ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
Talent award program for meritorious students
ಲೋಕದರ್ಶನ ವರದಿ
ಬೆಳಗಾವಿ 19: ದಿ. 17 ರಂದು ಕರ್ನಾಟಕ ರಾಜ್ಯ ಹಡಪದ ನೌಕರರ ಸಂಘ ಬೆಂಗಳೂರು ಹಾಗೂ ಜಿಲ್ಲಾ ಘಟಕ ಬೆಳಗಾವಿ ವತಿಯಿಂದ 2025- 26 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಯಲ್ಲಿ 85ಅ ಅಧಿಕ ಅಂಕ ಪಡೆದ ಸಮಾಜದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಕುಮಾರ ಗಂಧರ್ವ ಕಲಾಮಂದಿರ ಬೆಳಗಾವಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸದರಿ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಬಿ ಎಸ್ ನಾವಿ ಮುಖ್ಯಸ್ಥರು ವಾಣಿಜ್ಯ ವಿಭಾಗ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ. ರವರು ಅಧ್ಯಕ್ಷತೆಯನ್ನು ಕುಮಾರ ನಾವಿ ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ಹಡಪದ ನೌಕರರ ಸಂಘ ಬೆಳಗಾವಿ ರವರು. ಮುಖ್ಯ ಅತಿಥಿ ಸ್ಥಾನವನ್ನು ಗುರುರಾಜ ಮೈಲಾರಿ ಸಿ ಪಿ ಐ ಲೋಕಾಯುಕ್ತ ವಿಭಾಗ ಬೆಳಗಾವಿರವರು ವಹಿಸಿಕೊಂಡಿದ್ದರು. ಗುರುರಾಜ್ ಮೈಲಾರಿ ಸಿಪಿಐ ರವರು ಮಾತನಾಡಿ ಮಕ್ಕಳು ತಮ್ಮ ಉಜ್ಜಲ ಭವಿಷ್ಯಕ್ಕಾಗಿ ಏಕಾಗ್ರತೆ ಮತ್ತು ಉತ್ತಮ ಅಭ್ಯಾಸ ಅವಶ್ಯಕ ಎಂದು ಹೇಳಿದರು. ಗಣ ಅಧ್ಯಕ್ಷತೆ ವಹಿಸಿದ ಬಿ ಎಸ್ ನಾವಿ ರವರು ಮಾತನಾಡಿ ವಿದ್ಯಾರ್ಥಿಗಳ ಯಶಸ್ಸಿಗೆ ಸಾಮಾಜಿಕ ಜಾಲ ತಾಣದಿಂದ ದೂರವಿರುವುದು,
ಮಾನವೀಯ ಮೌಲ್ಯಗಳು ಬೆಳೆಸಿಕೊಳ್ಳುವುದು ಸಮಾಜ ನಾಡು ನುಡಿ ದೇಶದ ಅಭಿವೃದ್ಧಿಗೆ ಶ್ರಮಿಸುವುದು. ಅಗತ್ಯವಾಗಿದೆ ಎಂದು ಹೇಳಿದರು. ಕುಮಾರ್ ನಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮಾರು 80 ಕ್ಕೂ ಅಧಿಕ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಸತ್ಕರಿಸಿ ಪ್ರೋತ್ಸಾಹ ಧನ ನೀಡಲಾಯಿತು. ಹಾಗೆ 30ಕ್ಕೂ ಅಧಿಕ ಸಮಾಜದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರಿಗೆ, ಬಡತಿ ಪಡೆದವರಿಗೆ, ಹೊಸ ನೇಮಕಾತಿ ಹೊಂದಿದವರಿಗೆ ಮತ್ತು ವಿಶೇಷ ಸಾಧಕ ಪ್ರಶಸ್ತಿಗಳನ್ನು ಪಡೆದ ಮಹನೀಯರಿಗೆ ಸನ್ಮಾನಿಸಲಾಯಿತು.
ಸುರೇಶ ನಾವಲಗಿ ಉಪಾಧ್ಯಕ್ಷರು, ಶಿವಪುತ್ರ್ಪ ಹುಕ್ಕೇರಿ, ಮಹದೇವ ಹೊನ್ನಮಾನೆ, ಅಶೋಕ ಹೊನ್ನಮಾನೆ, ಎಸ್.ಜಿ ಮಮದಾಪೂರ, ಮನೋಹರ ಕೋರೆ, ಧನಂಜಯ ಹೊಂಗಲ್, ಮಲ್ಲಿಕಾರ್ಜುನ ಸಿಎ, ವೀರಭದ್ರ ಎರನಾಳ, ಅರುಣ ನಾವಿ ಡಾಕ್ಟರ್ ವಾಸನ್, ಮಾರುತಿ ಹಡಪದ ಕು ಸಂಜು ಕೋರೆ, ಶ್ರೀಶೈಲ ನಾವಿ, ಗೌರಿಶಂಕರ್, ಬಸವರಾಜ ಪಟಗೊಂಡಿ ಡಾಕ್ಟರ್ ಹನುಮಂತ ನಾವಿ ಮುಂತಾದವರು ಉಪಸ್ಥಿತರಿದ್ದರು. ಶ್ರೀಶೈಲ್ ಹಡಪದ ಸ್ವಾಗತಿಸಿದರು, ಷಣ್ಮುಖ ನಾವಿ ನಿರೂಪಿಸಿದರು, ಶಿವಾನಂದ ನಾವಿ ಸೈನಿಕರು ವಂದನಾರೆ್ಣ ಮಾಡಿದರು. ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 