ಅಂತರರಾಷ್ಟ್ರೀಯ

ಶಸ್ತ್ರಾಸ್ತ್ರ ಹಸ್ತಾಂತರಿಸಲು ಅಫ್ಘಾನ್ ಅಧಿಕಾರಿಗಳಿಗೆ, ಸೇನೆಗೆ ತಾಲಿಬಾನ್ ಲಂಚ ನೀಡಿತ್ತು: ವರದಿ

ಶಸ್ತ್ರಾಸ್ತ್ರ ಹಸ್ತಾಂತರಿಸಲು ಅಫ್ಘಾನ್ ಅಧಿಕಾರಿಗಳಿಗೆ, ಸೇನೆಗೆ ತಾಲಿಬಾನ್ ಲಂಚ ನೀಡಿತ್ತು: ವರದಿ

ವಾಷಿಂಗ್ಟನ್, ಆಗಸ್ಟ್ 16 (ಯುಎನ್ಐ/ಸ್ಪುಟ್ನಿಕ್) ರಷ್ಯಾದಿಂದ ನಿಷೇಧಕ್ಕೊಳಗಾಗಿರುವ ಭಯೋತ್ಪಾದನಾ ಸಂಘಟನೆ ತಾಲಿಬಾನ್ 2020 ರಲ್ಲಿ ತಾಲಿಬಾನ್ ಅಫಘಾನ್ ಅಧಿಕಾರಿಗಳು ಮತ್ತು ಮಿಲಿಟರಿ ಅಧಿಕಾರಿಗಳಿಗೆ ತಮ್ಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸಲು ಅಥವಾ ಹಸ್ತಾಂತರಿಸಲು ಲಂಚವನ್ನು ನೀಡಿತ್ತು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. 

ದೇಶದ ಅಧಿಕಾರಿಗಳು 2020 ರ ಆರಂಭದಲ್ಲಿ ನೀಡಿದ್ದ ಪ್ರಸ್ತಾಪಗಳನ್ನು ಕದನ ವಿರಾಮ ಎಂದು ವಿವರಿಸಿದರೆ, ವಾಸ್ತವದಲ್ಲಿ, ತಾಲಿಬಾನ್‌ಗಳು ಹಣ ನೀಡುತ್ತಿದ್ದವು, ಹೀಗಾಗಿಯೇ ಅಫಘಾನ್ ಪಡೆಗಳು ತಮ್ಮ ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸುತ್ತವೆ ಎಂದು ಪತ್ರಿಕೆ ಹೇಳಿದೆ. 

ಮುಂದಿನ ಒಂದೂವರೆ ವರ್ಷದುದ್ದಕ್ಕೂ, ಸಭೆಗಳು ಜಿಲ್ಲೆಗಳು ಮತ್ತು ಪ್ರಾಂತೀಯ ರಾಜಧಾನಿಗಳ ಮಟ್ಟಕ್ಕೆ ಮುಂದುವರಿದವು, ಇದು ಅಫಘಾನ್ ಪಡೆಗಳ ಸರಣಿ ಶರಣಾಗತಿಗೆ ಕಾರಣವಾಯಿತು ಎಂದು ಅಫ್ಘಾನಿಸ್ತಾನದ ವಿಶೇಷ ಸೇವಾ ಅಧಿಕಾರಿಯೊಬ್ಬರು ಸುದ್ದಿವಾಹಿನಿಗೆ ತಿಳಿಸಿದ್ದಾರೆ.

ಭಾನುವಾರ, ತಾಲಿಬಾನ್ ಕಾಬೂಲ್ ಪ್ರವೇಶಿಸಿದ  ನಂತರ ಅಧ್ಯಕ್ಷ ಅಶ್ರಫ್ ಘನಿ ರಾಜೀನಾಮೆ ಘೋಷಿಸಿ ದೇಶವನ್ನು ತೊರೆದರು. ಉಗ್ರರು ರಾಜಧಾನಿಯ ಮೇಲೆ ದಾಳಿ ನಡೆಸಲು ಸಿದ್ಧರಾಗಿರುವುದರಿಂದ ಹಿಂಸಾಚಾರವನ್ನು ತಡೆಯುವ ಬಯಕೆಯಿಂದ ದೇಶ ಬಿಡುತ್ತಿರುವುದಾಗಿ ಘನಿ ಹೇಳಿದ್ದಾರೆ.

ತಾಲಿಬಾನ್ ವಕ್ತಾರ ಮೊಹಮ್ಮದ್ ನಯೀಮ್, ಈ ಚಳುವಳಿಯು ದೇಶದಲ್ಲಿ 20 ವರ್ಷಗಳ ಯುದ್ಧವನ್ನು ಕೊನೆಗೊಳಿಸಿದೆ ಎಂದು ಹೇಳಿಕೊಂಡಿದ್ದಾರೆ.

ಸುದ್ದಿ ಓದಿ