ಅಂತರರಾಷ್ಟ್ರೀಯ

ವಿಮಾನ ನಿಲ್ದಾಣದ ಮೇಲೆ ಉಗ್ರರ ದಾಳಿ: ಮೃತರ ಸಂಖ್ಯೆ 25 ಕ್ಕೆ ಏರಿಕೆ

ವಿಮಾನ ನಿಲ್ದಾಣದ ಮೇಲೆ ಉಗ್ರರ ದಾಳಿ: ಮೃತರ ಸಂಖ್ಯೆ 25 ಕ್ಕೆ ಏರಿಕೆ

ಕೈರೋ, ಡಿಸೆಂಬರ್ 31: ದಕ್ಷಿಣ ಯೆಮೆನ್ ನಗರದ ಏಡೆನ್‌ನಲ್ಲಿ ವಿಮಾನ ನಿಲ್ದಾಣದ ಮೇಲೆ ನಡೆದ ಭಯೋತ್ಪಾದಕ  ದಾಳಿಯಲ್ಲಿ ಮೃತಪಟ್ಟವರ  ಸಂಖ್ಯೆ 25 ಕ್ಕೆ ಏರಿಕೆಯಾಗಿದೆ.

ಇದರ ಜೊತೆಗೆ  ದಾಳಿಯಲ್ಲಿ ಇತರೆ  110 ಮಂದಿ ಗಾಯಗೊಂಡಿದ್ದಾರೆ ಎಂದು ಯೆಮೆನ್ ಆರೋಗ್ಯ ಸಚಿವ ಕಾಸೆಮ್ ಬಿಹೈಬು ಗುರುವಾರ ಹೇಳಿದ್ದಾರೆ. ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ ಯೆಮೆನ್ ಸಂಪುಟ ಸಚಿವರನ್ನು  ಹೊತ್ತ ವಿಮಾನವು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಬುಧವಾರ ಏಡೆನ್  ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಲಾಗಿದೆ. 

ಅಲ್ ಜಜೀರಾ ಟಿವಿ ವರದಿ ಮಾಡಿದೆ. ಏಡೆನ್  ವಿಮಾನ ನಿಲ್ದಾಣದ ಮೇಲಿನ ದಾಳಿಯ ಸಾವಿನ ಸಂಖ್ಯೆ 25 ಕ್ಕೆ ಏರಿದ್ದು  110 ಜನರು ಗಾಯಗೊಂಡಿದ್ದಾರೆ ಎಂದು  ವರದಿಯಾಗಿದೆ.   ಇದಕ್ಕೂ ಮೊದಲು ದಾಳಿಯಲ್ಲಿ 22 ಮಂದಿ ಮೃತಪಟ್ಟಿದ್ದು, 50 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು  ಎಂದೂ  ವರದಿಯಾಗಿತ್ತು.

 

ಸುದ್ದಿ ಓದಿ