ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ಸಮರ ಅಂತ್ಯಗೊಂಡಿದೆ ; ತಾಲಿಬಾನ್
ಮಾಸ್ಕೋ, ಆಗಸ್ಟ್ 16: ಅಫ್ಘಾನಿಸ್ತಾನದಲ್ಲಿನ ಸಮರ ಅಂತ್ಯಗೊಂಡಿದೆ ಎಂದು ತಾಲಿಬಾನ್ ರಾಜಕೀಯ ಕಾರ್ಯಾಲಯದ ವಕ್ತಾರ ಮೊಹಮದ್ ನಯೀಂ ಘೋಷಿಸಿದ್ದಾರೆ.
20 ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ಆರಂಭಗೊಂಡಿದ್ದ ಈ ಸಮರಕ್ಕೆ ನಾವು ಅಂತ್ಯ ಹಾಡಿದ್ದೇವೆ ಎಂದು ನಯೀಂ ಅಲ್ ಝಜೀರಾ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ಜನರು ಹಾಗೂ ವಿದೇಶಗಳ ರಾಯಭಾರಿಗಳ ಸುರಕ್ಷತೆಯನ್ನು ತಾಲಿಬಾನ್ ಖಾತರಿಪಡಿಸುತ್ತದೆ ಎಂದು ಭರವಸೆ ನೀಡಿರುವ ಅವರು, ಎಲ್ಲ ರಾಜಕೀಯ ಶಕ್ತಿಗಳೊಂದಿಗೆ ಸಂವಾದ ನಡೆಸಲು ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಭಾನುವಾರ ಅಧ್ಯಕ್ಷ ಅಶ್ರಫ್ ಘನಿ ಅವರ ರಾಜೀನಾಮೆ ನೀಡಿ, ದೇಶ ತೊರೆದ ನಂತರ ತಾಲಿಬಾನ್ ಕಾಬೂಲ್ ಪ್ರವೇಶಿಸಿದೆ. ತಾಲಿಬಾನ್ ರಾಜಧಾನಿ ಕಾಬೂಲ್ ಮೇಲೆ ಭಯೋತ್ಪಾದಕರು ದಾಳಿ ನಡೆಸಲು ಸಜ್ಜುಗೊಂಡಿದ್ದರು. ಹಿಂಸಾಚಾರಗಳಿಗೆ ಆಸ್ಪದವಾಗಬಾರದು, ಜನರು ತೊಂದರೆ ಎದುರಿಸಬಾರದು ಎಂಬ ಕಾರಣಕ್ಕೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದಾಗಿ ಘನಿ ಸ್ಪಷ್ಟಪಡಿಸಿದ್ದಾರೆ.