ಅಫ್ಘಾನ್ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರಿ : ಅಮೆರಿಕಕ್ಕೆ ತಾಲಿಬಾನ್ ಎಚ್ಚರಿಕೆ
ಕೈರೋ, ಆಗಸ್ಟ್ 09 ಅಫ್ಘಾನಿಸ್ತಾನದ ಆಂತರಿಕ ವ್ಯವಹಾರಗಳಲ್ಲಿ ಯಾವುದೇ ಹಸ್ತಕ್ಷೇಪ ಮಾಡದಂತೆ ಅಮೆರಿಕ ಸರ್ಕಾರವನ್ನು ರಷ್ಯಾದಲ್ಲಿ ನಿಷೇಧಗೊಂಡಿರುವ ತಾಲಿಬಾನ್ ಸಂಘಟನೆ ಎಚ್ಚರಿಸಿದೆ.
ಈ ಕುರಿತು ಸಂಘಟನೆಯ ರಾಜಕೀಯ ಕಚೇರಿಯ ವಕ್ತಾರರು ಅಲ್ ಜಜೀರಾ ಬ್ರಾಡ್‌ಕಾಸ್ಟರ್‌ಗೆ ತಿಳಿಸಿದ್ದಾರೆ.
ಯುಎಸ್ ಬಿ -52 ಸ್ಟ್ರಾಟೊಫೋರ್ಟ್ರೆಸ್ ಬಾಂಬರ್‌ಗಳು ಉತ್ತರ ಅಫ್ಘಾನಿಸ್ತಾನದ ಜಾವ್ಜಾನ್ ಪ್ರಾಂತ್ಯದ ರಾಜಧಾನಿ ಶೆಬರ್‌ಘನ್‌ನಲ್ಲಿ ತಾಲಿಬಾನ್ ಪಡೆಗಳ ಮೇಲೆ ವಾಯುದಾಳಿ ನಡೆಸಿ 200 ಕ್ಕೂ ಹೆಚ್ಚು ಉಗ್ರರನ್ನು ಹತ್ಯೆಗೈದಿದ್ದಾರೆ. "ಅಫ್ಘಾನಿಸ್ತಾನದಲ್ಲಿ ಅಮೆರಿಕಾದ ಹಸ್ತಕ್ಷೇಪದ ವಿರುದ್ಧ ನಾವು ಎಚ್ಚರಿಕೆ ನೀಡುತ್ತಿದ್ದೇವೆ" ಎಂದು ತಾಲಿಬಾನ್ ರಾಜಕೀಯ ಕಚೇರಿಯ ವಕ್ತಾರರು ಹೇಳಿದ್ದು, ಯಾವುದೇ ಅಫಘಾನ್ ಕದನ ವಿರಾಮವನ್ನು ತಲುಪಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಫಘಾನ್ ಸರ್ಕಾರವು ಹಲವಾರು ಪ್ರಾಂತ್ಯಗಳಲ್ಲಿ ಕಾರ್ಯಾಚರಣೆಗಳನ್ನು ಆರಂಭಿಸುವ ಮೂಲಕ ದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ ಎಂದು ಅವರು ಆರೋಪಿಸಿದ್ದಾರೆ.