ಅಂತರರಾಷ್ಟ್ರೀಯ

ವಿದಾಯದ ಭಾಷಣ, ಹೊಸ ಸರ್ಕಾರಕ್ಕೆ ಶುಭ ಕೋರಿದ ಟ್ರಂಪ್ ..

ವಿದಾಯದ ಭಾಷಣ, ಹೊಸ ಸರ್ಕಾರಕ್ಕೆ ಶುಭ ಕೋರಿದ ಟ್ರಂಪ್ ..

ವಾಷಿಂಗ್ಟನ್, ಜ 20:ಅಮೆರಿಕದ ನೂತನ ಅಧ್ಯಕ್ಷ ಜೋ ಬಿಡೆನ್  ಪ್ರಮಾಣವಚನಕ್ಕೆ ಕೆಲವೇ ಗಂಟೆಗಳು ಬಾಕಿಯಿದ್ದು,   ಅಮೆರಿಕದ 46ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಶ್ವೇತಭವನದಲ್ಲಿ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಇಂದು ಕೊನೆಯ ದಿನವಾಗಿದೆ. ಇದೇ ವೇಳೆ ಡೊನಾಲ್ಡ್ ಟ್ರಂಪ್ ವಿದಾಯದ ಭಾಷಣ ಮಾಡಿದ್ದು, ಮುಂದಿನ ಸರ್ಕಾರಕ್ಕೆ ಶುಭಕೋರಿ, ಅಮೆರಿಕ  ಜನರ ಆಸೆಗಳನ್ನು ಈಡೇರಿಸಲಿ ಎಂದೂ  ಹೇಳಿದ್ದಾರೆ.   ಕ್ಯಾಪಿಟಲ್ ಹಿಲ್  ಮೇಲಿನ ದಾಳಿ ಹಾಗೂ ಚೀನಾದ ಕೊರೋನ  ವೈರಸ್  ಹಾವಳಿ ವಿರುದ್ಧವೂ  ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ. ಅಮೆರಿಕದ 45 ನೇ  ಅಧ್ಯಕ್ಷರಾಗಿ ಅನೇಕ ಅಭಿವೃದ್ಧಿ ಪರ ಕೆಲಸ ಮಾಡಿದ್ದೇನೆ,  ಕ್ಯಾಪಿಟಲ್ ಮೇಲೆ ನಡೆದ ದಾಳಿಯಿಂದ  ಅಮೆರಿಕನ್ನರು ಭಯಭೀತರಾಗಿದ್ದಾರೆ  ಅದನ್ನು ಎಂದಿಗೂ ಸಹಿಸಲಾಗದು  ಎಂದೂ ಟ್ರಂಪ್ ಭಾಷಣದಲ್ಲಿ ಹೇಳಿರುವುದು ಅಚ್ಚರಿ ಬೆಳವಣಿಗೆಯಾಗಿದೆ. 



ಸುದ್ದಿ ಓದಿ