ಅಂತರರಾಷ್ಟ್ರೀಯ

ಅಯಾತುಲ್ಲಾ ಖೊಮೇನಿ ಟ್ವಿಟ್ಟರ್ ಖಾತೆಗೆ ಶಾಶ್ವತ ನಿಷೇಧ

ಅಯಾತುಲ್ಲಾ ಖೊಮೇನಿ ಟ್ವಿಟ್ಟರ್ ಖಾತೆಗೆ ಶಾಶ್ವತ ನಿಷೇಧ

ವಾಷಿಂಗ್ಟನ್, ಜ.23: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಬೆದರಿಕೆ ಹಾಕುವ ಪೋಸ್ಟ್‌ ಹಾಕಿದ ಬೆನ್ನಲ್ಲೇ ಇರಾನ್‌ನ ಸರ್ವೋಚ್ಚ ನಾಯಕ ಅಯಾತುಲ್ಲಾ ಖೊಮೇನಿ ಅವರಿಗೆ ಸೇರಿದ್ದು ಎನ್ನಲಾದ ಟ್ವಿಟ್ಟರ್ ಖಾತೆಯನ್ನು ಶಾಶ್ವತವಾಗಿ ನಿಷೇಧಿಸಲಾಗಿದೆ ಎಂದು ಟ್ವಿಟರ್ ತಿಳಿಸಿದೆ.ಅಯತುಲ್ಲಾ ಅಲಿ ಖೊಮೇನಿಗೆ ಸೇರಿದ್ದು ಎನ್ನಲಾದ ಖಾತೆಯಿಂದ ಗುರುವಾರ ತಡವಾಗಿ ಪೋಸ್ಟ್ ಮಾಡಲಾದ ಚಿತ್ರದಲ್ಲಿ, ಟ್ರಂಪ್ ಅವರು ದೈತ್ಯ ಡ್ರೋನ್‌ನ ನೆರಳಿನಲ್ಲಿ ಗಾಲ್ಫ್ ಆಡುವುದನ್ನು ತೋರಿಸಲಾಗಿದೆ, ಫಾರ್ಸಿ ಭಾಷೆಯಲ್ಲಿ “ ಪ್ರತೀಕಾರ ಖಚಿತ” ಎಂಬ ಶೀರ್ಷಿಕೆಯೊಂದಿಗೆ ಇದನ್ನು ಪೋಸ್ಟ್ ಮಾಡಲಾಗಿತ್ತು.ಈ ಟ್ವೀಟ್ ಕಂಪನಿಯ "ನಿಂದನೀಯ ನಡವಳಿಕೆ ನೀತಿಯನ್ನು" ಉಲ್ಲಂಘಿಸಿದೆ. ಈ ಹಿನ್ನೆಲೆಯಲ್ಲಿ ಅವರ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ಟ್ವಿಟ್ಟರ್ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.ಈ ತಿಂಗಳ ಆರಂಭದಲ್ಲಿ, ಯು.ಎಸ್. ಕ್ಯಾಪಿಟಲ್ ಮೇಲಿನ ದಾಳಿಯನ್ನು ಪ್ರಚೋದಿಸಿದ ಆರೋಪದ ಮೇಲೆ ಫೇಸ್‌ಬುಕ್ ಮತ್ತು ಟ್ವಿಟರ್ , ಮಾಜಿ ಅಧ್ಯಕ್ಷ ಟ್ರಂಪ್‌ ಅವರ ಖಾತೆಗಳನ್ನು ಸ್ಥಗಿತಗೊಳಿಸಿತ್ತು.  



ಸುದ್ದಿ ಓದಿ