ಥ್ಯಾಕರೆಯ ಆಡಳಿತ ನೀತಿ, ಕಿತ್ತೂರ ಸಂಸ್ಥಾನದ ಉಪನ್ಯಾಸ
ಮೂಡಲಗಿ 26: ಸ್ವಭಾವತಾ ಸರ್ವಾಧಿಕಾರ ಮನೋಭಾವನವನಾಗಿದ್ದ ಥ್ಯಾಕರೆ ಬ್ರಿಟೀಷ ಸೈನ್ಯ ಸೇರಿದಂತೆ ಇನ್ನಾವುದೇ ಸಹಾಯಕ ಸೈನ್ಯ ಪದ್ಧತಿಯ ನೆರವೂ ಕೂಡ ಪಡೆಯದೇ ತನ್ನ ಸ್ವಂತ ಬಲದಿಂದ ಪ್ರಬಲ ಭದ್ರ ಕೋಟಿಯಾಗಿದ್ದ ಕಿತ್ತೂರ ಸಂಸ್ಥಾನವನ್ನು ಕಬಳಿಸಿದೆ ಎಂದು ಬ್ರಿಟೀಷ ಸಮ್ರಾಜಕ್ಕೆ ತೋರಿಸಿಕೊಳ್ಳುವ ಉದ್ದೇಶ ಹೊಂದಿದ್ದ ಎಂದು ಕಾಗವಾಡ ಶಿವಾನಂದ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಆನಂದ ಜಕ್ಕಣ್ಣವರ ಅಭಿಪ್ರಾಯಪಟ್ಟರು.
ಅವರು ಗುರುವಾರದಂದು ಮೂಡಲಗಿ ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಹಾಗೂ ಬೆಳಗಾವಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ರಾಣಿ ಚನ್ನಮ್ಮ ಅಧ್ಯಯನ ಪೀಠದ ಆಶ್ರಯದಲ್ಲಿ ಜರುಗಿದ 2023-24ನೇ ಸಾಲಿನ ವಿಶೇಷ ಸರಣಿ ಉಪನ್ಯಾಸದ ಮೂರನೇ ಉಪನ್ಯಾಸದಲ್ಲಿ ಥ್ಯಾಕರೆಯ ಆಡಳಿತ ನೀತಿ ಮತ್ತು ಕಿತ್ತೂರ ಸಂಸ್ಥಾನ ವಿಷಯದ ಕುರಿತು ಸಂಪನ್ಮೋಲ ವ್ಯಕ್ತಿಗಳಾಗಿ ಮಾತನಾಡಿ, ಸ್ಪೂರದ್ರೂಪಿ ಹಾಗೂ ಆಕರ್ಷಕ ವಸ್ತ್ರ ಅಲಂಕಾರ ಪ್ರೀಯನಾದರೂ ಆಡಳಿತದ ಗತ್ತು ದಾಕ್ಷಣ್ಯಗಳಿಲ್ಲಿದ ಅಚಲ ನಿರ್ಧಾರಗಳು, ಕುಟೀಲ ನೀತಿ, ಆಡಳಿತದ ತಂತ್ರಗಾರಿಕೆಗಳನ್ನು ಮೈಗೂಡಿಸಿಂಡಿದ್ದ ಥ್ಯಾಕರೆ ತನ್ನ ಗುರಿ ಸಾಧನೆಗಾಗಿ ನಮ್ಮ ಸಂಸ್ಥಾನಿಕರಲ್ಲಿಯ ರಾಜಕೀಯ ಅನೈತಿಕತೆಯನ್ನು ಬಳಸಿಕೊಂಡು ಆಗಿನ ಕಿತ್ತೂರಿನ ರಾಜ ಶಿವಲಿಂಗರುದ್ರ ಸರ್ಜನಿಗೆ ವಿಷ ಬೇರಿಸಿದ ಹಾಲಿಗೆ ಮೇಲೆ ಪ್ರೀತೀಯ ಲೇಪನ ಮಾಡಿ ಕುಡಿಸಿ ಕಿತ್ತೂರನ್ನು ವಶಪಡಿಸಲು ಯತ್ನಿಸುತ್ತಾನೆ ಎಂದರು.
