ರೈತರಿಗೆ ಆದ್ಯತೆ ನೀಡುವ ಪಕ್ಷಕ್ಕೆ ಕಬ್ಬು ಬೆಳೆಗಾರರ ಸಂಘ ಬೆಂಬಲ
ಮುಂಡರಗಿ :ಕರ್ನಾಟಕ ರಾಜ್ಯದ ವಿಧಾನ ಸಭೆ ಚುನಾವಣೆಯ ಪ್ರಯುಕ್ತ ಮೇ.10 ರಂದು ಜರುಗುವ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದ ರೈತರ ಹಿತದೃಷ್ಠಿಯಿಂದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘವು ಚುನಾವಣಾ ಪ್ರಣಾಳಿಕೆ ರೈತರಿಗೆ ಒಪ್ಪಿಗೆಯಾಗುವಂತ ಪಕ್ಷಕ್ಕೆ ರೈತರು ಸಂಪೂರ್ಣ ಬೆಂಬಲ ನೀಡಲಾಗುವದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಗದಗ ಜಿಲ್ಲಾಧ್ಯಕ್ಷ ರವಿಕುಮಾರ ಕೋಳಲು ಹೇಳಿದ್ದಾರೆ.
ಪಟ್ಟಣದ ಪುರಸಭೆಯ ಉದ್ಯಾನವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ರೈತರ ಅಭಿವೃದ್ಧಿಗಾಗಿ ಹಾಗೂ ಕೃಷಿ ಪ್ರಗತಿಗಾಗಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟಗಳು ಚುನಾವಣಾ ಪ್ರಣಾಳಿಕೆಗಳನ್ನು ರೂಪಿಸಿಲಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಕಾಂಗ್ರೇಸ್ ಪಕ್ಷವು ರೈತ ಮುಖಂಡರ ಮುಖಾಮುಖಿ ಚರ್ಚೆಯಲ್ಲಿ ನಮ್ಮ ಪಕ್ಷದ ಹೈಕಮಾಂಡ ಜೊತೆ ಚರ್ಚಿಸಿ ಹೇಳುತ್ತೇವೆ. ಹಾಗೇ ಕಾಂಗ್ರೇಸ್ ಪಕ್ಷವು ಅಧಿಕಾರದಲ್ಲಿ ಇದ್ದಾಗೆಲ್ಲಾ ರೈತರ ಪರವಾದ ಯೋಜನೆ ರೂಪಿಸಿತ್ತಾ ಬಂದಿದೆ. ಮುಂದೆಯೂ ನಮ್ಮ ಕಾಂಗ್ರೆಸ್ ಪಕ್ಷವು ರೈತರ ಪರವಾದ ಯೋಜನೆಗೆ ಆಧ್ಯತೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಜೆಡಿಎಸ್ ಪಕ್ಷವು ರಾಜ್ಯದಲ್ಲಿ 2023 ರ ಚುನಾವಣೆಯಲ್ಲಿ ರಾಜ್ಯದ ಜನತೆ ಹಾಗೂ ರೈತರ ಸಮೂಹ ನಮಗೆ ಸಂಪೂರ್ಣ ಅಧಿಕಾರ ಕೊಟ್ಟರೆ, ಸಾಧ್ಯವಾದಷ್ಟು ರೈತರ ಪ್ರಣಾಳಿಕೆಯನ್ನು ಅನುಷ್ಠಾನಕ್ಕೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ. ಹಾಗೇ ಆಮ್ ಆದ್ಮಿ ಪಕ್ಷವವರು ಈಗಾಗಲೇ ಆಡಳಿತ ನಡೆಸುತ್ತಿರುವ ದೆಹಲಿ ಹಾಗೂ ಪಂಜಾಬ್ ರಾಜ್ಯದಲ್ಲಿ ಜಾರಿಗೆ ತಂದಿರುವ ಮಾದರಿಯಲ್ಲಿ ರಾಜ್ಯದ ಅಭಿವೃದ್ದಿಯೊಂದಿಗೆ ರೈತಪರವಾದ ನಿರ್ಣಯಗಳನ್ನು ಕೈಗೊಂಡಿದ್ದೇವೆ. ರೈತ ಸಂಘಟನೆಗಳು ನಮ್ಮ ಜೊತೆ ಕೈಜೋಡಿಸಿದರೆ, ಕರ್ನಾಟಕದಲ್ಲಿಯೂ ಕ್ರಾಂತಿಕಾರಕ ಬದಲಾವಣೆ ತರುತ್ತೇವೆ. ನಾವು ಸುಳ್ಳು ಭರವಸೆಗಳನ್ನು ನೀಡುವುದಿಲ್ಲ. ಆದರೆ ಆಡಳಿತದಲ್ಲಿರುವ ಬಿಜೆಪಿ ಪಕ್ಷಕ್ಕೆ ಆಹ್ವಾನ ನೀಡಿದರೂ ಸಭೆಗೆ ಹಾಜರಾಗದೇ ನಿರ್ಲಕ್ಷವಹಿಸಿರುವುದು ರೈತರಿಗೆ ಅಪಮಾನ ಮಾಡಿದ್ದಾರೆ. ಆದ್ದರಿಂದ ಮುಂಬರುವ ಮೇ.10 ರಂದು ನಡೆಯಲಿರುವ ರಾಜ್ಯ ವಿಧಾನ ಸಭೆಯ ಚುನಾವಣೆಯಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘವನ್ನು ನಿರ್ಲಕ್ಷದಿಂದ ಕಾಣುವ ಪಕ್ಷಕ್ಕೆ ಮುಂದಿನ ದಿನಮಾನದಲ್ಲಿ ನಾವು ತಕ್ಕ ಪಾಠವನ್ನು ಕಲಿಸುತ್ತೇವೆ.
