ಮೆಮೋರಿಯಲ್ ಟ್ರೋಫಿ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ
ಮಹಾಲಿಂಗಪುರ 18: ಲಕ್ಷಾಂತರ ರೂ.ಬಹುಮಾನಗಳ ಪಂದ್ಯಾವಳಿಯನ್ನು ಆಯೋಜಿಸುವುದು ಅದಷ್ಟು ಸುಲಭದ ಮಾತಲ್ಲ ಆ ಕೆಲಸವನ್ನು ಮಾಡಿರುವ ಆಯೋಜಕರ ಶ್ರಮ ಮೆಚ್ಚುವಂತದ್ದು ಮತ್ತು ಇಂತಹ ಕೆಲಸಕ್ಕೆ ನಮ್ಮ ಸಹಕಾರ ಸದಾ ಇರುತ್ತದೆ ಎಂದು ಖ್ಯಾತ ವೈದ್ಯ ಡಾ.ವಿಜಯ ಹಂಚಿನಾಳ ಹೇಳಿದರು.
ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಎಂಸಿಸಿ ಕ್ರಿಕೆಟ್ ಕ್ಲಬ್ ವತಿಯಿಂದ ಮಾ.17ರಿಂದ 21ರವರೆಗೆ ನಡೆಯುವ ದಿ.ಮಹಾಂತೇಶ ಜಕ್ಕನ್ನವರ, ದಿ.ಶಂಕರ ಗೊಂಬಿ ಮತ್ತು ಬಶೀರ್ ಸೌದಾಗರ ಮೆಮೋರಿಯಲ್ ಟ್ರೋಫಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಸಂಯೋಜಕರ ಉತ್ಸಾಹ ಯಶಸ್ವಿಯಾಗಿ ಪ್ರತಿವμರ್À ಇಂತಹ ಪಂದ್ಯಾವಳಿಗಳು ನಡೆಯಲಿ ಎಂದರು.
ಸ್ಥಳೀಯ ಠಾಣೆಯ ಪಿಎಸ್ ಐ ಜಿ.ಎಸ್ ಉಪ್ಪಾರ ಅವರು ಮಾತನಾಡಿ ಯಾವುದೇ ತಂಡದ ಗೆಲುವಿಗಿಂತ ಕ್ರೀಡಾಸ್ಪೂರ್ತಿ ಮೆರೆಯುವ ಪಂದ್ಯ ಗೆಲ್ಲಬೇಕೆಂದು ಹೇಳಿ ಕಾರ್ಯಕ್ರಮ ಶಾಂತಿಯುತವಾಗಿ ನಡೆದು ಯಶಸ್ವಿಯಾಗಲಿ ಎಂದು ಹಾರೈಸಿದರು.
ಡಾ.ಎ.ಆರ್.ಬೆಳಗಲಿಯವರು ಪ್ರಥಮ ಬಹುಮಾನ 1 ಲಕ್ಷ ರೂ. ಹಾಗೂ ಡಾ.ವಿಜಯ ಹಂಚಿನಾಳ ದ್ವಿತೀಯಬಹುಮಾನ 50 ಸಾವಿರ ರೂ. ನೀಡಿದ್ದಾರೆ.
ಬಿಡಿಸಿಸಿ ಬ್ಯಾಂಕಿನ ನಿರ್ದೇಶಕ ಹಾಗೂ ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ವೈದ್ಯ ಡಾ.ಎ.ಆರ್.ಬೆಳಗಲಿ, ಪುರಸಭಾ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಶೇಖರ ಅಂಗಡಿ, ಎಪಿಎಂಸಿ ನಿರ್ದೇಶಕ ಶಂಕರಗೌಡ ಪಾಟೀಲ, ಪುರಸಭಾ ಸದಸ್ಯ ಬಸವರಾಜ ಹಿಟ್ಟಿನಮಠ, ಶಶಿ ನಕಾತಿ, ಬಿ.ಜಿ.ಗಾಣಿಗೇರ, ಸಲೀಂ ಸೌದಾಗರ , ವಿಠ್ಠಲ ಕುಳಲಿ, ಪ್ರಕಾಶ ಕರಲಟ್ಟಿ, ಮಹಾಂತೇಶ್ ಫನಸಲಕರ, ಎಸ್.ಡಿ.ಮಾಗಿ, ಷಣ್ಮುಖ ಶಿರೋಳ, ವಿನೋದ್ ಸಿಂಪಿ, ಪತ್ರಕರ್ತರಾದ ಜಯರಾಮ ಶೆಟ್ಟಿ, ಮಹೇಶ ಆರಿ, ಮೀರಾ ತಟಗಾರ, ಮಹೇಶ ಮಣ್ಣಯ್ಯನವರಮಠ, ಕಾನಿಪ ಕಾರ್ಯದರ್ಶಿ ನಾರನಗೌಡ ಉತ್ತಂಗಿ, ಸಂಘಟಕರಾದ ಬಸವರಾಜ ರಾಯರ, ಶಿವಶಂಕರ ಗುಜ್ಜರ, ಮಹಾದೇವ ಕಡಬಲ್ಲವರ, ಯಾಸೀನ್ ಪಾಂಡು, ಮಲ್ಲು ಪಾಶ್ಚಾಪುರ, ರಾಜು ಶೆಟ್ಟರ್ ಇತರರು ಇದ್ದು ಪತ್ರಕರ್ತ ಚಂದ್ರಶೇಖರ ಮೋರೆ ನಿರೂಪಿಸಿ ವಂದಿಸಿದರು.