ಅಂತರರಾಷ್ಟ್ರೀಯ

ಚುನಾವಣಾ ಹಿಂಸಾಚಾರ: ಕ್ಷಮಾದಾನ ಕುರಿತು ಆಪ್ತರ ಬಳಿ ಟ್ರಂಪ್ ಚರ್ಚೆ

ಚುನಾವಣಾ ಹಿಂಸಾಚಾರ: ಕ್ಷಮಾದಾನ ಕುರಿತು ಆಪ್ತರ ಬಳಿ  ಟ್ರಂಪ್ ಚರ್ಚೆ

ವಾಷಿಂಗ್ಟನ್, ಜನವರಿ 8 : ಅಮೆರಿಕದ ಇರಿಹಾಸದಲ್ಲಿಯೇ ಯಾರೂ ತೆಗೆದುಕೊಳ್ಳದಂತೆ ತಮ್ಮ ಅಧ್ಯಕ್ಷಾವಧಿಯ ಕೊನೆಯ ದಿನಗಳಲ್ಲಿ  ಜರುಗಿದ ಕಹಿ,ಅಹಿತಕರ  ಘಟನೆಗಳ ಬಗ್ಗೆ ತಮಗೆ ತಾವೇ   ಕ್ಷಮಾದಾನ ನೀಡುವ ಬಗ್ಗೆ ನಿರ್ಗಮಿತ ಅಧ್ಯಕ್ಷ  ಡೊನಾಲ್ಡ್ ಟ್ರಂಪ್ ಆಪ್ತರ ಬಳಿ  ಗಹನ, ಮಹತ್ವದ  ಚರ್ಚೆ ಮಾಡಿದ್ದಾರೆ.  ಚುನಾವಣಾ ದಿನದಿಂದಲೂ ತಮ್ಮ ಸಲಹೆಗಾರರ ಜತೆಗೆ ಹಲವು ಬಾರಿ ಮಾತುಕತೆ ನಡೆಸಿರುವ ಟ್ರಂಪ್, ತಮಗೆ ತಾವೇ ಕ್ಷಮಾದಾನ ನೀಡುವುದನ್ನು ಪರಿಗಣಿಸುತ್ತಿರುವುದಾಗಿ ತಿಳಿಸಿದ್ದಾರೆ. ತಾವು ಅದನ್ನು ಮಾಡಬೇಕೇ, ಅದರಿಂದ ಕಾನೂನಾತ್ಮಕವಾಗಿ ಹಾಗೂ ರಾಜಕೀಯವಾಗಿ ಯಾವ ಪರಿಣಾಮ ಎದುರಿಸಬೇಕಾಗಬಹುದು ಮುಂತಾದವುಗಳ ಬಗ್ಗೆ ಸಲಹೆ, ಅಭಿಪ್ರಾಯ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ತಮ್ಮ ಬೆಂಬಲಿಗರು ಕ್ಯಾಪಿಟಲ್ಗೆ ನುಗ್ಗಿ ಹಿಂಸಾಚಾರ ನಡೆಸಿದ ಘಟನೆಗೆ ಪ್ರಚೋದನೆ ನೀಡಿದ್ದಕ್ಕಾಗಿ ಟ್ರಂಪ್ ಈ ವಿಚಾರವಾಗಿ ಕ್ಷಮಾದಾನಕ್ಕೆ ಮುಂದಾಗಿದ್ದಾರೆ ಎಂದೂ  ಹೇಳಲಾಗುತ್ತಿದೆ. ಇದುವರೆಗೂ ಅಮೆರಿಕ ಇತಿಹಾಸದಲ್ಲಿ ಯಾವ ಅಧ್ಯಕ್ಷರೂ ತಮಗೆ ತಾವೇ ಕ್ಷಮಾದಾನ ಕೊಟ್ಟುಕೊಂಡಿಲ್ಲ. ಈ ರೀತಿಯ ಪ್ರಕ್ರಿಯು ನ್ಯಾಯಾಂಗ ವ್ಯವಸ್ಥೆಯಲ್ಲಿ ಎಂದಿಗೂ ಪರೀಕ್ಷೆಗೆ ಒಳಪಟ್ಟಿಲ್ಲ ಮತ್ತು ಅದನ್ನು ಕೋರ್ಟ್ ಮಾನ್ಯ ಮಾಡಲಿಯೇ  ಎಂಬ ಬಗ್ಗೆ ಕಾನೂನು ತಜ್ಞರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ತಮ್ಮ ಆಡಳಿತಾವಧಿಯಲ್ಲಿ ನಡೆದ ತಪ್ಪುಗಳು, ಅಪರಾಧಗಳ ವಿರುದ್ಧ ಜೋ ಬೈಡನ್ ಹೊಸ  ಆಡಳಿತ  ತನಿಖೆ ನಡೆಸುವ ಭಯ ಇರುವ ಭಯದ ಕಾರಣ  ಟ್ರಂಪ್ ಅವರು ತಮ್ಮ ಪತ್ನಿ,  ಪುತ್ರರು ಕೆಲವು ನಿಕಟವರ್ತಿಗಳಿಗೆ ಕ್ಷಮಾದಾನ ನೀಡಲು ಮುಂದಾಗಿದ್ದಾರೆ ಎಂದೂ ಹೇಳಲಾಗಿದೆ.





ಸುದ್ದಿ ಓದಿ