ಹಾಗೂ ರೈತರ 39 ದಿನಗಳ ಹೋರಾಟದ ನಂತರ ಕಬ್ಬು ಹೆಚ್ಚುವರಿ 150 ರೂ.ಗಳನ್ನು ನಿಗದಿ ಮಾಡಿ ಆದೇಶವಾಗಿದ್ದರೂ, ನ್ಯಾಯಾಲಯದಲ್ಲಿ ತಡೆಯಾಜ್ಞೆಯನ್ನು ತಂದಾಗ, ಸರ್ಕಾರಿ ವಕೀಲರು ಸರ್ಕಾರದ ಆದೇಶ ಜಾರಿ ಮಾಡುವುದಿಲ್ಲ ಎಂದು ಹೇಳುತ್ತಾರೆ. ಈ ರೀತಿ ರೈತರಿಗೆ ದ್ರೋಹವೆಸಗುತ್ತಿದ್ದಾರೆ. ಆದ್ದರಿಂದ ರಾಜ್ಯದ ರೈತರ ಹಿತದೃಷ್ಟಿಯಿಂದ ಈ ಕೆಳಗಿನ ರೈತರ ಬೇಡಿಕೆಗಳ ಕುರಿತು ಪ್ರಣಾಳಿಕೆಯನ್ನು ಹೊರತರಲಾಗಿದೆ.
ಅವುಗಳೆಂದರೆ ರೈತರಿಗೆ ಕನಿಷ್ಟ ಆದಾಯ ಖಾತರಿ ಒದಗಿಸಬೇಕು, ಹಗಲು ವೇಳೆಯಲ್ಲಿ ಕೃಷಿ ಪಂಪಸೆಟ್ಗಳಿಗೆ 12 ಗಂಟೆಗಳ ನಿರಂತರ ವಿದ್ಯುತ್ ನೀಡುವ ಭರವಸೆ ಬೇಕು, ರೈತರ ಸಂಪೂರ್ಣ ಕ್ರಷಿ ಸಾಲ ಮನ್ನಾ ಆಗಬೇಕು ಹಾಗೂ ಕೃಷಿ ಸಾಲದ ನೀತಿ ಬದಲಾಗಬೇಕು, ದೇಶದ ಜನರ ಆಹಾರ ಉತ್ಪಾದನೆ ಮಾಡುವ ರೈತರಿಗೆ ಬಡ್ಡಿ ರಹಿತ ಕೃಷಿ ಸಾಲವನ್ನು ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನೀಡುವ ಯೋಜನೆ ಜಾರಿಯಾಗಬೇಕು. ಕೃಷಿ ಸಾಲಕ್ಕೆ ಸಿವಿಲ್ ಸ್ಕೋರ್ ಪರಿಗಣನೆ ಕೈ ಬಿಡುವ ಭರವಶ ನೀಡಬೇಕು. ಎಲ್ಲಾ ಕೃಷಿ ಉತ್ಪನ್ಗಳಿಗೆ ಕನಿಷ್ಟ ಬೆಂಬಲ ಬೆಲೆಯ ಖಾತರಿ ಶಾಸನ ಜಾರಿಗೆ ತರಬೇಕು. ಹಾಗೂ ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯಂತೆ ಕನಿಷ್ಟ ಬೆಂಬಲ ಬೆಲೆ ನಿಗದಿಯಾಗಬೇಕು.
