ಮೂಡಲಗಿ

ಶಿಕ್ಷಕ ವ್ರತ್ತಿಯೂ ಪವಿತ್ರ ವೃತ್ತಿಯಾಗಿದೆ :ಕಲ್ಲಪ್ಪ ಎಸ್ ಹೊಸಟ್ಟಿ

ಶಿಕ್ಷಕ ವ್ರತ್ತಿಯೂ ಪವಿತ್ರ ವೃತ್ತಿಯಾಗಿದೆ  :ಕಲ್ಲಪ್ಪ ಎಸ್ ಹೊಸಟ್ಟಿ

ಗುರ್ಲಾಪೂರ 08: ಗ್ರಾಮದ ಸ್ಥಳಿಯ ಶ್ರೀ ಮಲ್ಲಿಕಾರ್ಜುನ ಅರ್ಬನ್ ಕೋ-ಆಪ್‌.ಕ್ರೆಡಿಟ್ ಸೊಸಾಯಿಟಿಯಲ್ಲಿ ಇತ್ತಿಚಿಗೆ ಮೂಡಲಗಿಯ ಎಸ್ ಎಸ್ ಆರ್ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಇತ್ತಿಚಿಗೆ ನಿವ್ರತಿಯಾದ ಕಲ್ಲಪ್ಪ ಎಸ್ ಹೊಸಟ್ಟಿ ಇವರನ್ನು ಸಂಘದ ಅಧ್ಯಕ್ಷ ಪರ​‍್ಪ ಮುಗಳಖೋಡ ಇವರ ಅಧ್ಯಕ್ಷತೆಯಲ್ಲಿ  ಸನ್ಮಾನ ಮಾಡಿ ಮಾತನಾಡುತ್ತಾ ಶಿಕ್ಷಕ ವೃತ್ತಿಯೂ ಪವಿತ್ರವಾಗಿದೆ ಎನ್ನುತ್ತಾ ಸಮಾಜದಲ್ಲಿ ಒಬ್ಬ ವ್ಯಕ್ತಿಯು ಜೀವನದಲ್ಲಿ ಡಾಕ್ಟರಾಗಲು ನಾಯಾದೀಶ ನಾಗಲು ಇಂಜನಿಯರಾಗಲು ಒಳ್ಳೆಯ ರಾಜಕಾರಣಿಯಾಗಬೇಕಾದರೆ. ಶಿಕ್ಷಕರವೃತ್ತಿಯೂ ಪವಿತ್ರವಾದ ಕಾಯಕವಾಗಿದೆ ಎಂದರು. ಹೊಸಟ್ಟಿ ಗುರುಗಳು ತಮ್ಮ 35 ವರ್ಷಗಳ ವೃತ್ತಿಯಲ್ಲಿ ಯಾವುದೆ ಕಪ್ಪು ಚುಕ್ಕೆ ಇಲ್ಲದೆ ತಮ್ಮ ಸೇವೆ ಸಲ್ಲಿಸಿ ಹಲವಾರು ವಿಧ್ಯಾರ್ಥಿಗಳ ಜೀವನ ಉನ್ನತ ಮಟ್ಟದಲ್ಲಿ ರೊಪಿಸಿದ್ದಾರೆ. 

 ಹೊಸಟ್ಟಿ ಗುರುಗಳು ಸೇವೆಯಿಂದ ನಿವೃತಿಯಾದರು ಅವರು ಮಾಜೀಕ ಜೀವನದಲ್ಲಿ ತಮ್ಮನೂ ತಾವು ತೂಡಗಿಸಿಕೋಂಡು ಇನ್ನು ಕೇಲವರಿಗೆ ದಾರೀದೀಪವಾಗಲು ಭಗವಂತನು ಆಯುಷ್ಯ ಆರೂಗ್ಯ ಕೊಟ್ಟು ಕಾಪಾಡಲಿ ಎಂದು ಹಾರೃಸಿದರು. 

 ಸಂಘದ ನಿರ್ದೇಶಕ ಎ ಆರ್ ಶೇಗುಣಸಿ ಇವರು ಹೊಸಟ್ಟಿ ಗುರುಗಳ ಬಾಲ್ಯಾವಸ್ಥೆಯಲ್ಲಿ ಶಿಕ್ಷಣ ಪಡೆದ ಬಗ್ಗೆ ತಿಳಿಸುತ್ತಾ ಗುರುಗಳ ಶಿಕ್ಷಕ ವ್ರತಿಯಲ್ಲಿ ನಡೆದ ಬಂದ ದಾರಿಯನ್ನು ಹೇಳುತ್ತಾ ಇವರು ನಮ್ಮ ಶ್ರೀ ಮಲ್ಲಿಕಾರ್ಜುನ ಅರ್ಬನ್ ಕೋ-ಆಪ್‌.ಕ್ರೆಡಿಟ್ ಸೊಸಾಯಿಟಿಯಲ್ಲಿ ನಿರ್ದೇಶಕರಾಗಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ ಎಂದರು. 

ಸನ್ಮಾನ ಸ್ವಿಕರಿಸಿದ ಹೊಸಟ್ಟಿ ಗುರುಗಳು ಶ್ರೀ ಮಲ್ಲಿಕಾರ್ಜುನ ಅರ್ಬನ್ ಕೋ-ಆಪ್‌.ಕ್ರೆಡಿಟ್ ಸೊಸಾಯಿಟಿಯ  ಆಡಳಿತ ಮಂಡಳಿ ಸರ್ವ ಸದಸ್ಯರಿಗೆ ಮತ್ತು ಸಿಬ್ಬಂದಿಯವರಿಗೆ ತುಂಬುಹೃದಯದ ಅಭಿನಂದನೆ ತಿಳಿಸಿದರು. 

ಈ ಸಂದರ್ಭದಲ್ಲಿ ಅಶೋಕ ಕೌಜಲಗಿ ಬಸನಗೌಡ ಬೋರಗಲ್ ರಾಮಪ್ಪ ಮುಗಳಖೋಡ ಈರ​‍್ಪ ಮುಗಳಖೋಡ  ಕೆಂಪಣ್ಣ ಮುಗಳಖೋಡ ಪ್ರಕಾಶ ಸುಳ್ಳನವರ ಶಂಕರ ಮುಗಳೊಖೋಡ ಹಾಗೂ ಸಂಘದ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥತರಿದ್ದರು. ಸಂಘದ ಕಾರ್ಯದರ್ಶಿ ಶೇಖರಯ್ಯಾ ಹಿರೇಮಠ ಸ್ವಾಗತಿಸಿ, ನಿರೂಪಿಸಿದರು. ಮಾರುತಿ ಕಾಮಗೌಡರ ವಂದಿಸಿದರು. 


ಸುದ್ದಿ ಓದಿ