ಅಂತರರಾಷ್ಟ್ರೀಯ

ಅಮೆರಿಕಾ ನಿರ್ಮಿತ ವಿಮಾನ, ಬಂದೂಕು, ರಾಕೆಟ್‌ ಗಳೇ .. ತಾಲಿಬಾನ್ ಅಸ್ತ್ರಗಳು....!

ಅಮೆರಿಕಾ ನಿರ್ಮಿತ  ವಿಮಾನ, ಬಂದೂಕು, ರಾಕೆಟ್‌ ಗಳೇ  ..   ತಾಲಿಬಾನ್  ಅಸ್ತ್ರಗಳು....!

ಕಾಬೂಲ್, ಆಗಸ್ಟ್‌ 20: ತಾಲಿಬಾನ್‌ ಗಳ   ಕೈಗೆ   ಅಮೆರಿಕಾದ   ಅತ್ಯಾಧುನಿಕ ಶಸ್ತ್ರಾಸ್ತ್ರಗಳು   ಸಿಕ್ಕಿವೆ.    ಅಫ್ಘಾನಿಸ್ತಾನದ   ಬಹು ಭಾಗಗಳನ್ನು  ವಶಪಡಿಸಿಕೊಂಡಿರುವ  ತಾಲಿಬಾನಿಗಳು    ಅಮೆರಿಕಾದಲ್ಲಿ   ತಯಾರಾಗಿರುವ   ಅತ್ಯಾಧುನಿಕ  ಯುದ್ಧ ವಿಮಾನಗಳು, ಬಂದೂಕುಗಳು,  ನೈಟ್‌ ವಿಜನ್‌  ಗಾಗಲ್ಸ್‌ ,  ರಾಕೆಟ್‌ಗಳು,   ಡ್ರೋನ್‌ಗಳನ್ನು  ಅಫ್ಘನ್‌  ಭದ್ರತಾ  ಪಡೆಗಳು ವಶಪಡಿಸಿಕೊಂಡಿವೆ.   ತಾಲಿಬಾನ್‌ಗಳು 2000 ಕ್ಕೂ ಹೆಚ್ಚು ಶಸ್ತ್ರಸಜ್ಜಿತ ವಾಹನಗಳು ಹಾಗೂ   40 ವಿಮಾನಗಳನ್ನು ವಶಪಡಿಸಿಕೊಂಡಿವೆ   ಎಂದು  ಗುಪ್ತಚರ ಸಂಸ್ಥೆಗಳು ಅಂದಾಜಿಸಿವೆ. .

ಅಮೆರಿಕಾ  ಈ   ಆಯುಧಗಳಿಂದ   ತಾಲಿಬಾನ್‌ ಗಳು ಅಫ್ಘಾನ್ ನಾಗರಿಕರ ಮೇಲೆ   ದಾಳಿ ಮಾಡಬಹುದು  ಎಂಬ ಆತಂಕ  ಸೃಷ್ಟಿಯಾಗಿದೆ.  ಈ ವರ್ಷ ಫೆಬ್ರವರಿಯಲ್ಲಿ, ಅಫ್ಘನ್ ರಾಷ್ಟ್ರೀಯ ಸೇನೆಗೆ  ಅಮೆರಿಕಾ  ಕಳುಹಿಸಿದ ಸೇನಾ ವಾಹನಗಳನ್ನು ತಾಲಿಬಾನ್  ವಶಕ್ಕೆ ಪಡದುಕೊಂಡಿದೆ.    ಅಫ್ಘನ್‌   ತೊರೆಯುವ  ಸಮಯದಲ್ಲಿ  ತಾಲಿಬಾನಿಗಳು  ಅದನ್ನು ವಿರೋಧಿಸುವ ಸಾಧ್ಯತೆಯಿದೆ     ಎಂದು  ಅಮೆರಿಕಾ  ಕಳವಳ ವ್ಯಕ್ತಪಡಿಸಿದೆ.   ಅಮೆರಿಕಾ   ನಿರ್ಮಿತ ಶಸ್ತ್ರಾಸ್ತ್ರಗಳನ್ನು ತಾಲಿಬಾನ್ ಗಳು ವಶಪಡಿಸಿಕೊಂಡಿದ್ದಾರೆ ಎಂದು ಅಮೆರಿಕಾ ಅಧಿಕಾರಿಗಳು  ಅನುಮಾನ ವ್ಯಕ್ತಪಡಿಸಿದ್ದಾರೆ.

2002 ರಿಂದ  2017 ರ  ನಡುವೆ,  ಅಮೆರಿಕಾ,   ಅಫ್ಘನ್‌  ಸೇನೆಗೆ    ಸುಮಾರು  28 ಬಿಲಿಯನ್    ಮೌಲ್ಯದ  ಶಸ್ತ್ರಾಸ್ತ್ರಗಳನ್ನು  ನೀಡಿತ್ತು. ಇದರಲ್ಲಿ   ಬಂದೂಕುಗಳು, ರಾಕೆಟ್‌ಗಳು,  ನೈಟ್‌   ವಿಜನ್‌  ಗಾಗಲ್ಸ್‌  ಹಾಗೂ ಸಣ್ಣ ಡ್ರೋನ್‌ಗಳನ್ನು ಒಳಗೊಂಡಿದೆ. ಈ  ಶಸ್ತ್ರಾಸ್ತ್ರಗಳು  ತಾಲಿಬಾನ್ ಕೈಗೆ ತಲುಪಿವೆ,     ಪ್ರಸ್ತುತ ತಾಲಿಬಾನ್ ಹಿಡಿತದಲ್ಲಿರುವ  ಅಫ್ಘಾನಿಸ್ತಾನಕ್ಕೆ ಶಸ್ತ್ರಾಸ್ತ್ರ ಮಾರಾಟ ಸ್ಥಗಿತಗೊಳಿಸಲು ಅಮೆರಿಕ  ನಿರ್ಣಯಿಸಿದೆ.

ಸುದ್ದಿ ಓದಿ