ಅಲ್ಲದೇ ಫಸಲ್ ಭೀಮಾ ಬೆಳೆ ವಿಮೆ ಯೋಜನೆಯನ್ನು ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೆ ಅನ್ವಯವಾಗುವಂತೆ ತಿದ್ದುಪಡಿ ಮಾಡಬೇಕು, ಅಭಿವೃದ್ಧಿ ಹೆಸರಲ್ಲಿ ರೈತರ ಕೃಷಿ ಭೂಮಿ ಭೂಸ್ವಾದಿನ ಪ್ರಕ್ರೀಯ ನಿಲ್ಲಬೇಕು, ಅಗತ್ಯ ಸಂದರ್ಭದಲ್ಲಿ ರೈತರ ಅನುಮತಿ ಪಡೆಯುವದರೊಂದಿಗೆ ಅಂತಹ ರೈತರಿಗೆ ಜೀವನ ಭದ್ರತೆ ನೀಡಬೇಕು. ರೈತರು ಬೆಳೆಯುವ ಕಬ್ಬುನ ಬೆಳೆಗೆ ಎಫ್ ಆರ್.ಪಿ ದರ ನಿಗದಿ ಪಡಿಸಬೇಕು, ಹಾಗೇ ಕಬ್ಬು ಬೆಳೆಯ ಉತ್ಪಾದನೆಗೆ ಎನ್.ಆರ್.ಇ.ಜಿ. ಯೋಜನೆಗೆ ಸೇರಿಸಬೇಕು. ಕೃಷಿ ಉತ್ಪನ್ ಹಾಗೂ ಕೃಷಿ ಉಪಕರಣಗಳ ಮೇಲೆ ವಿಧೀಸಿರುವ ಜಿ.ಎಸ್.ಟಿ. ರದ್ದುಪಡಿಸಬೇಕು. ಸಾವಯವ ಉತ್ಪನ್ನಗಳ ಹಾಗೂ ಸಿರಿಧಾನ್ಯಗಳಿಗೆ ಪ್ರತ್ಯೇಕ ಮಾರುಕಟ್ಟೆ, ಹಾಗೂ ಹೆಚ್ಚುವರಿ ದರ ನಿಗದಿ ಯೋಜನೆ ಜಾರಿಗೆ ತರಬೇಕು.
ವಿದೇಶಿ ಬಹುರಾಷ್ಟ್ರೀಯ ಬಂಡವಾಳಶಾಹಿ ಕಂಪನಿಗಳ ಚಿಲ್ಲರೆ ಮಾರಾಟ ವ್ಯವಸ್ಥೆಗೆ ಕೃಷಿ ಕ್ಷೇತ್ರದಲ್ಲಿ ಹೂಡಿಕೆ ನಿಷೇಧಿಸಬೇಕು. ರಾಜ್ಯದಲ್ಲಿರುವ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕುಟುಂಬಸ್ಥರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬಾರದು. ರಾಜ್ಯದಲ್ಲಿ ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆಯನ್ನು ರದ್ದುಪಡಿಸುವ ಭರವಸೆೆ ನೀಡಬೇಕು. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ರೈತರ ಕೃಷಿ ಗಂಡು ಮಕ್ಕಳನ್ನು ಮದುವೆ ಆಗುವ ಶಿಕ್ಷಣ ಪಡೆದ ಹೆಣ್ಣು ಮಕ್ಕಳಿಗೆ ಸರಕಾರಿ ನೌಕರಿ ಹಾಗೂ ಕೆಲಸದಲ್ಲಿ ಮೀಸಲಾತಿ ನೀಡಬೇಕು. ಹೀಗೆ ಇನ್ನೂ ಅನೇಕ ರೈತರ ಬೇಡಿಕೆಗಳಿಗೆ ಸ್ಪಂಧಿಸುವಂತಹ ಪಕ್ಷಕ್ಕೆ ಮಾತ್ರ ರಾಜ್ಯದ ರೈತರು ಮತದಾನ ಮಾಡುವದರೊಂದಿಗೆ ಬೆಂಬಲ ನೀಡಲಾಗುವದು ಎಂದು ಹೇಳಿದರು.
ಈ ವೇಳೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಗದಗ ಜಿಲ್ಲಾ ಉಪಾಧ್ಯಕ್ಷ ಮಾಬುಸಾಬ ಬಳ್ಳಾರಿ, ಜಿಲ್ಲಾ ಕಾರ್ಯಾಧ್ಯಕ್ಷ ರಂಜಿತ ಮದ್ಯಪಾಟಿ, ಮುಂಡರಗಿ ತಾಲೂಕು ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ರಾಜಶೇಖರ ಕೊಂತೆಣ್ಣನವರ ಉಪಸ್ಥಿತರಿದ್ದರು.
7ಎಂಡಿಜಿ1 : ಮೇ.10 ರಂದು ಜರುಗುವ ಕರ್ನಾಟಕ ರಾಜ್ಯದ ವಿಧಾನ ಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದ ರೈತರ ಹಿತದೃಷ್ಠಿಯಿಂದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಗದಗ ಜಿಲ್ಲಾಧ್ಯಕ್ಷ ರವಿಕುಮಾರ ಕೊಳಲರವರ ನೇತೃತ್ವದಲ್ಲಿ ರೈತರ ಚುನಾವಣಾ ಪ್ರಣಾಳಿಕೆಯನ್ನು ಬಿತ್ತರಿಸಲಾಗಿದೆ.