಗತ್ಯವನ್ನು ಸಭೆಯಲ್ಲಿ ಜಾನ್ಸನ್ ಚರ್ಚಿಸಿದರು" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
"ಜಾಗತಿಕ ಸಮುದಾಯದಿಂದ ಹೆಚ್ಚಿನ ಮಾನವೀಯ ನೆರವು. ನಿರಾಶ್ರಿತರಿಗೆ ಮತ್ತು ಅಫ್ಘಾನಿಸ್ತಾನದ ಇತರ ದುರ್ಬಲ ವರ್ಗಗಳಿಗೆ ಬೆಂಬಲ ನೀಡುವ ಮಾರ್ಗಗಳು" ಮತ್ತಿತರ ಅಂಶಗಳು ಜಿ- 7 ಸಭೆಯಲ್ಲಿ ಪ್ರಸ್ತಾಪವಾಗುವ ಸಾಧ್ಯತೆಗಳಿವೆ.