ಅಂತರರಾಷ್ಟ್ರೀಯ

ಅಫ್ಘಾನಿಸ್ತಾನದ ಆ ಪ್ರದೇಶ ಅತ್ಯಂತ ಸುರಕ್ಷಿತ.....!

ಅಫ್ಘಾನಿಸ್ತಾನದ   ಆ  ಪ್ರದೇಶ  ಅತ್ಯಂತ ಸುರಕ್ಷಿತ.....!

ವಾಷಿಂಗ್ಟನ್,  ಆಗಸ್ಟ್‌  20:  ಸಂಪೂರ್ಣವಾಗಿ ತಾಲಿಬಾನ್  ನಿಯಂತ್ರಣದಲ್ಲಿರುವ   ಅಫ್ಘಾನಿಸ್ತಾನದಲ್ಲಿ ಕೂಡ    ಒಂದು  ಸುರಕ್ಷಿತ  ಪ್ರದೇಶವಿದೆಯಂತೆ. ಈ ವಿಷಯವನ್ನು  ಸ್ವಯಂ  ಅಮೆರಿಕಾ   ಹೇಳುತ್ತಿದೆ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಹಮೀದ್ ಕರ್ಜೈ  ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇನ್ನೂ ಸುರಕ್ಷಿತವಾಗಿದೆ ಎಂದು ಅಮೆರಿಕ ಗುರುವಾರ ಘೋಷಿಸಿದೆ.   

ಅಮೆರಿಕಾ   ಸೇನೆಯ ಮೇಜರ್ ಜನರಲ್ ವಿಲಿಯಂ ಹ್ಯಾಂಕ್ ಟೇಲರ್  ಈ ವಿಷಯ ತಿಳಿಸಿದ್ದಾರೆ. ಸುಮಾರು 5,200 ಮಂದಿ  ಅಮೆರಿಕಾ  ಯೋಧರು  ಅಲ್ಲಿ  ಗಸ್ತು ತಿರುಗುತ್ತಿದ್ದಾರೆ,  ಈ ಪ್ರದೇಶದಿಂದ ವಿಮಾನಗಳ  ಆಗಮನ  - ನಿರ್ಗಮನಕ್ಕೆ  ಯಾವುದೇ  ಸಮಸ್ಯೆ ಇಲ್ಲ ಎಂದು ಅವರು ಹೇಳಿದ್ದಾರೆ.   ಆದರೆ, ಆಗಸ್ಟ್ 14 ರಿಂದ  ಅಫ್ಘಾನಿಸ್ತಾನದಿಂದ    ಜನರು  ಬೇರೆ ಬೇರೇ  ದೇಶಗಳಿಗೆ ಪಲಾಯನ  ಮಾಡುತ್ತಿದ್ದಾರೆ. ಅವರನ್ನು   ಈ ವಿಮಾನ ನಿಲ್ದಾಣ ಮೂಲಕ  ಸ್ಥಳಾಂತರಿಸಲಾಗುತ್ತಿದೆ. ಈವರೆಗೆ ಸುಮಾರು 7,000  ಮಂದಿಯನ್ನು  ಸ್ಥಳಾಂತರಿಸಲಾಗಿದೆ ಎಂದು ಹ್ಯಾಂಕ್  ಹೇಳಿದ್ದಾರೆ.

ಸುದ್ದಿ ಓದಿ