ಟೆಕ್ಸಾಸ್ ನಲ್ಲಿ ಗುಂಡಿನ ದಾಳಿ; ಓರ್ವ ಸಾವು, ನಾಲ್ವರಿಗೆ ಗಾಯ
ವಾಷಿಂಗ್ಟನ್, ಏ 9( ಸ್ಪಟ್ನಿಕ್) ಅಮೆರಿಕಾದ ಟೆಕ್ಸಾಸ್ ನ ಬ್ರಿಯಾನ್ ಉದ್ಯಮ ಪ್ರದೇಶದ ಬಳಿ ಬಂದೂಕುದಾರಿಯೊಬ್ಬ ಐವರ ಮೇಲೆ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಬ್ರಿಯಾನ್ ಪೊಲೀಸ್ ಇಲಾಖೆ ಮುಖ್ಯಸ್ಥ ಎರಿಕ್ ಬುಸ್ಕೆ ತಿಳಿಸಿದ್ದಾರೆ.ಗುಂಡಿನ ದಾಳಿಯಿಂದ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿರುವ ನಾಲ್ವರನ್ನು ಸೇಂಟ್ ಜೋಸೆಫ್ ಆಸ್ಪತ್ರೆಗೆ ಸಾಗಿಸಲಾಗಿದೆ.ಬಂದೂಕು ದಾರಿ ಅವರ ವಶದಲ್ಲಿದಲ್ಲಿದ್ದಿರಬಹುದು ಎಂದು ಶಂಕಿಸಿರುವ ಪೊಲೀಸ್ ಮುಖ್ಯಸ್ಥ ಬುಸ್ಕ್, ಆತ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಎಂದು ಕಂಡುಬರುತ್ತಿದೆ. ಗುಂಡಿನ ದಾಳಿಯ ಉದ್ದೇಶದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆಗಾಯಗೊಂಡಿರುವ ಎಲ್ಲರೂ ಸಂಸ್ಥೆಯ ಉದ್ಯೋಗಿಗಳು ಎಂಬುದನ್ನು ಈ ಹಂತದಲ್ಲಿ ದೃಢಪಡಿಸಲು ಸಾಧ್ಯವಿಲ್ಲಪ್ರಕರಣದ ತನಿಖೆಗೆ ನೆರವಾಗುವುದಾಗಿ ಎಫ್ ಬಿಐ ಮುಂದೆ ಬಂದಿದೆ ಎಂದು ಬುಸ್ಕ್ ದೃಢಪಡಿಸಿದ್ದಾರೆ.