ಒಂದು ದತ್ತು ಪ್ರಕ್ರಿಯೆಯನ್ನು ನೆಪ ಮಾಡಿಕೊಂಡು ಕಿತ್ತೂರಿನ ಮೇಲೆ ದಾಳಿ ಮಾಡಿದ ಥ್ಯಾಕರೆ ತಾನೇ ತೋಡಿದ ಬಾವಗೆ ತಾನೇ ಬಿದ್ದಂತೆ ಯುದ್ಧದಲ್ಲಿ ಬಲಿಯಾಗಿ ಹೋದ ಆದರೆ ಥ್ಯಾಕರೆ ಸಾವು ಬ್ರಿಟೀಷ್ ಆಡಳಿತದ ಸ್ವಾಭಿಮಾನಕ್ಕೆ ಧಕ್ಕೆ ಬಂದಂತಾಯಿತು ಅದು ಕಿತ್ತೂರ ಸಾಮ್ರಾಜ್ಯದ ಅವನತಿಗೆ ನಾಂದಿ ಹಾಡಿದರೆ ಮುಂದೆ ಅದೇ 1824 ಅಕ್ಕೋಬರ 23 ಬ್ರಿಟೀಷರ ವಿರುದ್ಧ ಭಾರತದ ಪ್ರಥಮ ಸ್ವತಂತ್ರ್ಯ ಸಂಗ್ರಾಮವಾಗಿ ದಾಖಲಾಗುತ್ತದೆ ಎಂದು ಬನ್ನಿಸಿದರು.
ಥ್ಯಾಕರೆ ಸಾವು
ಅಧ್ಯಕ್ಷತೆ ವಹಿಸಿದ ರಾಣಿ ಚನ್ನಮ್ ಅಧ್ಯಯನ ಪೀಠದ ನಿರ್ದೇಶಕ ಡಾ.ಎಸ್.ಎಂ.ಗಂಗಾಧರಯ್ಯ ಮಾತನಾಡಿ, ಕಿತ್ತೂರ ಚನ್ನಮ್ಮನ ನಾಡಿನವರಾದ ಬೆಳಗಾವಿಗರೂ ಆದ ನಾವು ಕಿತ್ತೂರಿನ ಇತಿಹಾಸವನ್ನು ಪ್ರತಿಯೊಬ್ಬರು ಬಲ್ಲವರಾಗಿರಬೇಕೆಂಬ ಕಾರಣದಿಂದ ಈ ಉಪನ್ಯಾಸ ಏರಿ್ಡಸಲಾಗಿದೆ ಎಂದರು.
ಕಾರ್ಯಕ್ರಮದ ಸಂಯೋಜಕ ರಾಣಿ ಚನ್ನಮ್ಮ ಅಧ್ಯಯನ ಪೀಠದ ಸಂಯೋಜಕ ಡಾ.ಮಹೇಶ ಗಾಜಪ್ಪನವರ ಮಾತನಾಡಿ, ಸರಕಾರ ಮಾಡಬೇಕಾದ ಕೆಲಸವನ್ನು ಚನ್ನಮ್ಮ ಅಧ್ಯಯನ ಪೀಠ ಮಾಡುತ್ತಿದ್ದು ಬೇರೆ ಬೇರೆ ಸ್ಥಳಗಳಲ್ಲಿ ಉಪನ್ಯಾಸ ಏರಿ್ಡಸುವುದು, ಪುಸ್ತಕ ಪ್ರಕಟನೆ ಮಾಡುತ್ತಿದ್ದು ಇದಕ್ಕೆ ಸಮಾಜದ ಸಹಬಾಗಿತ್ವ ಅವಶ್ಯಕ ಎಂದರು.
ಮೂಡಲಗಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಎಸ್.ಆರ್.ಸೋನವಾಲ್ಕರ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸ್ಥೆಯ ನಿರ್ದೇಶಕ ಆರ್.ಪಿ.ಸೋನವಾಲಕರ, ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಸಂಗಮೇಶ ಗುಜಗೊಂಡ, ಉಪನ್ಯಾಸಕರಾದ ಡಾ.ಎಸ್.ಎಲ್.ಚಿತ್ರಗಾರ, ಎಸ್.ಸಿ.ಮಂಟೂರ, ಸುರೇಶ ನಾಯಿಕ, ಎ.ಎಸ್.ಮಿಶಿನಾಯಕ, ಎಸ್.ಕೆ.ಸವಸುದ್ದಿ, ವಿಷ್ಣು ಬಾಗಡಿ, ಗ್ರಂಥಪಾಲಕ ಬಸವಂತ ಬರಗಾಲಿ, ವೆಂಕಣ್ಣ ಪಾಟೀಲ, ಅಮರಿಶಗೌಡ ಪಾಟೀಲ, ಎಸ್.ಕೆ.ಕೊತ್ತಲ ಮತ್ತಿತರು ಇದ್ದರು.