ಇಂದು ರಾಜ್ಯಾದ್ಯಂತ ತೆರೆಗೆ ಸಸ್ಪೆನ್ಸ್, ಥ್ರಿಲ್ಲರ್‌ನ 'ಘಾರ್ಗಾ'
Suspenseful thriller 'Gharga' to hit screens across the state today
ಲೋಕದರ್ಶನ ವರದಿ
ಇಂದು ರಾಜ್ಯಾದ್ಯಂತ ತೆರೆಗೆ ಸಸ್ಪೆನ್ಸ್, ಥ್ರಿಲ್ಲರ್‌ನ 'ಘಾರ್ಗಾ'
ಅನಿಮೇಷನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಯುವ ಪ್ರತಿಭೆ ಎಂ. ಶಶಿಧರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ 'ಘಾರ್ಗಾ' ಸಿನಿಮಾ ಇಂದು (ಫೆ.6) ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ದಿ ಲ್ಯಾಂಡ್ ಆಫ್ ಶ್ಯಾಡೋ ಎಂಬ ಟ್ಯಾಗ್‌ಲೈನ್ ಅನ್ನು ಹೊಂದಿರುವ ಈ ಚಿತ್ರವನ್ನು ಯಶಶ್ವಿ ನಿರ್ಮಾಪಕ ಅಶ್ವಿನಿ ರಾಮ್‌ಪ್ರಸಾದ್ ನಿರ್ಮಾಣ ಮಾಡಿದ್ದಾರೆ. ಇವರ ಮಗ ಅರುಣ್ ರಾಮ್‌ಪ್ರಸಾದ್ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಘಾರ್ಗಾ ಒಂದು ಅಡ್ವೆಂಚರಸ್ ಡ್ರಾಮಾ, ಹಾರರ್ ಚಿತ್ರವಾಗಿದ್ದು, ಅರುಣ್ ಒಬ್ಬ ರೈಟರ್, ಸಂಶೋಧಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರದಲ್ಲಿ ಸಾಯಿಕುಮಾರ್ ಹಾಗೂ ನಾಯಕಿ ಪಾತ್ರದಲ್ಲಿ ರೆಹಾನ ಅಭಿನಯಿಸಿದ್ದಾರೆ.
ಇದೊಂದು ಕಾಲ್ಪನಿಕ ಕಥೆಯಾದರೂ ಸಾಹಸ, ಹಾರರ್, ಸಸ್ಪೆನ್ಸ್, ರೋಮಾಂಚನ ಮತ್ತು ಆಕ್ಷನ್‌ನಿಂದ ತುಂಬಿದೆ. ಚಿತ್ರವನ್ನು ಮಂಗಳೂರು, ಚಿಕ್ಕಮಗಳೂರು, ದಾಂಡೇಲಿ, ಆಗುಂಬೆ ಮತ್ತು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಈಗಾಗಲೇ ಚಿತ್ರದ ಟ್ರೇಲರ್, ಹಾಡುಗಳನ್ನು ಜನ ಇಷ್ಟ ಪಟ್ಟಿದ್ದು, ಸಿನಿಮಾ ಮೇಲಿನ ನೀರೀಕ್ಷೆ ಹೆಚ್ಚಾಗಿ. ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಚಿತ್ರಕ್ಕೆ ಸಪೋರ್ಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದಲ್ಲಿ ಬಳಸಲಾದ 'ಗಜ' ಚಿತ್ರದ 'ಬಂಗಾರಿ ಯಾರೇ ನೀ ಬುಲ್ ಬುಲ್...' ರಿಮಿಕ್ಸ್ ಹಾಡನ್ನು ತುಂಬಾ ಜನ ಇಷ್ಟ ಪಟ್ಟಿದ್ದಾರೆ. ಈ ಗೀತೆಯನ್ನು ದರ್ಶನ್ ಫ್ಯಾನ್ಸ್‌ಗೆ ಒಂದು ಸರ್ ಪ್ರೈಸ್ ಗಿಪ್ಟ್ ಆಗಿ ರೀಲೀಸ್ ಮಾಡಲಾಗಿತ್ತು.
ಈ ಚಿತ್ರವನ್ನು ಎನ್. ಕುಮಾರ್ ಅವರು ರೀಲೀಸ್ ಮಾಡುತ್ತಿದ್ದಾರೆ. ಹಾರರ್, ಸಸ್ಪೆನ್ಸ್, ಥಿಲ್ಲರ್, ಆಕ್ಷನ್ ಹೀಗೆ ಎಲ್ಲ ರೀತಿಯ ಮನರಂಜನಾತ್ಮಕ ಅಂಶಗಳೂ ಚಿತ್ರದಲ್ಲಿವೆ. ಎ.ಆರ್.ಸಿ ಮ್ಯೂಸಿಕ್ ಪ್ರೈವೆಟ್ ಲಿಮಿಟೆಡ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಗುರುಕಿರಣ್ ಮತ್ತು ಆರ್.ಪಿ ಪಟ್ನಾಯಕ್ ಸಂಗೀತ, ಗುರುಪ್ರಸಾದ್ ನಾರ್ನಾಡ್ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಮತ್ತು ಜಾಲಿ ಬಾಸ್ಟಿನ್ ಸಾಹಸ, ಸುಕುಮಾರ್ ಮತ್ತು ಶ್ರೀಹರಿ ಹಿನ್ನಲೆ ಸಂಗೀತವಿದೆ. ಚಿತ್ರದ ತಾರಾಗಣದಲ್ಲಿ ಅರುಣ್ ರಾಮಪ್ರಸಾದ್, ಸಾಯಿಕುಮಾರ್, ಸಂಪತ್ ರಾಜ್, ರಾಹುಲ್ ದೇವ್, ದೇವ್ ಗಿಲ್, ಶ್ರವಣ್ ರಾಘವೇಂದ್ರ, ಅರುಣ್ ಸಾಗರ್, ಮಿತ್ರ, ರಿಹಾನ್ನಾ ಮುಂತಾದವರು ಇದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 